More

  ಆರ್​ಬಿಐ ಬಡ್ಡಿ ದರ ನೀತಿಗೆ ನೀರಸ ಪ್ರತಿಕ್ರಿಯೆ: ಷೇರು ಮಾರುಕಟ್ಟೆಯಲ್ಲಿ ಕರಡಿಯ ಕುಣಿತ

  ಮುಂಬೈ: ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್‌ಬಿಐ) ವಿತ್ತೀಯ ನೀತಿ ನಿರ್ಧಾರದ ನಂತರ ಬಡ್ಡಿ ದರ ಕಡಿತದ ಸಮಯದ ಬಗ್ಗೆ ಹೆಚ್ಚಿದ ಅನಿಶ್ಚಿತತೆಯಿಂದಾಗಿ ಬೆಂಚ್‌ಮಾರ್ಕ್ ಸ್ಟಾಕ್ ಸೂಚ್ಯಂಕಗಳಾದ ಬಿಎಸ್​ಇ ಮತ್ತು ನಿಫ್ಟಿ ಗುರುವಾರ ಅಂದಾಜು ಶೇಕಡಾ 1 ರಷ್ಟು ಕುಸಿದವು.

  ಜಾಗತಿಕ ಅನಿಶ್ಚಿತತೆ ಮತ್ತು ಚಿಲ್ಲರೆ ಹಣದುಬ್ಬರವನ್ನು ಶೇಕಡಾ 4 ಕ್ಕೆ ಇಳಿಸುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಸತತ ಆರನೇ ಬಾರಿಗೆ ನೀತಿ ದರವನ್ನು ಯಥಾಸ್ಥಿತಿಯಲ್ಲಿ ಇರಿಸಲು ಆರ್‌ಬಿಐ ಹಣಕಾಸು ನೀತಿ ಸಮಿತಿ ಗುರುವಾರ ನಿರ್ಧರಿಸಿದೆ.

  ಗುರುವಾರದ ವಹಿವಾಟಿನಲ್ಲಿ ಬ್ಯಾಂಕಿಂಗ್ ಮತ್ತು ಆಟೋ ಷೇರುಗಳಲ್ಲಿ ಮಾರಾಟದ ಒತ್ತಡ ಕಂಡುಬಂದಿತು. 30-ಷೇರುಗಳ ಬಿಎಸ್‌ಇ ಸೂಚ್ಯಂಕ 723.57 ಅಂಕಗಳು ಅಥವಾ ಶೇಕಡಾ 1 ರಷ್ಟು ಕುಸಿದು 71,428.43 ಕ್ಕೆ ಸ್ಥಿರವಾಯಿತು. ಆರ್‌ಬಿಐ ವಿತ್ತೀಯ ನೀತಿಯ ಘೋಷಣೆಯ ನಂತರ ಇಂಟ್ರಾ ಡೇ ವಹಿವಾಟಿನಲ್ಲಿ ಸೂಚ್ಯಂಕವು 71,230.62 ರ ಕನಿಷ್ಠ ಮಟ್ಟಕ್ಕೆ ತಲುಪಿತ್ತು. ನಿಫ್ಟಿ ಸೂಚ್ಯಂಕವು 212.55 ಅಂಕಗಳು ಅಥವಾ ಶೇಕಡಾ 0.97 ಕಳೆದುಕೊಂಡು 21,717.95 ಕ್ಕೆ ಸ್ಥಿರವಾಯಿತು.

  ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು, ಆಟೋ, ರಿಯಾಲ್ಟಿ ಮತ್ತು ಸರಕುಗಳ ಷೇರುಗಳು ಮಾರಾಟದ ಒತ್ತಡದಲ್ಲಿ ಹಿನ್ನಡೆ ಕಂಡರೆ, ಇಂಧನ ಮತ್ತು ಐಟಿ ಷೇರುಗಳು ಲಾಭ ದಾಖಲಿಸಿದವು.

  ವಿತ್ತೀಯ ನೀತಿ ಸಮಿತಿಯ (ಎಂಪಿಸಿ) ನಿರ್ಧಾರವನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಪ್ರಸ್ತುತ ಮತ್ತು ವಿಕಸನಗೊಳ್ಳುತ್ತಿರುವ ಸ್ಥೂಲ ಆರ್ಥಿಕ ಪರಿಸ್ಥಿತಿಯ ಮೌಲ್ಯಮಾಪನದ ಆಧಾರದ ಮೇಲೆ ನೀತಿ ರೆಪೊ ದರವನ್ನು ಬದಯಿಸದೆ ಹಾಗೆಯೇ ಇರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

  ಐಟಿಸಿ, ಕೊಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ನೆಸ್ಲೆ, ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫೈನಾನ್ಸ್, ಮಾರುತಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಪ್ರಮುಖವಾಗಿ ನಷ್ಟ ಕಂಡವು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪವರ್ ಗ್ರಿಡ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಎಚ್‌ಸಿಎಲ್ ಟೆಕ್ನಾಲಜೀಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಲಾಭ ಗಳಿಸಿದವು.

  ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇಕಡಾ 0.44 ರಷ್ಟು ಕುಸಿದರೆ ಮಿಡ್‌ಕ್ಯಾಪ್ ಸೂಚ್ಯಂಕ ಶೇಕಡಾ 0.08 ರಷ್ಟು ಏರಿಕೆಯಾಯಿತು. ವಲಯವಾರು ಸೂಚ್ಯಂಕಗಳ ಪೈಕಿ, ಎಫ್‌ಎಂಸಿಜಿ ಶೇ. 2ರಷ್ಟು ಮತ್ತು ಬ್ಯಾಂಕೆಕ್ಸ್ ಶೇ.1.80ರಷ್ಟು ಕುಸಿಯಿತು. ಹಣಕಾಸು ಸೇವೆಗಳು (ಶೇ 1.46), ಸರಕುಗಳು (ಶೇ 1.13), ಆಟೋ (ಶೇ 0.94) ಮತ್ತು ರಿಯಾಲ್ಟಿ (ಶೇ 0.73) ವಲಯದ ಷೇರುಗಳ ಸಹ ಇಳಿಕೆಯಾದವು. ಇಂಧನ, ಐಟಿ, ದೂರಸಂಪರ್ಕ, ಉಪಯುಕ್ತತೆಗಳು ಮತ್ತು ಟೆಕ್ ವಲಯದ ಷೇರುಗಳು ಲಾಭ ಗಳಿಸಿದವು.

  ವಹಿವಾಟಿಗೆ ಒಳಗಾದ ಒಟ್ಟು ಷೇರುಗಳಲ್ಲಿ 2,204 ಷೇರುಗಳು ಕುಸಿತ ಕಂಡರೆ, 1,636 ಷೇರು ಲಾಭ ಕಂಡವು. 105 ಬದಲಾಗದೆ ಉಳಿದವು.

  ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್, ಟೋಕಿಯೊ ಮತ್ತು ಶಾಂಘೈ ಲಾಭ ಕಂಡರೆ, ಹಾಂಗ್ ಕಾಂಗ್ ಕುಸಿತ ಅನುಭವಿಸಿತು. ಐರೋಪ್ಯ ಮಾರುಕಟ್ಟೆಗಳು ಲಾಭದಲ್ಲಿ ವಹಿವಾಟು ನಡೆಸಿದವು. ಅಮೆರಿಕದ ಮಾರುಕಟ್ಟೆಗಳು ಬುಧವಾರ ಲಾಭ ದಾಖಲಿಸಿದವು.

  ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಬುಧವಾರ 1,691.02 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ. ಬಿಎಸ್‌ಇ ಬೆಂಚ್‌ಮಾರ್ಕ್ 34.09 ಅಂಕಗಳು ಅಥವಾ ಶೇಕಡಾ 0.05 ರಷ್ಟು ಕುಸಿದು ಬುಧವಾರ 72,152 ಕ್ಕೆ ಸ್ಥಿರವಾಗಿತ್ತು. ನಿಫ್ಟಿ ಸೂಚ್ಯಂಕವು 1.10 ಅಂಕ ಅಥವಾ 0.01 ರಷ್ಟು ಏರಿಕೆಯಾಗಿ 21,930.50 ಕ್ಕೆ ತಲುಪಿತ್ತು.

  84 ಪೈಸೆಯಿಂದ 415 ರೂಪಾಯಿ ತಲುಪಿದ ಷೇರುಗಳ ಮೇಲೆ ಈಗ ವಿದೇಶಿ ಹೂಡಿಕೆದಾರರ ಕಣ್ಣು: 5 ದಿನಗಳಿಂದ ಅಪ್ಪರ್​ ಸರ್ಕ್ಯೂಟ್​ ಹಿಟ್​

  ಎಂಜಿನ್​ ತಯಾರಿಕೆ ಕಂಪನಿ ಷೇರು ಒಂದೇ ದಿನದಲ್ಲಿ 10% ಏರಿಕೆ: 11 ತಜ್ಞರು ಖರೀದಿಗೆ ಸಲಹೆ ನೀಡಿದ್ದೇಕೆ?

  ಬೆಂಗಳೂರಿನ ಕಂಪನಿಗೆ ಏರ್​ ಬಸ್​ ಆರ್ಡರ್​: ವಿಮಾನದ ಬಾಗಿಲು ತಯಾರಿಸುವ ಒಪ್ಪಂದವಾದ ತಕ್ಷಣವೇ ಷೇರು ಬೆಲೆ ಗಗನಕ್ಕೆ ಜಿಗಿತ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts