ಪಿಎಸ್​ಐ ನೇಮಕಾತಿ ಹಗರಣ; ಎಡಿಜಿಪಿ ಅಮೃತ್ ಪೌಲ್​ ಫಾರ್ಮ್​ಹೌಸ್​​ನಲ್ಲಿ ಪರಿಶೀಲನೆ..

ADGP Amrit Paul
Published on

ಚಿಕ್ಕಬಳ್ಳಾಪುರ: ಪಿಎಸ್​​ಐ ನೇಮಕಾತಿ ಹಗರಣ ಪ್ರಕರಣದಲ್ಲಿ ಸಿಕ್ಕಿಬಿದ್ದು ಬಂಧನಕ್ಕೆ ಒಳಗಾಗಿರುವ ಎಡಿಜಿಪಿ ಅಮೃತ್ ಪೌಲ್​ಗೆ ಸಂಬಂಧಿತ ತನಿಖೆ ಇದೀಗ ಅವರ ಫಾರ್ಮ್​ಹೌಸ್​​ವರೆಗೂ ತಲುಪಿದೆ. ಚಿಕ್ಕಬಳ್ಳಾಪುರದಲ್ಲಿರುವ ಅವರ ಫಾರ್ಮ್​ಹೌಸ್​ಗೆ ತೆರಳಿರುವ ಸಿಐಡಿ ಅಧಿಕಾರಿಗಳು ಅಲ್ಲಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ಹುಸಹುಡ್ಯಾ ಗ್ರಾಮದಲ್ಲಿ ಈ ಫಾರ್ಮ್​​ಹೌಸ್​ ಇದೆ. 234/4/, 247/2. 247/5 ಸೇರಿ ಒಟ್ಟು ಐದು ಸರ್ವೇ ನಂಬರ್​​ ಒಳಗೊಂಡಂಥ ಜಮೀನಲ್ಲಿ ಈ ಫಾರ್ಮ್​ಹೌಸ್​ ಇದ್ದು, ಸುಮಾರು ಐದು ಎಕರೆ ಪ್ರದೇಶವನ್ನು ಒಳಗೊಂಡಿದೆ ಎನ್ನಲಾಗಿದೆ.

ನೆಟರಾಮ್​ ಬನ್ಸಲ್ ಎಂಬವರ ಹೆಸರಿನಲ್ಲಿ ಫಾರ್ಮ್​​ಹೌಸ್​ ಇದ್ದು, ಬೇನಾಮಿ ಹೆಸರಿನಲ್ಲಿ ಕೃಷಿ ಜಮೀನು ಖರೀದಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಇನ್ನೂ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net