ನವದೆಹಲಿ: ಹೈದರಾಬಾದ್ ಬಿರಿಯಾನಿ ಸೇರಿದಂತೆ ಇತರೆ ಮೂರು ಭಾರತೀಯ ಖಾದ್ಯಗಳು ವಿಶ್ವದ ಟಾಪ್ 100 ರ ಖಾದ್ಯಗಳಲ್ಲಿ ಸ್ಥಾನ ಪಡಿದಿಕೊಂಡಿವೆ.
ಜಾಗತಿಕ ಪ್ರಯಾಣ ಮತ್ತು ಅಹಾರ ಮಾರ್ಗದರ್ಶಿಯಾದ ‘ಟೇಸ್ಟ್ ಅಟ್ಲಾಸ್’ ಎನ್ನುವ ವರದಿ ಈ 100ರ ಪಟ್ಟಿ ಬಿಡಿಗಡೆ ಮಾಡಿದೆ. ಭಾರತದ ಫೇಮಸ್ ಹೈದರಾಬಾದ್ ಬಿರಿಯಾನಿ ವಿಶ್ವದ 100ರ ಪಟ್ಟಿಯಲ್ಲಿ 31ನೇ ಸ್ಥಾನ ಪಡೆದಿದೆ. ಅದರಂತೆ ಇತರೆ ಖಾದ್ಯಗಳಾದ ಬಟರ್ ಚಿಕಾನ್ ಎಂದೇ ಖ್ಯಾತಿ ಪಡೆದಿರುವ ಮುರ್ಗ್ ಮಖಾನಿ, ಚಿಕನ್ 65 ಮತ್ತು ಕೀಮಾ ಕೂಡ ಪ್ರತಿಷ್ಠಿತ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ವರಿದಿಯಾಗಿದೆ.
ಟೇಸ್ಟ್ ಅಟ್ಲಾಸ್ 100ರ ಆಗ್ರ ಪಟ್ಟಿಯಲ್ಲಿ ಭಾರತೀಯ ಖಾದ್ಯಗಳ ಸ್ಥಾನ
1.ಮೂರ್ಗ್ ಮುಖಾನಿ(29ನೇ ಸ್ಥಾನ)
2.ಹೈದರಾಬಾದ್ ಬಿರಿಯಾನಿ(31ನೇ ಸ್ಥಾನ)
3.ಚಿಕನ್ 65(97ನೇ ಸ್ಥಾನ)
4.ಕೀಮಾ(100ನೇ ಸ್ಥಾನ)
ಇದನ್ನೂ ಓದಿ: ಪ್ರಯೋಗದ ಹೆಸರಿನಲ್ಲಿ ಎಡವಟ್ಟು ಮಾಡಿದ Drone Prathap; ಕಠಿಣ ಕ್ರಮ ಜರುಗಿಸುವಂತೆ ಕೇಳಿ ಬಂತು ಆಗ್ರಹ
ಹೈದರಾಬಾದ್ ಬಿರಿಯಾನಿ ಭಾರತದ್ಯಾಂತ ಪ್ರಸಿದ್ಧಿ ಪಡೆದಿದೆ. ಹೈದರಾಬಾದ್ ನಿಜಾಮರ ಆಳ್ವಿಕೆ ಕಾಲದಲ್ಲಿ ಆರಂಭವಾದ ಈ ಖಾದ್ಯ ಅಂದಿನ ರಾಜರಿಗೆ ಫೇವರೆಟ್ ಆಹಾರ ಎಂದು ಇತಿಹಾಸದ ಉಲ್ಲೇಖ. ಅಂದಿನಿಂದ ಇಂದಿನವರೆಗೂ ಬಿರಿಯಾನಿ ಖಾದ್ಯ ತಮ್ಮ ರುಚಿಯನ್ನು ಕಳೆದುಕೊಂಡಿಲ್ಲ. ಹೈದರಾಬಾದ್ ನಗರವೇ ಇಂದಿಗೂ ಬಿರಿಯಾನಿಗೆ ಪ್ರಸಿದ್ಧಿ ಪಡೆದಿದೆ. ನಗರದ ಪ್ರತಿ ಬಡವಾಣೆ ಮತ್ತು ಓಣಿ(ಸ್ಟ್ರೀಟ್)ಗಳಲ್ಲಿ ಕೂಡ ಬಿರಿಯಾನಿ ಸಿಗುತ್ತದೆ. ಇನ್ನು ಇದೀಗ, ವಿಶ್ವದ 100ರ ಆಗ್ರ ಪಟ್ಟಿಯಲ್ಲಿ ಭಾರತೀಯ 31ನೇ ಸ್ಥಾನ ಪಡೆಯುವ ಮೂಲಕ ವಿಶ್ವದ ಆಹಾರ ಪ್ರೀಯರ ಗಮನ ಸೆಳೆದಿದೆ.
ಬಿರಿಯಾನಿ ಮಾತ್ರವಲ್ಲ ಬಟರ್ ಚಿಕನ್, ಚಿಕನ್ 65 ಮತ್ತು ಕೀಮಾ ಕೂಡ ವಿಶ್ವದಲ್ಲಿ ಸ್ಥಾನ ಪಡೆಯುವ ಮೂಲಕ ಆಹಾರ ಪ್ರೀಯರ ಮನಗೆದ್ದಿವೆ,(ಏಜೆನ್ಸೀಸ್).
117 ಮೀ. ಎತ್ತರದಿಂದ ವಿಲ್ಚೇರ್ ಮೂಲಕ ಬಂಗೀ ಜಂಪ್! ಅಂಗವೈಫಲ್ಯವಿದ್ದರೂ ಇತಿಹಾಸ ಸೃಷ್ಠಿಸಿದ ಯೋಧ! |Bungee Jump