More

    ಕರೊನಾ ಲಸಿಕೆಯ ಎರಡೂ ಡೋಸ್ ಆಯ್ತು, ಇನ್ನೂ ಮಾಸ್ಕ್ ಹಾಕಿಕೊಳ್ಳಬೇಕಾ? ನಿಮ್ಮೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ

    ಬೆಂಗಳೂರು: ಕರೊನಾ ಲಸಿಕೆ ಈಗ ಎಲ್ಲೆಡೆ ಲಭ್ಯವಿದೆಯಾದರೂ ಅದನ್ನು ಪಡೆಯಲು ಸಣ್ಣದೊಂದು ಸಾಹಸವೇ ಮಾಡಬೇಕಾಗಿದೆ. ಕೋವಿನ್ ಆ್ಯಪ್​ನಲ್ಲಿ ರಿಜಿಸ್ಟರ್ ಆಗುವುದು, ಲಸಿಕೆಯ ಪಡೆಯುವ ದಿನಕ್ಕಾಗಿ ಕಾಯುವುದು, ಲಸಿಕಾ ಕೇಂದ್ರದ ಬಳಿ ಕ್ಯೂ ನಿಲ್ಲುವುದು ಹೀಗೆ ಅನೇಕ ಕೆಲಸಗಳು ಒಂದು ಲಸಿಕೆಗಾಗಿ ಮಾಡಬೇಕಾಗಿದೆ. ಎರಡೂ ಡೋಸೇಜ್​ ಲಸಿಕೆ ಪಡೆದ ಮೇಲೂ ನೀವು ಕರೊನಾದಿಂದ ಸುರಕ್ಷಿತರು ಎಂದು ಹೇಳಲಾಗದು. ಸಂಪೂರ್ಣ ಲಸಿಕೆ ಆದವರು ಮಾಸ್ಕ್ ಹಾಕಿಕೊಳ್ಳಬೇಕಾ? ಅವರಿಗೂ ಕರೊನಾ ಬರುತ್ತದೆಯಾ ಎನ್ನುವ ಅನೇಕ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಇರಬಹುದು. ಅದಕ್ಕೆಲ್ಲ ಉತ್ತರ ಇಲ್ಲಿದೆ ನೋಡಿ.

    ಸದ್ಯಕ್ಕೆ ಭಾರತದಲ್ಲಿ ಕರೊನಾದ ಎಲ್ಲ ಲಸಿಕೆಯೂ ಎರಡು ಡೋಸೇಜ್​ ಪಡೆಯಬೇಕಿದೆ. ಹಾಗಾಗಿ ಎರಡು ಡೋಸೇಜ್​ ಲಸಿಕೆ ಪಡೆದು ಎರಡು ವಾರಗಳ ನಂತರ ಅವರನ್ನು ಸಂಪೂರ್ಣ ಲಸಿಕೆ ಆದವರು (ಅಮೆರಿಕ ಸಿಡಿಸಿ ಪ್ರಕಾರ) ಎಂದು ಪರಿಗಣಿಸಲಾಗುತ್ತದೆ. ಅವರಿಗೆ ಕರೊನಾ ಬರುವುದೇ ಇಲ್ಲ ಅಥವಾ ಅವರಿಂದ ಬೇರೆಯವರಿಗೆ ಸೋಂಕು ಹರಡುವುದೇ ಇಲ್ಲ ಎಂದೇನಿಲ್ಲ. ಆದರೆ ಲಸಿಕೆ ಆಗದವರಿಗೆ ಹೋಲಿಸಿದರೆ ಸಂಪೂರ್ಣ ಲಸಿಕೆ ಆದವರಿಗೆ ಸೋಂಕು ಹರಡುವ ಪ್ರಮಾಣ ಕಡಿಮೆ ಎನ್ನಬಹುದಷ್ಟೇ.

    ಲಸಿಕೆ ಆಗಿದೆ, ಈಗೇಕೆ ಮಾಸ್ಕ್ ಹಾಕಬೇಕು ಎನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಅಮೆರಿಕದ ಸೆಂಟರ್ ಫಾರ್​ ಡಿಸೀಸ್ ಕಂಟ್ರೋಲ್ (ಸಿಡಿಸಿ) ಪ್ರಕಾರ ಎರಡೂ ಡೋಸ್ ಲಸಿಕೆ ಆದವರು ಮಾಸ್ಕ್ ಹಾಕುವ ಅಥವಾ ದೈಹಿಕ ಅಂತರ ಕಾಪಾಡಿಕೊಳ್ಳುವ ಅವಶ್ಯಕತೆ ಇಲ್ಲ. ಈಗಾಗಲೇ ಎಂಟು ದೇಶಗಳು ಮಾಸ್ಕ್ ನಿಯಮವನ್ನು ತೆಗೆದುಹಾಕಿವೆ ಕೂಡ. ಆದರೆ ಭಾರತದಲ್ಲಿ ಎರಡೂ ಡೋಸ್ ಲಸಿಕೆ ಆದವರ ಸಂಖ್ಯೆ ಕಡಿಮೆಯಿದೆ. ಆ ಕಾರಣದಿಂದಾಗಿ ಎಲ್ಲರಿಗೂ ಮಾಸ್ಕ್​ ಕಡ್ಡಾಯವೆಂಬ ನಿಯಮ ಇನ್ನೂ ಜಾರಿಯಲ್ಲಿದೆ. ಅದರಲ್ಲೂ ಲಸಿಕೆ ಪಡೆದವರಿಗೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದಾಗಿ ಮಾಸ್ಕ್​ ಬಳಕೆ ನಮಗೇ ಒಳ್ಳೆಯದು ಎನ್ನಬಹುದು.

    ಅಮೆರಿಕದ ಸಿಡಿಸಿ ಹೇಳುವಂತೆ, ಸಂಪೂರ್ಣ ಲಸಿಕೆ ಆದವರಿಗೆ ಕರೊನಾ ಲಕ್ಷಣಗಳಿಲ್ಲದಿದ್ದರೆ ಅವರು ಕರೊನಾ ಪರೀಕ್ಷೆ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಆದರೆ ಒಂದು ವೇಳೆ ಅವರಿಗೆ ಕರೊನಾ ದೃಢಪಟ್ಟರೆ ಅವರು ಸೋಂಕಿತರು ಪಾಲಿಸಬೇಕಾದ ಎಲ್ಲ ನಿಯಮ ಪಾಲಿಸುವುದು ಅತ್ಯವಶ್ಯಕ.

    ಸಂಪೂರ್ಣ ಲಸಿಕೆ ಆದವರಿಗೆ ಕರೊನಾ ಟೆಸ್ಟ್ ಮಾಡಿಸದಿದ್ದರೂ ದೇಶದೊಳಗೆ ಬರಲು ವಿದೇಶಗಳು ಅನುಮತಿ ನೀಡಿವೆ. ಹಾಗೂ ಬೇರೆ ದೇಶದಿಂದ ಬಂದವರು 14 ದಿನ ಕ್ವಾರಂಟೈನ್ ಆಗಬೇಕೆನ್ನುವ ನಿಯಮ ಸಂಪೂರ್ಣ ಲಸಿಕೆ ಆದವರಿಗೆ ಅನ್ವಯಿಸುವುದಿಲ್ಲ. (ಏಜೆನ್ಸೀಸ್)

    ‘ಮೂರನೇ ಅಲೆ ಎಚ್ಚರಿಕೆ ಹವಾಮಾನ ವರದಿಯಂತೆ ಎಂದುಕೊಂಡಿದ್ದಾರೆ’ ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ

    ದಿವ್ಯಾಗೆ ಪೆಟ್ಟಾದರೆ ಅರವಿಂದ್ ಧ್ವನಿ ನಡುಗತ್ತೆ; ಕೆಪಿಗೆ ಸಮಾಧಾನ ಮಾಡಿದ ಡಿಯು

    ಎರಡೇ ದಿನಗಳಲ್ಲಿ 50 ಬಾರಿ ಟ್ರಾಫಿಕ್ ನಿಯಮ ಮುರಿದ ಕಾರು! ಡ್ರೈವರ್​ ಸಿಕ್ಕಾಗ ಬಯಲಾಗಿದ್ದು ಬೇರೆಯದ್ದೇ ಕಥೆ

    ಅಜ್ಜಿಯ ಬಾಲ್ಯದ ಕನಸನ್ನ ನನಸಾಗಿಸಿದ ಮೊಮ್ಮಗಳು; ಖುಷಿಯಿಂದ ಕಣ್ಣೀರಿಟ್ಟ ಅಜ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts