More

    ಸರ್ಕಾರಗಳಿಂದ ಕಾರ್ಮಿಕರ ನಿರ್ಲಕ್ಷ್ಯ

    ಕನಕಗಿರಿ: ದೇಶದ ಪ್ರಗತಿಯಲ್ಲಿ ಕಾರ್ಮಿಕರ ಕೊಡುಗೆ ಅಪರವಾಗಿದ್ದು ಅವರ ತ್ಯಾಗ ಪರಿಶ್ರಮದಿಂದ ನಾವುಗಳು ಅನುಕೂಲಕರವಾಗಿರಲು ಸಾಧ್ಯವಾಗಿದೆ ಎಂದು ವಿದ್ಯಾರ್ಥಿ ಮುಖಂಡ ಶಿವಕುಮಾರ್ ಈಚನಾಳ ಹೇಳಿದರು.

    ತಾಲೂಕಿನ ಈಚನಾಳ ಗ್ರಾಮದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.

    ಇದನ್ನು ಓದಿ:ಕಾರ್ಮಿಕರ ಶ್ರಮ ಬಹು ದೊಡ್ಡದ್ದು

    ಕಟ್ಟಡ ಕೆಲಸದಿಂದ ಹಿಡಿದು ದೊಡ್ಡ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪರಿಶ್ರಮಕ್ಕೆ ತಕ್ಕ ಕೂಲಿ ಸಿಗುತ್ತಿಲ್ಲ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಇಲ್ಲದಂತಾಗಿದೆ. ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿರುವ ಅಂಗನವಾಡಿ ಪಂಚಾಯಿತಿ ನೌಕರರು, ಕಟ್ಟಡ ಕಾರ್ಮಿಕರು, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತರು, ಹಮಾಲರು, ಪೌರ ಕಾರ್ಮಿಕರು, ಆಟೋ ಚಾಲಕರು, ಹೊರಗುತ್ತಿಗೆ ಕಾರ್ಮಿಕರು ನಿರಂತರವಾಗಿ ಸೇವೆ ಸಲ್ಲಿಸುತ್ತಿದ್ದರೂ ಸರ್ಕಾರದಿಂದ ನಿರ್ಲಕ್ಷಕ್ಕೆ ಒಳಗಾಗಿದ್ದಾರೆ.

    ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ಸುಪ್ರೀಂ ಕೋರ್ಟ್ ತೀರ್ಪನ್ನು ಆಳುವ ಸರ್ಕಾರಗಳು ಜಾರಿ ಮಾಡದೆ ಕಾರ್ಮಿಕರನ್ನು ನಿರ್ಲಕ್ಷಿಸುತ್ತೇವೆ. ಅದಕ್ಕಾಗಿ ಕಾರ್ಮಿಕ ವರ್ಗಗಳೆಲ್ಲ ಒಗ್ಗಟ್ಟಾಗಿ ಧ್ವನಿ ಎತ್ತುವಂತಾಗಬೇಕು ಎಂದರು. ಕಾರ್ಮಿಕ ದಿನಾಚರಣೆ ನಿಮಿತ್ತ ಕಾರ್ಮಿಕರಿಂದ ಕೇಕ್ ಕತ್ತರಿಸಲಾಯಿತು.

    ಮುಖಂಡರಾದ ಶಾಮಣ್ಣ ಹೋಟೆಲ್, ದುರ್ಗಪ್ಪ, ವೆಂಕೋಬ, ರಾಜಪ್ಪ, ಶರಣಪ್ಪ, ಮಂಜಮ್ಮ, ನಿಂಗಮ್ಮ, ದುರ್ಗಮ್ಮ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts