

ನವದೆಹಲಿ: ಇತ್ತೀಚೆಗೆ ನಡೆದ ಕೋಪಾ ಅಮೆರಿಕ ಫೈನಲ್ಸ್ನಲ್ಲಿ ಅರ್ಜೆಂಟೀನಾ ವಿಜಯ ಸಾಧಿಸಿದೆ. ಅದೇ ಖುಷಿಯಲ್ಲಿ ಅಲ್ಲಿನ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಇದ್ದಾರೆ. ಸದ್ಯ ಅರ್ಜೆಂಟೀನಾದಲ್ಲಿ ಅವರದ್ದೇ ಸುದ್ದಿ ಓಡಾಡುತ್ತಿದೆ. ಹೀಗಿರುವಾಗ ಭಾರತದಲ್ಲೂ ಮೆಸ್ಸಿ ವೈರಲ್ ಆಗಿದ್ದಾರೆ. ಅದು ಹೇಗೆ? ಏನು? ಎನ್ನುವುದು ಮುಂದಿದೆ ನೋಡಿ..
ಭಾರತದಲ್ಲಿ ಸಿಗರೇಟ್ನಂತೆಯೇ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಬಳಕೆಯಲ್ಲಿರುವುದು ಬೀಡಿ. ಪಶ್ಚಿಮ ಬಂಗಾಳದ ಧುಲಿಯನ್ ನ ಆರಿಫ್ ಬೀಡಿ ಕಾರ್ಖಾನೆಯಲ್ಲಿ ಬೀಡಿ ತಯಾರಿಕೆ ನಡೆಯುತ್ತಿದೆ. ಈ ಕಾರ್ಖಾನೆ ಇತ್ತೀಚೆಗೆ ತನ್ನ ಬೀಡಿ ಪ್ಯಾಕೆಟ್ನಲ್ಲಿ ಮೆಸ್ಸಿಯ ಫೋಟೋ ಹಾಕಿದೆ. ಅಷ್ಟೇ ಅಲ್ಲದೆ ಬೀಡಿ ಹೆಸರನ್ನೇ ಮೆಸ್ಸಿ ಬೀಡಿ ಎಂದು ನಮೂದಿಸಿದೆ. ಅದರ ಫೋಟೋಗಳನ್ನು ತೆಗೆದುಕೊಂಡಿರುವ ನೆಟ್ಟಿಗರು ಅದನ್ನು ಎಲ್ಲೆಡೆ ಹಾಕಿ ಟ್ರೋಲ್ ಮಾಡಲಾರಂಭಿಸಿದ್ದಾರೆ.
ವಿದೇಶಿ ಆಟಗಾರನ ಹೆಸರು ಮತ್ತು ಫೋಟೋ ಭಾರತದಲ್ಲಿ ಈ ರೀತಿ ಬಳಕೆಯಾಗಿರುವ ಬಗ್ಗೆ ಅನೇಕ ರೀತಿಯ ಚರ್ಚೆ ನಡೆಯುತ್ತಿದೆ. ಅವರೇನು ಈ ಬ್ರ್ಯಾಂಡ್ ನೋಡುವುದಿಲ್ಲ ಎಂದು ಈ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದು ಅನೇಕರು ಹೇಳುತ್ತಿದ್ದರೆ, ನಮ್ಮ ಭಾರತದಲ್ಲಿ ಮಾತ್ರ ಇಂತಹ ವಿಚಿತ್ರಗಳನ್ನು ನೋಡಲು ಸಾಧ್ಯ ಎಂದು ನೆಟ್ಟಿಗರು ಹೇಳಲಾರಂಭಿಸಿದ್ದಾರೆ. (ಏಜೆನ್ಸೀಸ್)