

ಬೆಂಗಳೂರು: ಸದ್ಯ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಿಗೆ ತೆರೆ ಬಿದ್ದಿದ್ದು ಅಧಿಕೃತ ಘೋಷಣೆ ಇನ್ನೂ ಆಗಿಲ್ಲ. ಅದಕ್ಕೂ ಮೊದಲೇ ಸಚಿವ ಸ್ಥಾನಕ್ಕಾಗಿ ಲಾಬಿ ಶುರುವಾಗಿದೆ.
ಇತ್ತೀಚೆಗೆ, ಸುರ್ಜೇವಾಲ ಸೇರಿದಂತೆ ಇತರ ವರಿಷ್ಟರೂ ಇದ್ದ ಸಂಭಾವ್ಯ ಸಚಿರ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ಹೆಸರು ಇಲ್ಲದವರಿಂದ ಭಾರಿ ಲಾಬಿ ಶುರುವಾಗಿದೆ.
ಸಚಿವ ಸಂಪುಟ ಸೇರಲು ಅನುಭವದ ಆಧಾರದ ಮೇಲೆ ಕಸರತ್ತು ನಡೆಸಲು ಪಟ್ಟಿಯಲ್ಲಿ ಹೆಸರಿಲ್ಲದವರು ಪ್ರಯತ್ನಿಸುತ್ತಿದ್ದಾರೆ. ಎರಡು ಬಾರಿ ಸಚಿವರಾಗಿರುವ ಸಂತೋಷ್ ಲಾಡ್, ಹಿರಿಯರಾದ ಆರ್ ವಿ ದೇಶಪಾಂಡೆ, ಗೊಲ್ಲ ಸಮುದಾಯದ ಆಧಾರದ ಮೇಲೆ ನಾಗರಾಜ್ ಯಾದವ್, ಹಳೆ ಮೈಸೂರು ಲಿಂಗಾಯತ ಅಂಯ ತಿಪಟೂರು ಷಡಕ್ಷರಿ, ಪಂಚಮಸಾಲಿ ಹೋರಾಟದ ಆಧಾರದ ಮೇಲೆ ವಿಜಯಾನಂದ ಕಾಶಪ್ಪನವರ್, ಅಲ್ಪ ಸಂಖ್ಯಾತ ಕೋಟಾದಡಿ ನಝಿರ್ ಅಹಮದ್, ಸಲೀಂ ಅಹಮದ್, ಬಂಜಾರ ಸಮುದಾಯದಿಂದ ಪ್ರಕಾಶ್ ರಾಥೋಡ್ ಹಾಗೂ ಇತರರಿಂದ ಸಚಿವ ಸ್ಥಾನಕ್ಕಾಗಿ ಪ್ರಯತ್ನ ನಡೆಯುತ್ತಿದೆ.
ಈಗಾಗಲೇ 49 ಮಂದಿಯ ಹೆಸರನ್ನು ಹೈಕಮಾಂಡ್ ಶಾರ್ಟ್ ಲಿಸ್ಟ್ ಮಾಡಿದ್ದು ಇದು ಬಿಟ್ಟು ಸುಮಾರು 20ಕ್ಕೂ ಹೆಚ್ಚು ಆಕಾಂಕ್ಷಿಗಳು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದಾರೆ. ಈ ನಡುವೆ ಕನಿಷ್ಟ 10 ಶಾಸಕ ಹೊಸ ಮುಖಗಳಿಗೆ ಸಚಿವ ಸ್ಥಾನ ನೀಡುವಂತೆಯೂ ಒತ್ತಡ ತರಲಾಗುತ್ತಿದೆ. ಹೀಗಾಗಿ ಸಂಪುಟದಲ್ಲಿ ಅಚ್ಚರಿಯ ಹೆಸರುಗಳನ್ನು ಘೋಷಣೆ ಮಾಡುವ ಸಾಧ್ಯತೆ ಕೇಳಿಬರುತ್ತಿದೆ.