Video | ಚಲಿಸುತ್ತಿದ್ದ ಕಾರಿನ ಮೇಲೇ ಬಿತ್ತು ಬೃಹತ್ ಕೊಂಬೆ; ಬೆಚ್ಚಿ ಬೀಳಿಸುವಂಥ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Car
Published on

ಚಿಕ್ಕಮಗಳೂರು: ಮಳೆಗಾಲದಲ್ಲಿ ಮನೆಯಿಂದ ಹೊರಗೆ ಹೋದರೆ ಯಾವಾಗ ಹೇಗೆ ಅಪಾಯ ಎದುರಾಗುತ್ತದೋ ಎಂದು ಹೇಳುವುದು ಕಷ್ಟ. ಈ ಮಾತಿಗೆ ಪೂರಕ ಎಂಬಂತೆ ಇಲ್ಲೊಂದು ಕಡೆ ಚಲಿಸುತ್ತಿದ್ದ ಕಾರಿನ ಮೇಲೇ ಸರಿಯಾಗಿ ಮರದ ಬೃಹತ್ ಕೊಂಬೆ ಮುರಿದು ಬಿದ್ದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳೇ ಮೂಡಿಗೆರೆಯ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಒಮ್ಮೆ ಬೆಚ್ಚಿಬೀಳಿಸುವಂತೆ ಮಾಡುವ ಈ ದೃಶ್ಯ ರಸ್ತೆ ಬದಿಯ ಮನೆಯೊಂದರಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಾರು ಬರುತ್ತಿದ್ದಂತೆ ದೊಡ್ಡದೊಂದು ಕೊಂಬೆ ಸರಿಯಾಗಿ ಅದರ ಬಾನೆಟ್​ ಮೇಲೆಯೇ ಬಿದ್ದಿದೆ. ಅದಾಗ್ಯೂ ಚಾಲಕ ತಕ್ಷಣ ಕಾರನ್ನು ನಿಯಂತ್ರಣಕ್ಕೆ ತಂದು ನಿಲ್ಲಿಸಿದ್ದರಿಂದ ಹೆಚ್ಚಿನ ಅಪಾಯ ತಪ್ಪಿದೆ. ಎಲ್ಲಕ್ಕಿಂತ ಹೆಚ್ಚು ಕಾರಿನಲ್ಲಿದ್ದವರೆಲ್ಲರೂ ಒಮ್ಮೆ ಆಘಾತಕ್ಕೆ ಒಳಗಾದರೂ ಯಾವುದೇ ಪವಾಡಸದೃಶ ಎಂಬಂತೆ ಸುರಕ್ಷಿತವಾಗಿ ಪಾರಾಗಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net