

ಕಿನ್ನಿಗೋಳಿ: ಮನುಷ್ಯನಿಗೆ ಮೂಲಸೌಕರ್ಯ ಅಗತ್ಯವಾಗಿ ಬೇಕಾಗಿದ್ದು, ಅದರಂತೆ ರುದ್ರಭೂಮಿಯ ಅಗತ್ಯತೆ ಇದೆ ಎಂದು ಕಿನ್ನಿಗೋಳಿ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಅಂಗರಗುಡ್ಡೆಯಲ್ಲಿ ಹಿಂದು ರುದ್ರಭೂಮಿ ನಿರ್ಮಾಣ ಸಮಿತಿಯ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಅಂಗರಗುಡ್ಡೆ-ಶಿಮಂತೂರು ಹಿಂದು ರುದ್ರಭೂಮಿಗೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅತಿಕಾರಿಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ವಿಜಯ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಮನೋಹರ, ಭಜನಾ ಮಂದಿರ ಅಧ್ಯಕ್ಷ ಸಂಪತ್ ಕುಮಾರ್, ಹಿಂದು ರುದ್ರಭೂಮಿ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಕೋಶಾಧಿಕಾರಿಯಾದ ತಾರಾನಾಥ್ ದೇವಾಡಿಗ, ವಿಜಯ್ ಭಂಡಾರಿ, ಉಪಾಧ್ಯಕ್ಷ ಕಿಶೋರ್ ದೇವಾಡಿಗ, ಮೋಹಿನಿ ಸಾಲ್ಯಾನ್, ನವೀನ್ ಪಂಬದ, ಮಹಿಳಾ ಮಂಡಲದ ಅಧ್ಯಕ್ಷೆ ಅನಿತಾ ಶೆಟ್ಟಿ, ಹಾಗೂ ಸದಸ್ಯರಾದ ದಿನೇಶ್ ಕೋಟ್ಯಾನ್, ಸುಧೀರ್ ಶೆಟ್ಟಿ, ಜೀವನ್ ಶೆಟ್ಟಿ, ಕೇಶವ್ ದೇವಾಡಿಗ, ಹರೀಶ್ ಸಪಳಿಗ, ರಾಘವೇಂದ್ರ, ಆನಂದ್, ಸತೀಶ್ ಪೂಜಾರಿ, ಪ್ರಶಾಂತ್ ಕೋಟ್ಯಾನ್, ಯೋಗೀಶ್, ಶಿವಮೇಸ್ತ್ರಿ, ಜಯ ಸಾಲ್ಯಾನ್, ಸಂದೇಶ್ ಆಚಾರ್ಯ, ಸತೀಶ್ ಆಚಾರ್ಯ, ಪ್ರತಿಕ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರವೀಣ್ ಆರ್.ಶೆಟ್ಟಿ ಸ್ವಾಗತಿಸಿದರು. ಸತೀಶ್ ಪೂಜಾರಿ ವಂದಿಸಿದರು.