ಅಮ್ಮನ ಮಧ್ಯಾಹ್ನದ ನಿದ್ದೆಗೆಡಸುತ್ತಿರುವ ಸಿಂಹದ ಮರಿಯ ಚಿನ್ನಾಟ ನಗೆ ಮೂಡಿಸದಿರದು...

lion
Published on

ನವದೆಹಲಿ: ಅಮ್ಮ ಅಂದರೆ ಎಲ್ಲರಿಗೂ ಅಷ್ಟೇ. ತುಂಬಾ ಪ್ರೀತಿ. ಅದರಲ್ಲೂ ಎಳೆಯ ಮಕ್ಕಳಿಗೆ ಅಮ್ಮನೇ ಸರ್ವಸ್ವ. ಆಕೆಯೊಂದಿಗೆ ಆಟವಾಡುವುದು ಎಂದರೆ ತುಂಬಾ ಇಷ್ಟ. ವನ್ಯಪ್ರಾಣಿಗಳು ಕೂಡ ಈ ಮನೋಭಾವದಿಂದ ಹೊರತಲ್ಲ.

ಇಲ್ಲೊಂದು ಸಿಂಹದ ಮರಿಗೆ ಅಮ್ಮನೊಂದಿಗೆ ಚಿನ್ನಾಟ ಆಡುವ ಉಮೇದು. ಆದರೆ, ಗಡದ್ದಾಗಿ ತಿಂದಿರುವ ಅಮ್ಮನಿಗೋ ನಿದ್ದೆ ಮಾಡುವ ಮೂಡು. ಆದರೇನು. ಚಿನ್ನಾಟದ ಮೂಡಿನಲ್ಲಿದ್ದ ಸಿಂಹದ ಮರಿ ಅಮ್ಮನ ಮೈಮೇಲೆ ಹತ್ತಿ, ಕುಣಿದು, ಆಕೆಯ ಕತ್ತು ಹಿಡಿದು ಹೊರಳಾಡಿ, ಆಟವಾಡಲು ಬಾ ಎಂದು ಕರೆಯಲು ಪ್ರಯತ್ನಿಸುತ್ತಿತ್ತು. ಆದರೆ ಅಮ್ಮನೋ ಮಲಗಿಕೊಂಡೇ ಮರಿಯ ಚಿನ್ನಾಟವನ್ನು ಆಸ್ವಾದಿಸುತ್ತಿತ್ತು.

ವೆಲ್​ಕಂ ಟು ನೇಚರ್​ ಎಂಬ ಟ್ವಿಟ್ಟರ್​ ಖಾತೆಯಲ್ಲಿ ಸಿಂಹಗಳ ಅಮ್ಮ ಮತ್ತು ಮರಿಯ ಚಿನ್ನಾಟದ 21 ಸೆಕೆಂಡ್​ಗಳ ವಿಡಿಯೋ ಬಿಡುಗಡೆಯಾಗಿದೆ. ಇದನ್ನು ಈಗಾಗಲೆ ಸಹಸ್ರಾರು ಸಂಖ್ಯೆಯ ಜನರು ನೋಡಿ ಆನಂದಿಸಿದ್ದಾರೆ.

ಅಷ್ಟೇ ಅಲ್ಲ. ಇದನ್ನು ಕಂಡು ಬಾಲ್ಯದಲ್ಲಿ ತಾವು ಅಮ್ಮನಿಗೆ ತಕ್ಕೆ ಬಿದ್ದು ಆಟವಾಡಿದ ದೃಶ್ಯಗಳು ನೆನಪಾಗಿ ಕೆಲವರು ಮುದಗೊಂಡಿದ್ದಾರೆ. ಇದೇ ಭಾವವನ್ನು ತಮ್ಮ ಕಮೆಂಟ್​ಗಳಲ್ಲೂ ಉಕ್ಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net