ದಿವ್ಯಾಗೆ ಪೆಟ್ಟಾದರೆ ಅರವಿಂದ್ ಧ್ವನಿ ನಡುಗತ್ತೆ; ಕೆಪಿಗೆ ಸಮಾಧಾನ ಮಾಡಿದ ಡಿಯು

divya
Published on

ಬೆಂಗಳೂರು: ಬಿಗ್​ಬಾಸ್ ಸೀಸನ್ 8ರ ಸೆಕೆಂಡ್​ ಇನ್ನಿಂಗ್ಸ್​ ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸದ್ಯ ಅರವಿಂದ್ (ಮನೆಯಲ್ಲಿ ಎಲ್ಲರೂ ಅವರಿಗೆ ಕೆಪಿ ಎಂದು ಕರೆಯುತ್ತಾರೆ) ಮನೆಯ ಕ್ಯಾಪ್ಟನ್ ಆಗಿದ್ದು, ರಘು ಸೇವ್ ಮಾಡಿರುವ ಶಮಂತ್ ಹೊರೆತುಪಡಿಸಿ ಬೇರೆಲ್ಲ ಸದಸ್ಯರು ನಾಮಿನೇಟ್ ಆಗಿದ್ದಾರೆ. ನಾಮಿನೇಶನ್​ನಿಂದ ಬಚಾವಾಗಲೆಂದು ಟಾಸ್ಕ್​ ಅನ್ನು ಬಿಗ್​ಬಾಸ್ ಕೊಟ್ಟಿದ್ದು, ಅದರಲ್ಲಿ ದಿವ್ಯಾ ಉರುಡುಗ ಪೆಟ್ಟು ಮಾಡಿಕೊಂಡಿದ್ದಾರೆ.

ದಂಡ ಯಾತ್ರೆ ಟಾಸ್ಕ್​ನ ಭಾಗವಾಗಿ ಹೀಗೂ ಅಂಟೆ ಟಾಸ್ಕ್​ ಅನ್ನು ನೀಡಲಾಗಿತ್ತು. ಅದರ ಅನುಸಾರ ಎರಡು ತಂಡಗಳಲ್ಲಿ ಒಬ್ಬೊಬ್ಬರು ಜಾಕೆಟ್ ಧರಿಸಬೇಕು ಹಾಗೂ ಅದಕ್ಕೆ ಇನ್ನೊಂದು ತಂಡದವರು ಸ್ಟಾರ್ ಅನ್ನು ಅಂಟಿಸಬೇಕು. ಮಂಜು ತಂಡದಿಂದ ದಿವ್ಯಾ ಉರುಡಗ ಜಾಕೆಟ್ ತೊಟ್ಟಿದ್ದಾಗ ಆಕೆಯನ್ನು ಚಕ್ರವರ್ತಿ ಚಂದ್ರಚೂಡ್ ರಕ್ಷಿಸಲು ಹೋಗಿದ್ದು, ದಿವ್ಯಾ ಗ್ಲಾಸ್​ಗೆ ಕೈ ಹೊಡೆಸಿಕೊಂಡಿದ್ದಾರೆ. ಕೈನಲ್ಲಿ ರಕ್ತವೂ ಬಂದಿದೆ. ತಕ್ಷಣ ಅವರನ್ನು ಕನ್ಫೆಶನ್​ ರೂಂಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಈ ಸಮಯದಲ್ಲಿ ಅರವಿಂದ್ ಬೇಸರವಾಗಿ ಕುಳಿತಿದ್ದರು.

ದಿವ್ಯಾ ಕನ್ಫೆಶನ್ ರೂಂನಿಂದ ಹೊರಬರುತ್ತಿದ್ದಂತೆ ಬೇಸರದಲ್ಲಿದ್ದ ಅರವಿಂದ್​ಗೆ ಸಮಾಧಾನ ಮಾಡಿದ್ದಾರೆ. ನನಗೆ ಪೆಟ್ಟಾಗಿದ್ದಕ್ಕೆ ಅತ್ರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಇಲ್ಲ ಎಂದು ಅರವಿಂದ್ ಹೇಳಿದಾಗ, ನಿಮ್ಮ ವಾಯ್ಸ್​ನಲ್ಲೇ ಗೊತ್ತಾಗ್ತಿದೆ ಎಂದು ಆಕೆ ಹೇಳಿದ್ದಾರೆ. ಆಮೇಲೆ ಮನೆ ಮಂದಿಯೊಂದಿಗೆ ಕುಳಿತು ಚರ್ಚೆ ನಡೆಸುವಾಗ ನನಗೆ ಅರವಿಂದ್ ಅವರ 10 ಸೆಕೆಂಡ್ ವಾಯ್ಸ್​ನಲ್ಲಿ ನಡುಕ ಕೇಳಿಸ್ತು ಎಂದು ಹೇಳಿದ್ದಾರೆ. ಆಗ ಅರವಿಂದ್ ಹೌದು ಎಂದು ಹೇಳಿ ಕಣ್ಣಲ್ಲಿ ನೀರು ತುಂಬಿಕೊಂಡಿದ್ದಾರೆ. ಆಗ ದಿವ್ಯಾ ಅವರನ್ನು ತಬ್ಬಿಕೊಂಡು ಸಮಾಧಾನ ಮಾಡಿದ್ದಾಳೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net