More

  ನಷ್ಟದಲ್ಲಿದ್ದ ಕಂಪನಿಯ ಲಾಭ ಈಗ 283% ಹೆಚ್ಚಳ: ಝೊಮ್ಯಾಟೊ ಷೇರುಗಳಿಗೆ ಬೇಡಿಕೆ, ಬೆಲೆ ಏರಿಕೆ

  ಮುಂಬೈ: ಝೊಮ್ಯಾಟೊ ಲಿಮಿಟೆಡ್​ (Zomato Ltd.) ಕಂಪನಿಯ ಷೇರುಗಳ ಬೆಲೆ ಗುರುವಾರ ಶೇಕಡಾ 3ರಷ್ಟು ಜಿಗಿದು 147.45 ರೂ. ತಲುಪಿತು. ಇದು ಈ ಷೇರಿನ 52 ವಾರಗಳ ಗರಿಷ್ಠ ಬೆಲೆಯಾಗಿದೆ.

  ಆನ್‌ಲೈನ್ ಆಹಾರ ವಿತರಣೆ ಕಂಪನಿಯಾದ ಝೊಮ್ಯಾಟೊ ಲಿಮಿಟೆಡ್ ಡಿಸೆಂಬರ್ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು 138 ಕೋಟಿ ರೂ. ಆಗಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು 34.7 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. ಈ ಬಾರಿಗೆ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಕಂಪನಿಯ ಲಾಭವು ಅಂದಾಜು 3 ಪಟ್ಟು ಹೆಚ್ಚಾಗಿದೆ (283%).

  ಡಿಸೆಂಬರ್ ತ್ರೈಮಾಸಿಕದಲ್ಲಿ 3288 ಕೋಟಿ ರೂ.ಗಳ ಕಾರ್ಯನಿರ್ವಹಣೆಯ ಆದಾಯವನ್ನು ಕಂಪನಿ ಗಳಿಸಿದೆ. ಕಳೆದ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ 1948 ಕೋಟಿ ರೂ. ಆದಾಯ ಇತ್ತು. ಆದಾಯ 69% ಹೆಚ್ಚಾಗಿದೆ.

  ವಿಶ್ವಕಪ್‌ನಲ್ಲಿ ಹೆಚ್ಚಿನ ಸಂಖ್ಯೆಯ ಆರ್ಡರ್‌ಗಳು: ಜೊಮ್ಯಾಟೊ ಒದಗಿಸಿದ ಮಾಹಿತಿಯ ಪ್ರಕಾರ, ಪುರುಷರ ಕ್ರಿಕೆಟ್ ವಿಶ್ವ ಕಪ್‌ನಲ್ಲಿ ರೆಸ್ಟೋರೆಂಟ್‌ಗಳಿಂದ ಹೆಚ್ಚಿನ ಆಹಾರ ಆರ್ಡರ್‌ಗಳು ದೊರೆತಿವೆ. ಅಕ್ಟೋಬರ್ 5 ಮತ್ತು ನವೆಂಬರ್ 19 ರ ನಡುವೆ ವಿಶ್ವಕಪ್ ನಡೆಯಿತು. ಇದಲ್ಲದೆ, ಹಬ್ಬ ಹರಿದಿನಗಳಲ್ಲಿ ಝೊಮಾಟೊಗೆ ಭಾರಿ ಬೇಡಿಕೆ ಇತ್ತು. ಇದರಿಂದ ಝೊಮ್ಯಾಟೊ ಹೆಚ್ಚಿನ ಆದಾಯ ಗಳಿಸಿದೆ.

  ಕಂಪನಿಯ ಲಾಭದ ಜಿಗಿತದ ನಂತರ, ಹೂಡಿಕೆದಾರರು ಜೊಮ್ಯಾಟೊ ಷೇರುಗಳ ಖರೀದಿಯಲ್ಲಿ ತೊಡಗಿದರು. ಹೀಗಾಗಿ ಝೊಮ್ಯಾಟೊ ಷೇರು ಬೆಲೆ ಅಂದಾಜು 3 ಪ್ರತಿಶತದಷ್ಟು ಜಿಗಿದು, 147.45 ರೂ.ಗೆ ತಲುಪಿವೆ. ಇದು 52 ವಾರಗಳ ಗರಿಷ್ಠ ಬೆಲೆಯಾಗಿದೆ. ಮಾರ್ಚ್ 2023 ರಲ್ಲಿ ಷೇರು ಬೆಲೆ 49 ರೂ.ಗೆ ಕುಸಿದಿತ್ತು. ಇದು ಈ ಷೇರುಗಳ 52 ವಾರಗಳ ಕನಿಷ್ಠ ಬೆಲೆಯಾಗಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ 1,25,437.19 ಕೋಟಿ ರೂ. ಇದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts