ಸಿಂಗರ್ ವಿಜಯ್ ಪ್ರಕಾಶ್ ಆರಂಭಿಸಿದ್ರು ನೂತನ ಚಾಲೆಂಜ್! ಇದರಲ್ಲಿ ನೀವೂ ಭಾಗವಹಿಸಬಹುದು..

Vijay Prakash
Published on

ಬೆಂಗಳೂರು: ಕರೊನಾ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿರುವುದೊಂದೆ ಮದ್ದು. ಹಾಗಾಗಿ ಪಿಎಂ ಮೋದಿ 21 ದಿನಗಳ ಕಾಲ ಇಡೀ ದೇಶವೇ ಲಾಕ್ ಡೌನ್ ಆಗಿರಲಿದೆ ಎಂದು ನಿನ್ನೆಯಷ್ಟೇ ಆದೇಶ ಹೊರಡಿಸಿದ್ದಾರೆ.

ಲಾಕ್​ಡೌನ್​ ಅನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಒಂದಷ್ಟು ಸಿನಿಮಾ ಸೆಲೆಬ್ರಿಟಿಗಳು ಹೊಸ ಹೊಸ ಐಡಿಯಾ ಮೂಲಕ ತಮ್ಮ ಸಿನಿಮಾ ಅಭಿಮಾನಿಗಳನ್ನು ಎಚ್ಚರಗೊಳಿಸುತ್ತಿದ್ದಾರೆ. ಆ ಪೈಕಿ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹೊಸ ಚಾಲೆಂಜ್ ಸ್ವೀಕರಿಸಿದ್ದಾರೆ. ಅದನ್ನು ಖುದ್ದು ಮೋದಿ ಅವರಿಗೂ ಟ್ವಿಟರ್ ಮೂಲಕ ಟ್ಯಾಗ್ ಮಾಡಿದ್ದಾರೆ.

ಹಾಗಾದರೆ ಏನದು ಚಾಲೆಂಜ್ ? 21 ದಿನಗಳ ಕಾಲ ಮನೆಯಲ್ಲಿರುವುದನ್ನೇ ಚಾಲೆಂಜ್ ಆಗಿ ಸ್ವೀಕರಿಸಿ ಅದನ್ನು ಇನ್ನೂ 25 ಜನರಿಗೆ ಪಾಲಿಸುವಂತೆ ಕೋರಬೇಕು. ಆ 25 ಜನ ಚಾಲೆಂಜ್ ಸ್ವೀಕರಿಸಿ ಅವರವರ ಆಪ್ತರಿಗೆ ಚಾಲೆಂಜ್ ವರ್ಗಾವಣೆ ಮಾಡಬೇಕು. ಈ ಮೂಲಕ ಕರೊನಾ ಮಹಾಮಾರಿಯನ್ನು ಓಡಿಸಲು ಪಣ ತೊಡಬೇಕಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net