More

    ಐಸಿಸಿಯಿಂದ ಟಿಕ್‌ಟಾಕ್ ಪ್ರಶಸ್ತಿ ಗೆದ್ದ ವಾರ್ನರ್! ಚಾಹಲ್‌ಗೂ ಪಾಲು ಕೊಡ್ತಾರಂತೆ!

    ಬೆಂಗಳೂರು: ಐಸಿಸಿ ಇತ್ತೀಚೆಗೆ ದಶಕದ ತಂಡಗಳನ್ನು ಹೆಸರಿಸಿದ್ದಲ್ಲದೆ, ದಶಕದ ಕ್ರಿಕೆಟಿಗ ಸಹಿತ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಆಸ್ಟ್ರೇಲಿಯಾದ ಎಡಗೈ ಆರಂಭಿಕ ಡೇವಿಡ್ ವಾರ್ನರ್ ಅವರಿಗೂ ವಿಶೇಷ ಪ್ರಶಸ್ತಿಯೊಂದು ಒಲಿದುಬಂದಿದೆ. ಆದರೆ ಇದು ಕ್ರಿಕೆಟ್ ಮೈದಾನದಲ್ಲಿನ ಸಾಧನೆಗಾಗಿ ಅಲ್ಲ. ಬದಲಾಗಿ ಅವರ ಟಿಕ್‌ಟಾಕ್ ವಿಡಿಯೋಗಳಿಗಾಗಿ! ಭಾರತದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಜತೆಗೆ ಈ ಪ್ರಶಸ್ತಿಯನ್ನು ಹಂಚಿಕೊಳ್ಳುವುದಾಗಿಯೂ ವಾರ್ನರ್ ತಿಳಿಸಿದ್ದಾರೆ!

    ತನ್ನನ್ನು ತಾನೇ ಟ್ರೋಲ್ ಮಾಡಿಕೊಳ್ಳುವ ಮೂಲಕ ವಾರ್ನರ್ ಅಣಕು ಪ್ರಶಸ್ತಿ ಸಂಭ್ರಮವನ್ನು ಇನ್‌ಸ್ಟಾಗ್ರಾಂನಲ್ಲಿ ಆಚರಿಸಿದ್ದಾರೆ. ಐಸಿಸಿ ದಶಕದ ಕ್ರಿಕೆಟಿಗರ ಪ್ರಶಸ್ತಿ ಪಟ್ಟಿ ಪ್ರಕಟಿಸಿದ ರೀತಿಯಲ್ಲೇ ತನ್ನ ಚಿತ್ರವನ್ನು ಪ್ರಕಟಿಸಿಕೊಂಡಿರುವ ವಾರ್ನರ್, ‘ಐಸಿಸಿಯ ದಶಕದ ಪುರುಷ ಟಿಕ್‌ಟಾಕರ್ ಪ್ರಶಸ್ತಿ ವಿಜೇತ ಡೇವಿಡ್ ವಾರ್ನರ್’ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಬಿಜೆಪಿಗೆ ಸೇರ್ಪಡೆಗೊಂಡ ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಎಲ್. ಶಿವರಾಮಕೃಷ್ಣನ್

    ಪೋಸ್ಟ್‌ನ ಜತೆಜತೆಯಲ್ಲೇ ವಾರ್ನರ್, ‘ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ನಾವಿಬ್ಬರೂ ಜಂಟಿ ವಿಜೇತರಾಗುವೆವು ಎಂದು ಭಾವಿಸಿದ್ದೆ ಯಜುವೇಂದ್ರ ಚಾಹಲ್’ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ಯಜುವೇಂದ್ರ ಚಾಹಲ್‌ರನ್ನು ಟ್ಯಾಗ್ ಮಾಡಿರುವ ವಾರ್ನರ್, ‘ಅಧಿಕೃತವಲ್ಲ’, ‘ತಮಾಷೆಗಾಗಿ’ ಮತ್ತು ‘ಬುಟ್ಟಾಬೊಮ್ಮಾ’ ಹ್ಯಾಷ್‌ಟ್ಯಾಗ್‌ಗಳನ್ನೂ ಬಳಸಿದ್ದಾರೆ.

    ವಾರ್ನರ್ ಅವರ ಪೋಸ್ಟ್‌ಗೆ ಚಾಹಲ್ ಪ್ರತಿಕ್ರಿಯೆಯನ್ನೂ ನೀಡಿದ್ದು, ‘ಇಲ್ಲ ಸರ್. ನೀವೇ ಅತ್ಯುತ್ತಮ’ ಎಂದು ಬರೆದುಕೊಂಡಿದ್ದಾರೆ. ಕರೊನಾ ಹಾವಳಿಯಿಂದಾಗಿ ಕ್ರಿಕೆಟ್ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದ್ದ ಸಮಯದಲ್ಲಿ ವಾರ್ನರ್, ಪತ್ನಿ ಮತ್ತು ಮಕ್ಕಳ ಜತೆಗೂಡಿ ವಿವಿಧ ಟಿಕ್‌ಟಾಕ್ ವಿಡಿಯೋಗಳನ್ನು ಪ್ರಕಟಿಸುವ ಮೂಲಕ ಗಮನಸೆಳೆದಿದ್ದರು. ಅದರಲ್ಲೂ ವಿಶೇಷವಾಗಿ ಭಾರತೀಯ ಅಭಿಮಾನಿಗಳ ಆಕರ್ಷಣೆ ಪಡೆದುಕೊಂಡಿದ್ದರು. ಮತ್ತೊಂದೆಡೆ ಚಾಹಲ್ ಕೂಡ ಲಾಕ್‌ಡೌನ್ ಸಮಯದಲ್ಲಿ ವಿವಿಧ ಟಿಕ್‌ಟಾಕ್ ವಿಡಿಯೋಗಳ ಮೂಲಕ ಗಮನಸೆಳೆದಿದ್ದರು.

    ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ವಾಪಸ್

    PHOTO | ನವವಿವಾಹಿತ ಚಾಹಲ್‌ಗೆ ದುಬೈನಲ್ಲಿ ಭರ್ಜರಿ ಔತಣ ನೀಡಿದ ಧೋನಿ ದಂಪತಿ

    ಯುವರಾಜ್ ಸಿಂಗ್ ಕ್ರಿಕೆಟ್‌ಗೆ ಮರಳದಂತೆ ತಡೆಯೊಡ್ಡಿದ ಬಿಸಿಸಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts