VIDEO: ಸುಶಾಂತ್​ ಸಿಂಗ್ ಕ್ಯಾಮರಾ ಎದುರಿಸಿದ ಮೊದಲ ದೃಶ್ಯ ವೈರಲ್!​

images
Published on

ಸುಶಾಂತ್​ ಸಿಂಗ್​ ರಜಪೂತ್​ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ, ಗಾಡ್​ಫಾದರ್​ ಇಲ್ಲದೆ ಬಾಲಿವುಡ್​ ಪ್ರವೇಶಿಸಿದವರು. ಕಿರುತೆರೆ ಮೂಲಕವೇ ಎಲ್ಲರನ್ನು ಸೆಳೆದು, ಅದರ ಖ್ಯಾತಿಯ ಮೂಲಕ ಸಿನಿಮಾರಂಗದಲ್ಲೂ ಯಶಸ್ಸು ಕಂಡವರು. ಹೀಗಿರುವಾಗ ಇದೇ ಸುಶಾಂತ್​ ಇಲ್ಲವಾಗಿ ಇಂದಿಗೆ ಎರಡು ತಿಂಗಳಾಗುತ್ತ ಬಂತು. ಅವರ ಸಾವಿನ ಕುರಿತ ತನಿಖೆಯಲ್ಲಿ ಸಾಕಷ್ಟು ಬೆಳವಣಿಗೆಗಳಾಗುತ್ತಿದ್ದು, ಪ್ರಕರಣ ಸಿಬಿಐ ಕೈಗೆತ್ತಿಕೊಂಡಿದೆ.

ಇತ್ತ ಅಭಿಮಾನಿ ವಲಯದಲ್ಲೂ ಸುಶಾಂತ್​ ಕುರಿತ ಸುದ್ದಿಗಳೇ ಚರ್ಚೆಯಾಗುತ್ತಿವೆ. ಅದರಲ್ಲೂ ಸುಶಾಂತ್​ ನಟಿಸಿದ ಮೊದಲ ಧಾರಾವಾಹಿಯ ಮೊದಲ ದೃಶ್ಯವನ್ನು ಹಂಚಿಕೊಳ್ಳಿ ಎಂದು ನಿರ್ಮಾಪಕಿ ಏಕ್ತಾ ಕಪೂರ್​​ಗೆ ಸಾಕಷ್ಟು ಮಂದಿ ಮನವಿ ಮಾಡಿದ್ದರು.

ಅದರಂತೆ, ಅಭಿಮಾನಿಗಳ ಕೋರಿಕೆ ಮೇರೆಗೆ ಸುಶಾಂತ್​ ಅವರ ಧಾರಾವಾಹಿಯ ಮೊದಲ ದೃಶ್ಯವನ್ನು ಇನ್​​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ ಏಕ್ತಾ. 2008ರಲ್ಲಿ ‘ಕಿಸ್ ದೇಶ್ ಮೇ ಹೈ ಮೇರಾ ದಿಲ್​’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಸುಶಾಂತ್​ ಎಂಟ್ರಿ ಕೊಟ್ಟಿದ್ದರು. ಮೊದಲ ದೃಶ್ಯದಲ್ಲಿಯೇ ಹೀರೋಯಿಸಂ ಮೂಲಕವೇ ರಜಪೂತ್ ಎದುರಾಗಿ ಎಲ್ಲರ ಹೃದಯ ಗೆದ್ದಿದ್ದರು. ಆ ಸನ್ನಿವೇಶದ ಬಗ್ಗೆ ಸ್ವತಃ ಏಕ್ತಾ ಕಪೂರ್​ ಮಾತನಾಡಿದ್ದಾರೆ.

‘ಸಾಕಷ್ಟು ಮಂದಿ ಸುಶಾಂತ್​ ಅವರ ಮೊದಲ ಸೀನ್​ ಹೇಗಿದೆ ಎಂಬುದನ್ನು ನೋಡುವಂತೆ ಕೋರಿದ್ದರು. ಈ ದೃಶ್ಯವೇ ನೋಡಿ ಸುಶಾಂತ್​ ಮೊದಲು ಫೇಸ್​ ಮಾಡಿದ್ದು. 2008ರಲ್ಲಿ ಬಿತ್ತರವಾಗುತ್ತಿದ್ದ ‘ಕಿಸ್ ದೇಶ್ ಮೇ ಹೈ ಮೇರಾ ದಿಲ್​’ ಧಾರಾವಾಹಿ ಇದು. ಇದರಲ್ಲಿ ಸೆಕೆಂಡ್​ ಲೀಡ್​ ಆಗಿ ಸುಶಾಂತ್​ ಕಾಣಿಸಿಕೊಂಡಿದ್ದ’ ಎಂದು ಹೇಳಿ ಮತ್ತೊಮ್ಮೆ ಸುಶಾಂತ್​ ಆತ್ಮಕ್ಕೆ ಶಾಂತಿ ಸಿಗಲೆಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net