More

    ಎಂಜಿನ್​ ತಯಾರಿಕೆ ಕಂಪನಿ ಷೇರು ಒಂದೇ ದಿನದಲ್ಲಿ 10% ಏರಿಕೆ: 11 ತಜ್ಞರು ಖರೀದಿಗೆ ಸಲಹೆ ನೀಡಿದ್ದೇಕೆ?

    ಮುಂಬೈ: ಕಮ್ಮಿನ್ಸ್ ಇಂಡಿಯಾ ಲಿಮಿಟೆಡ್​ ಕಂಪ್ರೆಸರ್‌ಗಳು, ಪಂಪ್‌ಗಳು ಮತ್ತು ಡೀಸೆಲ್ ಎಂಜಿನ್‌ಗಳನ್ನು ತಯಾರಿಸುವ ಕಂಪನಿಯಾಗಿದೆ. ಈ ಕಂಪನಿಯು ಡಿಸೆಂಬರ್ ತ್ರೈಮಾಸಿಕದ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯು ಭಾರಿ ಲಾಭ ಗಳಿಸಿದೆ. ಈ ಸುದ್ದಿಯ ಹಿನ್ನೆಲೆಯಲ್ಲಿ, ಕಮ್ಮಿನ್ಸ್ ಇಂಡಿಯಾ ಕಂಪನಿಯ ಷೇರುಗಳು ಗುರುವಾರ ಪ್ರಚಂಡ ಬೇಡಿಕೆ ಕಂಡವು. ಈ ಕಂಪನಿಯ ಷೇರುಗಳ ಬೆಲೆ ಶೇಕಡಾ 10 ರಷ್ಟು ಏರಿಕೆಯಾಗಿ 2,642.45 ರೂಪಾಯಿ ಮುಟ್ಟಿತು. ಇದು ಈ ಷೇರುಗಳ 52 ವಾರಗಳ ಗರಿಷ್ಠ ಬೆಲೆಯಾಗಿದೆ. ಈ ಷೇರಿನ 52 ವಾರದ ಕನಿಷ್ಠ ಬೆಲೆ 1,445 ರೂಪಾಯಿ ಆಗಿದೆ. ಕಳೆದ ಒಂದು ವರ್ಷದಲ್ಲಿ ಸ್ಟಾಕ್ ಬೆಲೆ 76 ಪ್ರತಿಶತದಷ್ಟು ಹೆಚ್ಚಾಗಿದೆ.

    ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ತನ್ನ ಅತ್ಯಧಿಕ ತ್ರೈಮಾಸಿಕ ಲಾಭವನ್ನು ಸಾಧಿಸಿದೆ. ಈ ತ್ರೈಮಾಸಿಕದಲ್ಲಿ ಲಾಭ 455 ಕೋಟಿ ರೂಪಾಯಿ ಲಾಭ ಮಾಡಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ರೂ 360 ಕೋಟಿ ರೂಪಾಯಿ ಲಾಭ ಮಾಡಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಶೇ. 26 ರಷ್ಟು ಹೆಚ್ಚಾಗಿದೆ. ಡಿಸೆಂಬರ್​ ತ್ರೈಮಾಸಿಕದಲ್ಲಿ ಅತ್ಯಧಿಕ ಆದಾಯ ಮಟ್ಟ ತಲುಪಿದ್ದು, 2,534 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಕಳೆದ ವರ್ಷದ ಮೂರನೇ ತ್ರೈಮಾಸಿಕದಲ್ಲಿ 2,181 ಕೋಟಿ ರೂಪಾಯಿ ಆದಾಯ ಇತ್ತು. ಇದಕ್ಕೆ ಹೋಲಿಸಿದರೆ ಈಗ ಶೇಕಡಾ 16.18 ರಷ್ಟು ಹೆಚ್ಚಳವಾಗಿದೆ.

    ಕಮ್ಮಿನ್ಸ್ ಇಂಡಿಯಾದ ತ್ರೈಮಾಸಿಕ ಫಲಿತಾಂಶಗಳ ಹಿನ್ನೆಲೆಯಲ್ಲಿ, ದೇಶೀಯ ಬ್ರೋಕರೇಜ್ ಸಂಸ್ಥೆ ಕೋಟಕ್ ಇನ್ಸ್ಟಿಟ್ಯೂಷನಲ್, ಈ ಕಂಪನಿಯ ಷೇರುಗಳ ಮೇಲೆ ಬಾಜಿ ಕಟ್ಟಲು ಸಲಹೆ ನೀಡಿದೆ. ಬ್ರೋಕರೇಜ್ ತನ್ನ ರೇಟಿಂಗ್ ಅನ್ನು ಷೇರುಗಳ ಮೇಲೆ 2,750 ರೂಪಾಯಿ ನಿಗದಿಪಡಿಸಿದೆ. ಈ ಕಂಪನಿಯ ಷೇರುಗಳನ್ನು ಖರೀದಿಸಲು 11 ಮಂದಿ ವಿಶ್ಲೇಷಕರು ರೇಟಿಂಗ್ ನೀಡಿದ್ದಾರೆ.

    ಬೆಂಗಳೂರಿನ ಕಂಪನಿಗೆ ಏರ್​ ಬಸ್​ ಆರ್ಡರ್​: ವಿಮಾನದ ಬಾಗಿಲು ತಯಾರಿಸುವ ಒಪ್ಪಂದವಾದ ತಕ್ಷಣವೇ ಷೇರು ಬೆಲೆ ಗಗನಕ್ಕೆ ಜಿಗಿತ

    3 ದಿನಗಳಲ್ಲಿ 40% ಏರಿಕೆ ಕಂಡ ಯೆಸ್​ ಬ್ಯಾಂಕ್​ ಷೇರು ಖರೀದಿಸಿದರೆ ಲಾಭ: 45 ರೂಪಾಯಿ ತಲುಪಲಿದೆ ಎಂಬುದು ತಜ್ಞರ ಲೆಕ್ಕಾಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts