

ಚಾಮರಾಜನಗರ: ನೋಡ ನೋಡುತ್ತಿದಂತೆಯೇ ನಡುರಸ್ತೆಯಲ್ಲೇ ಕಬ್ಬಿನ ಲಾರಿಯೊಂದು ಪಲ್ಟಿಯಾದ ಘಟನೆ ತಮಿಳುನಾಡಿನ ದಿಂಬಂ 23ನೇ ತಿರುವಿನಲ್ಲಿ ನಡೆದಿದೆ.
ಹೇವಿ ಲೋಡ್ನಿಂದಾಗಿ ಸ್ಟೇರಿಂಗ್ ಜಾಮ್ ಆಗಿ ರಸ್ತೆ ತಿರುವಿನಲ್ಲೇ ಲಾರಿ ಕೆಟ್ಟು ನಿಂತಿತ್ತು. ಏನು ಮಾಡಲಾಗದೆ ಲಾರಿಯಿಂದ ಡ್ರೈವರ್ ಮತ್ತು ಕ್ಲೀನರ್ ಕೆಳಗಿಳಿದಿದ್ದರು. ಇದಾದ ಕ್ಷಣಾರ್ಧದಲ್ಲೇ ಲಾರಿ ಪಲ್ಟಿಯಾಗಿದೆ.
ಲಾರಿಯಲ್ಲಿದ್ದ ಕಬ್ಬು ರಸ್ತೆಯಲ್ಲಿ ಚೆಲ್ಲಾ ಪಿಲ್ಲಿಯಾಗಿದ್ದು, ಅದೃಷ್ಟವಶಾತ್ ಡ್ರೈವರ್ ಮತ್ತು ಕ್ಲೀನರ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಅನೇಕ ಲಾರಿಗಳು ರಸ್ತೆಯಲ್ಲೇ ನಿಲ್ಲುವಂತಾಯಿತು. ಸ್ಥಳಕ್ಕೆ ತಮಿಳುನಾಡು ಪೊಲೀಸರು ಭೇಟಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)