More

    ಬೆಂಗಳೂರಿನ ಕಂಪನಿಗೆ ಏರ್​ ಬಸ್​ ಆರ್ಡರ್​: ವಿಮಾನದ ಬಾಗಿಲು ತಯಾರಿಸುವ ಒಪ್ಪಂದವಾದ ತಕ್ಷಣವೇ ಷೇರು ಬೆಲೆ ಗಗನಕ್ಕೆ ಜಿಗಿತ

    ಮುಂಬೈ: ಇಂಡಿಯಾ ಡೈನಾಮ್ಯಾಟಿಕ್​ ಟೆಕ್ನಾಲಜೀಸ್ (India Dynamatic Technologies) ಕಂಪನಿಯ ಷೇರುಗಳ ಬೆಲೆ ಗುರುವಾರ, ಫೆ. 8ರಂದು ಶೇಕಡಾ 10ರಷ್ಟು ಏರಿಕೆ ಕಂಡಿದೆ. ಈ ಕಂಪನಿಯ ಷೇರುಗಳ ಬೆಲೆ 7,780 ರೂ. ತಲುಪಿ, 52 ವಾರಗಳ ಹೊಸ ಗರಿಷ್ಠ ಮಟ್ಟವನ್ನು ಕೂಡ ಮುಟಟಿತು. ಬುಧವಾರದಂದು ಕಂಪನಿಯ ಷೇರುಗಳ ಬೆಲೆ 7,025 ರೂ. ಇತ್ತು. ಅಂದರೆ ಗುರುವಾರ ಒಂದೇ ದಿನದಲ್ಲಿ ಪ್ರತಿ ಷೇರಿಗೆ 755 ರೂಪಾಯಿ ಲಾಭ ದೊರೆತಿದೆ. ಡೈನಾಮಿಕ್ ಟೆಕ್ನಾಲಜೀಸ್‌ನ ಷೇರುಗಳ 52 ವಾರಗಳ ಕನಿಷ್ಠ ಬೆಲೆ 6,972.15 ರೂ. ಇದೆ.

    ಈ ಷೇರುಗಳ ಈ ಏರಿಕೆಯ ಹಿಂದೆ ದೊಡ್ಡ ಕಾರಣವಿದೆ. ಏರ್​ಬಸ್​ ತನ್ನ A220 ವಿಮಾನದ ಎಲ್ಲ ಬಾಗಿಲುಗಳನ್ನು ತಯಾರಿಸುವ ಗುತ್ತಿಗೆಯನ್ನು ಈ ಭಾರತೀಯ ಕಂಪನಿಗೆ ನೀಡಿದೆ. ‘ಮೇಕ್ ಇನ್ ಇಂಡಿಯಾ’ ಉಪಕ್ರಮದ ವಿಸ್ತರಣೆಗೆ ಇದು ಪ್ರಮುಖವೆಂದು ಪರಿಗಣಿಸಲಾಗಿದೆ.

    ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಇತರರ ಸಮ್ಮುಖದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಗಿದೆ. ಆದರೆ, ಈ ಒಪ್ಪಂದದಲ್ಲಿನ ಹಣಕಾಸು ವಿವರಗಳ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇದು ಭಾರತೀಯ ಏರೋನಾಟಿಕಲ್ ಉತ್ಪಾದನಾ ಕಂಪನಿಯ ಅತಿದೊಡ್ಡ ರಫ್ತು ಒಪ್ಪಂದಗಳಲ್ಲಿ ಒಂದಾಗಿದೆ. ಇದು ಭಾರತೀಯ ಪೂರೈಕೆದಾರರಿಗೆ ಏರ್‌ಬಸ್ ನೀಡಿದ ಡೋರ್-ಸಂಬಂಧಿತ ಒಪ್ಪಂದವಾಗಿದೆ. ಈ ಕಂಪನಿಯು A320 ವಿಮಾನಗಳ ‘ಬೃಹತ್’ ಮತ್ತು ‘ಸರಕು’ ಬಾಗಿಲುಗಳನ್ನು ತಯಾರಿಸುವ ಗುತ್ತಿಗೆಯನ್ನು ಪಡೆದುಕೊಂಡಿದೆ.

    ಡೈನಾಮಿಕ್ ಟೆಕ್ನಾಲಜೀಸ್ ಬೆಂಗಳೂರು ಮೂಲದ ಕಂಪನಿಯಾಗಿದೆ. ಈ ಕಂಪನಿಯು ಈಗಾಗಲೇ ಏರ್‌ಬಸ್ A330 ಮತ್ತು A320 ವಿಮಾನಗಳ ‘ಫ್ಲಾಪ್ ಟ್ರ್ಯಾಕ್ ಬೀಮ್’ ತಯಾರಿಕೆ ಮಾಡುತ್ತಿದೆ. ಈ ಕಂಪನಿಯ ಮಾರುಕಟ್ಟೆ ಮೌಲ್ಯ 5,21,582.82 ಲಕ್ಷ ಕೋಟಿ ರೂಪಾಯಿ.

    ಭಾರತವು ವಿಮಾನದ ಬಿಡಿಭಾಗಗಳ ಉತ್ಪಾದನಾ ಚಟುವಟಿಕೆಗಳಿಗೆ ಒಂದು ತಾಣವಾಗುತ್ತಿದೆ. ಭಾರತದಲ್ಲಿ ಹೂಡಿಕೆ ಮಾಡಲು ಏರ್‌ಬಸ್‌ಗೆ ಇದು ಸರಿಯಾದ ಸಮಯ ಎಂದು ಸಿಂಧಿಯಾ ಹೇಳಿದ್ದಾರೆ. ಏರ್​ಬಸ್​ ವಿಮಾನ ತಯಾರಕರು ದೇಶದಿಂದ ವಿಮಾನದ ಬಿಡಿಭಾಗಗಳ ತಯಾರಿಕೆಯನ್ನು 1.5 ಶತ ಕೋಟಿ ಡಾಲರ್​ ಹೆಚ್ಚಿಸುವ ಗುರಿಯನ್ನು ಹೊಂದಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts