ಕ್ಯಾಚ್​ಗಳನ್ನು ಕೈಚೆಲ್ಲಿದೆ ನಮ್ಮ ಸೋಲಿಗೆ ಕಾರಣವಾಯಿತು; ಪಂಜಾಬ್​ ಸಹಾಯಕ ಕೋಚ್

Vidhwat Kaverappa
Published on

ಧರ್ಮಶಾಲಾ: ಇಲ್ಲಿನ ಹಿಮಾಚಲಪ್ರದೇಶ ಕ್ರಿಕೆಟ್​ ಅಸೋಸಿಯೇಷನ್​ ಮೈದಾನದಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳುರು ತಂಡವು ಪಂಜಾಬ್​ ಕಿಂಗ್ಸ್​ ವಿರುದ್ಧ 60 ರನ್​ಗಳ ಜಯ ಸಾಧಿಸಿದ್ದು, ಪಂಜಾಬ್​ ತಂಡವನ್ನು ಸೋಲಿಸುವ ಮೂಲಕ ಆರ್​ಸಿಬಿ ತನ್ನ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಮಹತ್ವದ ಪಂದ್ಯದಲ್ಲಿ ಸೋಲಿನ ಕುರಿತು ಮಾತನಾಡಿರುವ ಪಂಜಾಬ್​ ಕಿಂಗ್ಸ್ ತಂಡದ ಅಸಿಸ್ಟೆಂಟ್​ ಕೋಚ್​ ಬ್ರಾಡ್​ ಹ್ಯಾಡಿನ್​, ಕ್ಯಾಚಸ್​ ವಿನ್ಸ್​ ಮ್ಯಾಚಸ್​ ಎಂಬ ಪ್ರಸಿದ್ದ ನಾಣುಡಿಯನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

ನಾವು ಪಂದ್ಯವನ್ನು ಸೋಲಲು ಮುಖ್ಯ ಕಾರಣ ಕೈಬಿಟ್ಟ ಕ್ಯಾಚ್​ಗಳು ಎಂದು ಹೇಳಲು ಇಷ್ಟಪಡುತ್ತೇನೆ. ಕ್ಯಾಚ್​ ಕೈಚೆಲ್ಲಿದ ಬ್ಯಾಟ್ಸ್​ಮನ್​ಗಳಿಬ್ಬರು ದೊಡ್ಡ ಮೊತ್ತ ದಾಖಲಿಸಿದರು. ಅಲ್ಲಿಯೇ ನಾವು ಆಟವನ್ನು ಸೋತೆವು. ಪಂದ್ಯದಲ್ಲಿ ಸೋತಿರುವುದು ನಮಗೆ ಹೆಚ್ಚು ನಿರಾಸೆಯನ್ನುಂಟು ಮಾಡಿದೆ. ಐಪಿಎಲ್​ ಒಂದು ದೊಡ್ಡ ವೇದಿಕೆಯಾಗಿದ್ದು, ನಿಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಇದು ಉತ್ತಮ ಅವಕಾಶವಾಗಿದೆ.

ಉಳಿದ ಪಂದ್ಯಗಳನ್ನು ಆಟಗಾರರು ಉಳಿದ ಎರಡು ಪಂದ್ಯಗಳನ್ನು ಒಂದು ದೊಡ್ಡ ಅವಕಾಶವಾಗಿ ನೋಡಬೇಕು ಮತ್ತು ಅಭಿಯಾನವನ್ನು ಉತ್ತಮವಾಗಿ ಮುಗಿಸಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಪಂಜಾಬ್​ ಕಿಂಗ್ಸ್ ತಂಡದ ಅಸಿಸ್ಟೆಂಟ್​ ಕೋಚ್​ ಬ್ರಾಡ್​ ಹ್ಯಾಡಿನ್ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net