ರಸ್ತೆ ಪಕ್ಕ ನಿಂತಿದ್ದ ಕಾರಿನ ಮೇಲೇ ಮಗುಚಿ ಬಿದ್ದ ಲಾರಿ, ಕಾರಲ್ಲಿದ್ದ ವ್ಯಕ್ತಿ ಸಾವು..

Car Lorry
Published on

ಮಂಗಳೂರು: ಸಾವು ಹೇಗೆ, ಎಲ್ಲಿಂದ, ಯಾವ ರೀತಿಯಲ್ಲಿ ಬರುತ್ತದೆ ಎಂದು ಹೇಳುವುದು ಕಷ್ಟ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ. ರಸ್ತೆ ಪಕ್ಕ ನಿಂತಿದ್ದ ಕಾರೊಂದರ ಮೇಲೆ ಲಾರಿ ಮಗುಚಿ ಬಿದ್ದು, ಕಾರಿನಲ್ಲಿದ್ದ ವ್ಯಕ್ತಿ ಸಾವಿಗೀಡಾಗಿದ್ದಾರೆ.

ಉಡುಪಿ ಕಡೆಗೆ ಗೋಣಿ ಚೀಲಗಳನ್ನು ಹೊತ್ತು ಸಾಗುತ್ತಿದ್ದ ಲಾರಿ, ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಆಗ ಮಗುಚಿದ ಲಾರಿ ರಸ್ತೆ ಬಳಿ ನಿಂತಿದ್ದ ಒಮ್ನಿ ಕಾರಿನ ಮೇಲೇ ಬಿದ್ದಿದೆ. ಪರಿಣಾಮವಾಗಿ ಕಾರು ಲಾರಿಯಡಿಗೆ ಸಿಲುಕಿಕೊಂಡಿತ್ತು. ಲಾರಿಯಡಿಗೆ ಸಿಕ್ಕಿ ಅಪ್ಪಚ್ಚಿಯಾದ ಕಾರನ್ನು ತೆರವುಗೊಳಿಸಲು ಎರಡು ಕ್ರೇನ್​ಗಳನ್ನು ಬಳಸಲಾಗಿತ್ತು.

ಮಂಗಳೂರು ಹೊರವಲಯದ ಸುರತ್ಕಲ್ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಚಿತ್ರಾಪುರ ನಿವಾಸಿ ಲೋಕೇಶ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರೂ, ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net