

ಗಾಜಿಯಾಬಾದ್: ದೇಶದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಮಳೆ ಸುರಿಯುತ್ತಿದ್ದರು ತಾಪಮಾನ ಹೆಚ್ಚಳದಿಂದಾಗಿ ಜನ ಬಳಲಿ ಬೆಂಡಾಗಿದ್ದಾರೆ. ಉತ್ತರ ಭಾರತದ ಹಲವೆಡೆ ತಾಪಮಾನ ಏರಿಕೆಯಿಂದಾಗಿ 100ಕ್ಕೂ ಹೆಚ್ಚು ಸಾವುಗಳಾಗಿದ್ದು, ಮನುಷ್ಯರನ್ನು ಹೊರತುಪಡಿಸಿ ಪ್ರಾಣಿಗಳು ಬಿಸಿಲಿಗೆ ಬಳಸುತ್ತಿವೆ.
ಇದೀಗ ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಬಿಸಿಲಿನ ಬೇಗೆ ತಾಳಲಾರದೆ ಕೋತಿಯೊಮದು ಮರದಿಂದ ಕೆಳಕ್ಕೆ ಬಿದ್ದಿದ್ದು, ಜನರು ಅದನ್ನು ಹಾರೈಕೆ ಮಾಡಿದ ರೀತಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು ಶ್ಲಾಘಿಸಿ ಕಮೆಂಟ್ ಹಾಕುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ನಿರ್ಜಲಿಕರಣದಿಂದ ಬಳಲಿದ್ದ್ ಕೋತಿಯೊಂದು ಪ್ರಜ್ಞೆ ತಪ್ಪಿ ಮರದಿಂದ ಕೆಳಗೆ ಬೀಳುತ್ತದೆ. ಇದನ್ನೂ ನೋಡಿದ ಸ್ಥಳೀಯರು ಕೂಡಲೇ ಅದಕ್ಕೆ ತಣ್ಣೀರಿನಿಂದ ಸ್ನಾನ ಮಾಡಿಸಿ ಹಾರೈಕೆ ಮಾಡುತ್ತಾರೆ. ಬಳಿಕ ಅದಕ್ಕೆ ORS (Oral Rehydration Solution) ಕುಡಿಸಿ ನಿರ್ಜಲಿಕರಣದಿಂದ ಬಳಲಿದ್ದ ಕೋತಿಯನ್ನು ಹಾರೈಕೆ ಮಾಡುವುದನ್ನು ನೋಡಬಹುದಾಗಿದೆ.
ಈ ಹೃದಯ ಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಜ್ಞೆ ತಪ್ಪಿ ಬಿದ್ದ ಕೋತಿಯನ್ನು ಜನರು ಹಾರೈಕೆ ಮಾಡುತ್ತಿರುವ ರೀತಿಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಬಳಿಕ ಮರು ಹೈಡ್ರೇಟ್ ಮಾಡಲು ಮಂಗಕ್ಕೆ ಓಆರ್ಎಸ್ ಕುಡಿಸಿದನ್ನು ಮೆಚ್ಚಿ ಕಮೆಂಟ್ ಹಾಕುತ್ತಿದ್ದಾರೆ.