ರಾಜ್ಯದಲ್ಲಿ ಮತ್ತೆ 14 ದಿನ ಲಾಕ್​ಡೌನ್; ಜೂ. 7ರ ಬೆಳಗ್ಗೆ 6ರವರೆಗೂ ಕಠಿಣ ರೂಲ್ಸ್

lockdown
Published on

ಬೆಂಗಳೂರು: ರಾಜ್ಯದಲ್ಲಿ ಮಿತಿಮೀರಿರುವ ಕರೊನಾ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ತರುವ ಸಲುವಾಗಿ ಈಗಾಗಲೇ ವಿಧಿಸಲಾಗಿರುವ ಲಾಕ್​ಡೌನ್​ ಇನ್ನೆರಡು ದಿನಗಳಲ್ಲಿ ಮುಗಿಯಲಿದೆ. ಈ ನಡುವೆ ಇನ್ನೂ 14 ದಿನಗಳ ಕಾಲ ಲಾಕ್​ಡೌನ್​ ಮುಂದುವರಿಸಲಾಗಿದೆ. ಅಂದರೆ ಜೂ. 7ರ ಬೆಳಗ್ಗೆ 6 ಗಂಟೆಯವರೆಗೂ ರಾಜ್ಯದಲ್ಲಿ ಲಾಕ್​ಡೌನ್​ ಇರಲಿದೆ ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ತಿಳಿಸಿದ್ದಾರೆ.

ಈಗಾಗಲೇ ಇರುವ ಎಲ್ಲ ನಿರ್ಬಂಧ-ನಿಯಮಗಳೂ ಯಥಾಪ್ರಕಾರ ಮುಂದುವರಿಯಲಿವೆ. ಆದರೆ ಅವುಗಳನ್ನು ಹಿಂದಿನಕ್ಕಿಂತಲೂ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಈ ಹಿಂದೆ ವಿಧಿಸಲಾಗಿದ್ದ ಲಾಕ್​ಡೌನ್​ ಮೇ 24ಕ್ಕೆ ಮುಗಿಯಲಿದ್ದು, ಈಗ ಘೋಷಿಸಲಾಗಿರುವ ಲಾಕ್​ಡೌನ್​ ಮೇ 24ರಿಂದ ಜಾರಿಗೆ ಬರಲಿದ್ದು, ಜೂ. 7ರ ಬೆಳಗ್ಗೆ 6ರ ವರೆಗೂ ಅನ್ವಯಿಸಲಿದೆ. ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಈ ಕಠಿಣ ಕ್ರಮಜರುಗಿಸಲಾಗಿದ್ದು, ಜನತೆ ಈ ಹಿಂದಿನಂತೆಯೇ ಸಹಕರಿಸಬೇಕು ಹಾಗೂ ಎಲ್ಲ ನಿಯಮಗಳನ್ನು ಚಾಚೂತಪ್ಪದೆ ಪಾಲಿಸಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net