More

  ಲೋಕಸಭೆ ಚುನಾವಣೆ; ಪಶ್ಚಿಮ ಬಂಗಾಳದಲ್ಲಿ EVM, VVPAt ಅನ್ನು ಚರಂಡಿಗೆ ಎಸೆದ ದುಷ್ಕರ್ಮಿಗಳು

  ಕಲ್ಕತ್ತಾ: ದೇಶದಲ್ಲಿ ಸಾರ್ವತ್ರಿಕ ಚುನಾವಣೆ ಭರಾಟೆ ಜೋರಾಗಿದ್ದು, ಇಂದು (ಜೂನ್ 01) ಏಳನೇ ಹಂತದ ಮತದಾನ ನಡೆಯುತ್ತಿದೆ. ಏಳನೇ ಹಂತದಲ್ಲಿ ಒಟ್ಟು 57 ಲೋಕಸಭೆ ಕ್ಷೇತ್ರಗಳು ಒಳಪಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ, ಪಂಜಾಬ್​ ಸಿಎಂ ಭಗವಂತ್​ ಮಾನ್, ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಬಾಲಿವುಡ್​ ನಟಿ ಕಂಗನಾ ರಣಾವತ್​ ತಮ್ಮ ಹಕ್ಕು ಚಲಾಯಿಸಿದ್ದಾರೆ.

  ಸದಾ ಗದ್ದಲ ಹಾಗೂ ಗಲಭೆಗಳಿಂದಲೇ ಹೆಚ್ಚು ಅಪಖ್ಯಾತಿ ಪಡೆದಿರುವ ಪಶ್ಚಿಮ ಬಂಗಾಳದಲ್ಲಿ ದುಷ್ಕರ್ಮಿಗಳ ಗುಂಪೊಂದು ವೋಟಿಂಗ್​ ಮೆಷಿನ್​ ಹಅಗೂ ವಿವಿಪ್ಯಾಟ್​ಅನ್ನು ಚರಂಡಿಗೆ ಎಸೆದಿರುವ ಘಟನೆ ದಕ್ಷಿಣ 24 ಪರಗಣ ಜಿಲ್ಲೆಯ ಕುಲ್ತಾಲಿ ಮತಗಟ್ಟೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ.

  ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು, ಇಂದು (ಜೂನ್ 01) ಬೆಳಿಗ್ಗೆ 6.40ರ ಸುಮಾರಿಗೆ ಬೇನಿಮಾಧವಪುರ ಎಫ್‌ಪಿ ಶಾಲೆಯ ಬಳಿ ಸೆಕ್ಟರ್ ಆಫೀಸರ್‌ನ ಮೀಸಲು ಇವಿಎಂಗಳು ಮತ್ತು ಪೇಪರ್‌ಗಳನ್ನು, ಸ್ಥಳೀಯ ಜನರು ಲೂಟಿ ಮಾಡಿದ್ದಾರೆ. 2 VVPAT ಯಂತ್ರಗಳನ್ನು ಚರಂಡಿಗೆ ಎಸೆಯಲಾಗಿದೆ. ಸೆಕ್ಟರ್ ಅಧಿಕಾರಿ ಎಫ್‌ಐಆರ್ ದಾಖಲಿಸಿದ್ದಾರೆ. ಸೆಕ್ಟರ್‌ನ ಎಲ್ಲಾ ಆರು ಬೂತ್‌ಗಳಲ್ಲಿ ಹೊಸ ಇವಿಎಂ ಮತ್ತು ಪೇಪರ್‌ಗಳನ್ನು ಒದಗಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  See also  ಈ ರಾಶಿಯವರಿಗೆ ಇಂದು ದೀರ್ಘ ಪ್ರಯಾಣದ ವ್ಯವಹಾರದಲ್ಲಿ ಧನಲಾಭ: ನಿತ್ಯಭವಿಷ್ಯ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts