More

    ಟಿಕ್‌ಟಾಕ್‌ ಬ್ಯಾನ್‌ ಬೆನ್ನಲ್ಲೇ ಚಿಗುರಿತು ‘ಚಿಂಗಾರಿ’: ಲಕ್ಷ ಲಕ್ಷ ಡೌನ್‌ಲೋಡ್‌

    ನವದೆಹಲಿ: ಭಾರತ ಒಂದರಲ್ಲಿಯೇ ಲಕ್ಷಾಂತರ ಬಳಕೆದಾರರನ್ನು ಹೊಂದಿದ್ದ ಟಿಕ್‌ಟಾಕ್‌ ಇದೀಗ ಬ್ಯಾನ್‌ ಆಗಿದೆ. ಭಾರತದ ಜತೆ ವೈರತ್ವ ಕಟ್ಟುಕೊಂಡ ಚೀನಾದ ಈ ಆ್ಯಪ್‌ ಗೂಗಲ್‌ ಪ್ಲೇಸ್ಟೋರ್‌ನಿಂದಲೇ ತೆಗೆಯಲಾಗಿದೆ. ಈಗಾಗಲೇ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡವರೂ ಅದನ್ನು ಡಿಲೀಟ್‌ ಮಾಡಿದ್ದಾರೆ.

    ಇದರ ಬೆನ್ನಲ್ಲೇ ದೇಸಿ ಆ್ಯಪ್‌ ಚಿಂಗಾರಿ ಹಾಗೂ ಮಿತ್ರೋಗೆ ಭಾರಿ ಬೇಡಿಕೆ ಕುದುರಿದೆ. ಅದರಲ್ಲಿಯೂ ಚಿಂಗಾರಿ ಆ್ಯಪ್‌ ಗಂಟೆ ಗಂಟೆಗೂ ಲಕ್ಷ ಲಕ್ಷ ಡೌನ್‌ಲೋಡ್‌ ಆಗುತ್ತಿದೆ ಎನ್ನಲಾಗಿದೆ.

    ಬೆಂಗಳೂರಿನ ಸಿದ್ಧಾರ್ಥ್ ಗೌತಮ್ ಹಾಗೂ ಬಿಸ್ವಾತ್ಮ ನಾಯಕ್ ಎಂಬ ಯುವಕರು ತಯಾರಿಸಿರುವ ಚಿಂಗಾರಿ ಟಿಕ್‌ಟಾಕ್‌ ಆ್ಯಪ್‌ ಬ್ಯಾನ್‌ಗೂ ಮುಂಚೆಯೇ ಮೂರು ದಶಲಕ್ಷದಷ್ಟು ಡೌನ್‌ಲೋಡ್‌ ಕಂಡಿತ್ತು. ಭಾರತದ ವಿರುದ್ಧ ಚೀನಾ ಘರ್ಷಣೆಗೆ ಇಳಿದಾಗಲೇ ಚೀನಾ ಆ್ಯಪ್‌ ನಿಷೇಧದ ಕೂಗು ಜೋರಾಗುತ್ತಿದ್ದಂತೆಯೇ ಚಿಂಗಾರಿ ಚಿಗುರೊಡೆದಿತ್ತು. ಇದೀಗ ಅಧಿಕೃತವಾಗಿ ಟಿಕ್‌ಟಾಕ್‌ ಬ್ಯಾನ್‌ ಆಗಿರುವ ಕಾರಣ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಭಾರತದಲ್ಲಿ 59 ಆ್ಯಪ್‌ ನಿಷೇಧ- ಚೀನಾದ ಪ್ರತಿಕ್ರಿಯೆ ಏನು ಗೊತ್ತಾ?

    ಇದರ ನಂತರ ಮಿತ್ರೋ ಆ್ಯಪ್‌ ಕೂಡ ಬಹುಬೇಡಿಕೆ ಕುದುರಿಸಿಕೊಂಡಿದೆ. ಇದರ ಮೂಲ ಕೋಡಿಂಗ್‌ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಕೆಲವು ಕುತಂತ್ರಿಗಳು ಸುಳ್ಳುಸುದ್ದಿ ಹರಿಬಿಟ್ಟ ಹಿನ್ನೆಲೆಯಲ್ಲಿ ಅದನ್ನೇ ನಂಬಿಕೊಂಡ ಬಳಕೆದಾರರು ಈ ಆ್ಯಪ್‌ನತ್ತ ಅಷ್ಟು ಒಲವು ತೋರದಿರುವ ಕಾರಣ, ಇದರ ಡೌನ್‌ಲೋಡ್‌ ಸಂಖ್ಯೆ ಕಡಿಮೆಯಾಗಿತ್ತು. ನಂತರ ಈ ಸುದ್ದಿ ಸುಳ್ಳು ಎಂದು ತಿಳಿಯುತ್ತಲೇ ಅದರತ್ತವೂ ಗಮನ ಹರಿಸುತ್ತಿದ್ದಾರೆ.

    ಚಿಂಗಾರಿ ಆ್ಯಪ್‌ ಮೂಲಕ ವಿಡಿಯೋಗಳನ್ನು ಅಪ್‌ಲೋಡ್‌, ಡೌನ್‌ಲೋಡ್‌ ಮಾಡುವ ಅವಕಾಶವಿದೆ. ಅಷ್ಟೇ ಅಲ್ಲದೇ ಸಂವಾದ ನಡೆಸಬಹುದಾಗಿದೆ. ವಾಟ್ಸ್ ಆಪ್ ಮಾದರಿಯಲ್ಲೇ ಸ್ಟೇಟಸ್, ವಿಡಿಯೋ, ಆಡಿಯೋ ಕ್ಲಿಪ್, GIF ಸ್ಟಿಕರ್ ಗಳನ್ನು ಫೋಟೋಗಳನ್ನು ಹಂಚಿಕೊಳ್ಳಬಹುದಾಗಿದೆ. ಇದರಿಂದ ಇದರತ್ತ ಹೆಚ್ಚು ಮಂದಿ ಆಕರ್ಷಿತರಾಗುತ್ತಿದ್ದಾರೆ. ಮಾತ್ರವಲ್ಲದೇ, ಕನ್ನಡ, ಪಂಜಾಬಿ, ಮಲಯಾಳ, ಇಂಗ್ಲೀಷ್, ಹಿಂದಿ, ಬಾಂಗ್ಲಾ, ಗುಜರಾತಿ, ಮರಾಠಿ,ತಮಿಳು, ತೆಲುಗು ಭಾಷೆಗಳಲ್ಲಿ ಇದು ಲಭ್ಯವಿದೆ. (ಏಜೆನ್ಸೀಸ್‌)

    ರಾಯರ ಭಕ್ತರಿಗೆ ನಿರಾಸೆ: ಮಂತ್ರಾಲಯದ ಬಾಗಿಲು ಸದ್ಯಕ್ಕೆ ತೆರೆಯಲ್ಲ ಎಂದ ಆಡಳಿತ ಮಂಡಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts