More

    ಸೂರ್ಯೋದಯ ಯೋಜನೆಯಿಂದ ಒಂದೇ ತಿಂಗಳಲ್ಲಿ ಷೇರು ಬೆಲೆ 60.20% ಏರಿಕೆ: ರೂ. 1100 ಕೋಟಿಯ ಆರ್ಡರ್​ ಪಡೆಯುತ್ತಿದ್ದಂತೆ ಗುರುವಾರ 10% ಹೆಚ್ಚಳ

    ಮುಂಬೈ: ಸೋಲಾರ್​ ಕಂಪನಿ ಷೇರುಗಳಿಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೇಡಿಕೆ ಬರುತ್ತಿದೆ. 1 ಕೋಟಿ ಮನೆಗಳ ಮೇಲ್ಛಾವಣಿಗಳಲ್ಲಿ ಸೌರ ವಿದ್ಯುತ್ ಉತ್ಪಾದಿಸುವ ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯನ್ನು ಬಜೆಟ್​ನಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ಸೋಲಾರ್​ ಕಂಪನಿ ಷೇರುಗಳು ಏರುಗತಿ ಪ್ರವೃತ್ತಿಯಲ್ಲಿವೆ.

    ಇದೇ ರೀತಿ ಸೋಲಾರ್ ಎನರ್ಜಿ ಕಂಪನಿಯಾದ ಎಸ್​ಜೆವಿಎನ್​ ಲಿಮಿಟೆಡ್ (SJVN Ltd) ಷೇರುಗಳು ಗುರುವಾರ ಸಾಕಷ್ಟು ಗಮನಸೆಳೆದವು. ಗುರುವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಈ ಷೇರುಗಳ ಬೆಲೆ ಶೇಕಡಾ 10 ಕ್ಕಿಂತ ಹೆಚ್ಚು ಏರಿಕೆ ಕಂಡಿತು. ನಂತರ ಸ್ಟಾಕ್‌ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿತು.

    ಸೂರ್ಯೋದಯ ಯೋಜನೆ ಮಾತ್ರವಲ್ಲದೆ, ಈ ಕಂಪನಿಯು ದೊಡ್ಡ ಆರ್ಡರ್​ ಪಡೆದುಕೊಂಡಿರುವುದು ಈ ಏರಿಕೆಗೆ ಕಾರಣವಾಯಿತು. ಗುಜರಾತ್ ಎನರ್ಜಿ ಡೆವಲಪ್‌ಮೆಂಟ್ ಏಜೆನ್ಸಿಯಿಂದ ಈ ಕಂಪನಿಯು ಆರ್ಡರ್ ಪಡೆದುಕೊಂಡಿದೆ.

    ಈ ಕಂಪನಿಯು ಸೌರಶಕ್ತಿ ಉತ್ಪನ್ನಗಳ ತಯಾರಿಕೆಗಾಗಿ 1100 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿ ಆದೇಶ ಸ್ವೀಕರಿಸಿದೆ. ಒಪ್ಪಂದದ ದಿನಾಂಕದ ನಂತರ 18 ತಿಂಗಳ ಅವಧಿಯಲ್ಲಿ ಯೋಜನೆಯು ಪ್ರಾರಂಭವಾಗುತ್ತದೆ. ಈ ಕುರಿತ ಒಪ್ಪಂದಕ್ಕೆ ಸೌರಶಕ್ತಿ ಕಂಪನಿ SJVN ಲಿಮಿಟೆಡ್ (SJVN ಲಿಮಿಟೆಡ್ ಷೇರು ಬೆಲೆ) ಮತ್ತು ಗುಜರಾತ್ ಎನರ್ಜಿ ಡೆವಲಪ್‌ಮೆಂಟ್ ಏಜೆನ್ಸಿ ಅಂದರೆ JUVNL ನಡುವೆ 25 ವರ್ಷಗಳ ಅವಧಿಗೆ ಸಹಿ ಮಾಡಲಾಗಿದೆ.

    ಈ ಯೋಜನೆ ಜಾರಿಯಾದ ನಂತರ 5,79,976 ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆಯಲ್ಲಿ ಇಳಿಕೆಯಾಗಲಿದೆ. ಇದು ಸರ್ಕಾರದ ಇಂಗಾಲದ ಹೊರಸೂಸುವಿಕೆ ಯೋಜನೆಗೆ ಸಹಾಯಕವಾಗಲಿದೆ.

    ಎಸ್​ಜೆವಿಎನ್​ ಕಂಪನಿಯು ಸೌರ, ಗಾಳಿ, ಜಲವಿದ್ಯುತ್ ಉತ್ಪಾದನೆ, ಸಲಹಾ ಮತ್ತು ಪ್ರಸರಣ ಕುರಿತ ವ್ಯಾಪಾರದಲ್ಲಿ ತೊಡಗಿದೆ. ಈ ಕಂಪನಿಯು ಹೈಡ್ರೋ ಪವರ್, ಥರ್ಮಲ್ ಪವರ್, ಪವರ್ ಟ್ರಾನ್ಸ್ಮಿಷನ್, ಪವನ ಶಕ್ತಿ, ಪವರ್ ಟ್ರೇಡಿಂಗ್ ಮತ್ತು ಕನ್ಸಲ್ಟೆನ್ಸಿಯಲ್ಲಿ ತೊಡಗಿಸಿಕೊಂಡಿದೆ.

    ಗುರುವಾರ ಈ ಕಂಪನಿಯ ಸ್ಟಾಕ್ ಬೆಲೆ 2.62% ಹೆಚ್ಚಳದ ನಂತರ ರೂ 150.75 ತಲುಪಿತು. ಐದು ದಿನಗಳ ಹಿಂದೆ ಫೆಬ್ರವರಿ 2 ರಂದು ಈ ಸ್ಟಾಕ್ ಬೆಲೆ 130.35 ರೂ. ಇತ್ತು. ಈಗ 15.65% ಹೆಚ್ಚಳದ ನಂತರ ರೂ 150.75 ತಲುಪಿತು.

    ಒಂದು ತಿಂಗಳ ಅವಧಿಯಲ್ಲಿ, ಈ ಸ್ಟಾಕ್ ಹೂಡಿಕೆದಾರರಿಗೆ ಪ್ರಚಂಡ ಆದಾಯವನ್ನು ಗಳಿಸಿತು. ಒಂದು ತಿಂಗಳ ಹಿಂದೆ ಜನವರಿ 9 ರಂದು, ಈ ಸ್ಟಾಕ್ ಬೆಲೆ ರೂ 94.10 ರಷ್ಟಿತ್ತು, ಅಲ್ಲಿಂದ ಇಲ್ಲಿಯವರೆಗೆ 60.20% ನಷ್ಟು ಹೆಚ್ಚಳವನ್ನು ದಾಖಲಿಸಿದೆ.

    ಆರ್​ಬಿಐ ಬಡ್ಡಿ ದರ ನೀತಿಗೆ ನೀರಸ ಪ್ರತಿಕ್ರಿಯೆ: ಷೇರು ಮಾರುಕಟ್ಟೆಯಲ್ಲಿ ಕರಡಿಯ ಕುಣಿತ

    84 ಪೈಸೆಯಿಂದ 415 ರೂಪಾಯಿ ತಲುಪಿದ ಷೇರುಗಳ ಮೇಲೆ ಈಗ ವಿದೇಶಿ ಹೂಡಿಕೆದಾರರ ಕಣ್ಣು: 5 ದಿನಗಳಿಂದ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಎಂಜಿನ್​ ತಯಾರಿಕೆ ಕಂಪನಿ ಷೇರು ಒಂದೇ ದಿನದಲ್ಲಿ 10% ಏರಿಕೆ: 11 ತಜ್ಞರು ಖರೀದಿಗೆ ಸಲಹೆ ನೀಡಿದ್ದೇಕೆ?

    ಬೆಂಗಳೂರಿನ ಕಂಪನಿಗೆ ಏರ್​ ಬಸ್​ ಆರ್ಡರ್​: ವಿಮಾನದ ಬಾಗಿಲು ತಯಾರಿಸುವ ಒಪ್ಪಂದವಾದ ತಕ್ಷಣವೇ ಷೇರು ಬೆಲೆ ಗಗನಕ್ಕೆ ಜಿಗಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts