More

    ನೋಡಲು ಚೀನಾ ಅಧ್ಯಕ್ಷರಂತೆ ಕಾಣುವ ಈ ವ್ಯಕ್ತಿಗೆ ಇದೆಂಥಾ ಶಿಕ್ಷೆ…!

    ಬೀಜಿಂಗ್​: ಒಬ್ಬರ ರೀತಿ ಏಳು ಮಂದಿ ಇರುತ್ತಾರೆ ಎಂಬುದನ್ನು ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಒಬ್ಬರಂತೆ ಇನ್ನೊಬ್ಬರು ಇರುವುದನ್ನು ನೋಡಿ ಅಚ್ಚರಿ ಪಡುವುದು ಸಾಮಾನ್ಯ. ಆದರೆ, ನನ್ನಂತೆಯೇ ಆತನಿದ್ದಾನೆ ಎಂದು ಶಿಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ? ಇದೇ ಹಾದಿಯನ್ನು ಚೀನಾ ತುಳಿದಿದೆ.

    ಹೌದು, ಚೀನಾದ ಹೆಸರಾಂತ ಒಪೆರಾ ಗಾಯಕರೊಬ್ಬರು ನೋಡಲು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ರಂತೆ ಕಾಣುವುದರಿಂದ ಅವರನ್ನು ದಿನನಿತ್ಯ ಸಾಮಾಜಿಕ ಜಾಲತಾಣದಲ್ಲಿ ಸೆನ್ಸಾರ್​ ಮಾಡಲಾಗುತ್ತಿದೆ.

    ಇದನ್ನೂ ಓದಿ: ಟಿಕ್‌ಟಾಕ್‌ ಬ್ಯಾನ್‌ ಬೆನ್ನಲ್ಲೇ ಚಿಗುರಿತು ‘ಚಿಂಗಾರಿ’: ಲಕ್ಷ ಲಕ್ಷ ಡೌನ್‌ಲೋಡ್‌

    ಲಿಯು ಕೆಕಿಂಗ್ (63) ಎಂಬುವರು ನೋಡಲು ಥೇಟ್​ ಕ್ಸಿ ಜಿನ್​ಪಿಂಗ್​ರಂತೆಯೇ ಇದ್ದಾರೆ. ಹೆಸರಾಂತ ಒಪೆರಾ ಗಾಯಕರಾಗಿರುವ ಇವರು ಚೀನಾದ ಟಿಕ್​ಟಾಕ್​ ರೀತಿಯ ಡೌಯಿನ್​ ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಂದಿದ್ದು, ಅನೇಕ ಬಾರಿ ಅವರ ಖಾತೆಯನ್ನು ಅಧಿಕಾರಿಗಳು ಬ್ಲಾಕ್​ ಮಾಡಿದ್ದಾರೆ. ಅಧ್ಯಕ್ಷರ ರೂಪವನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಧಿಕಾರಿಗಳು ಆಗಾಗ ಈ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರಂತೆ.

    ಚೀನಾ ಸರ್ಕಾರದ ಈ ನಡೆಗೆ ಕಿಡಿಕಾರಿರುವ ನೆಟ್ಟಿಗರು ಕ್ಸಿ ಜಿನ್​ಪಿಂಗ್ ಅವರ ಇಮೇಜ್​ ಅನ್ನು ರಕ್ಷಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

    ಅಂದಹಾಗೆ ಕ್ಸಿ ಜಿನ್​ಪಿಂಗ್​ರಂತೆ ಕಾಣುವ ಲಿಯು ಕೆಕಿಂಗ್ ಅವರು ಬರ್ಲಿನ್​ನಲ್ಲಿ ವಾಸವಿದ್ದಾರೆ.​ 2019 ರಿಂದ ಡೌಯಿನ್ ಖಾತೆಯಲ್ಲಿ ಸಕ್ರೀಯರಾಗಿರುವ ಕೆಕಿಂಗ್​, 41 ಸಾವಿರ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ವಿಲಕ್ಷಣವಾದ ಗಾಯನ ಟ್ಯುಟೋರಿಯಲ್ಸ್​ಗಳನ್ನು ಶೇರ್​ ಮಾಡುತ್ತಿರುತ್ತಾರೆ.

    ಇದನ್ನೂ ಓದಿ: ಪೊಲೀಸ್​ ಠಾಣೆಯಿಂದ ಮನೆಗೆ ಬಂದ ಕೂಡಲೇ ಯುವಕ ಆತ್ಮಹತ್ಯೆಗೆ ಶರಣಾಗಿದ್ದೇಕೆ?

    ಹೀಗೆ ಕಳೆದ ಮೇ 10ರಂದು ಕೆಕಿಂಗ್​ ಒಂದು ವಿಡಿಯೋವನ್ನು ಅಪ್​ಲೋಡ್​ ಮಾಡಿದ್ದರು. ಆದರೆ, ಇಮೇಜ್​ ಉಲ್ಲಂಘನೆಯಾಗಿದೆ ಎಂದು ಹೇಳಿ ವಿಡಿಯೋವನ್ನು ಸೆನ್ಸಾರ್​ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಮಾತನಾಡಿದ್ದ ಕೆಕಿಂಗ್​, ಆತ್ಮೀಯ ಸ್ನೇಹಿತರೇ ನನ್ನ ಡೌಯಿನ್​ ಖಾತೆಯ ಪ್ರೊಫೈಲ್​ ಫೋಟೋ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ನನ್ನ ಖಾತೆಯನ್ನು ಬ್ಯಾನ್​ ಮಾಡಲಾಗಿದೆ ಎಂದು ದೂರಿದ್ದರು.

    ಸದ್ಯ ನಾನು ನನ್ನ ಗುರುತಿನ ಮಾಹಿತಿಯನ್ನು ಡೌಯಿನ್​ ಆಡಳಿತ ಮಂಡಳಿಗೆ ಸಲ್ಲಿಸಿದ್ದು, ಅದರ ಅನುಮೋದನೆಗಾಗಿ ಕಾಯುತ್ತಿದ್ದೇನೆ. ಇಮೇಜ್​ ಉಲ್ಲಂಘನೆ ಆರೋಪದಲ್ಲಿ ಮೂರನೇ ಬಾರಿಗೆ ಖಾತೆಯನ್ನು ಬ್ಯಾನ್​ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.

    ಇದಕ್ಕೂ ಮುಂಚೆ ಮತ್ತೊಂದು ಡೌಯಿನ್​ ಖಾತೆಯನ್ನು ಕೆಕಿಂಗ್​ ತೆರೆದಿದ್ದರಂತೆ. ಆದರೆ, ಕೆಲವೇ ಕ್ಷಣಗಳಲ್ಲಿ ಅದನ್ನು ಡಿಲೀಟ್​ ಮಾಡಲಾಗಿತ್ತು. ಏಕೆಂದು ಕೇಳಿದಾಗ ಪ್ರೊಫೈಲ್​ ಫೋಟೋ ಕ್ಸಿ ಜಿನ್​ಪಿಂಗ್​ ರೀತಿ ಇದೆ. ಇದು ಇಮೇಜ್​ ಉಲ್ಲಂಘನೆ ಎಂದು ಸಬೂಬು ನೀಡಿದ್ದರಂತೆ. ಸದ್ಯ ಇತರೆ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಕೆಕಿಂಗ್​ ಸಕ್ರೀಯರಾಗಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ರಾಷ್ಟ್ರದಲ್ಲಿ ಮತ್ತೊಮ್ಮೆ ಲಾಕ್​ಡೌನ್​ ಜಾರಿ ಮಾಡಲ್ಲ: ಪ್ರಧಾನಿ ಮೋದಿ

    ಅನ್​ಲಾಕ್ 2.0 ಮಧ್ಯೆ ಸ್ವಯಂ ರಕ್ಷಣೆ ಅತ್ಯಗತ್ಯ: ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts