

ಕಿನ್ನಿಗೋಳಿ: ಗ್ರಾಮೀಣ ಜೀವ ವಿಮೆ, ಅಪಘಾತ ವಿಮೆಯಂಥ ಅಂಚೆ ಇಲಾಖೆಯ ಜನಸೇವಾ ಯೋಜನೆ ಗ್ರಾಮೀಣ ಜನರ ಪರವಾಗಿ ಇದೆ ಇದರ ಮಹತ್ವ ಅರಿತು ತೊಡಗಿಸಕೊಳ್ಳಬೇಕಾಗಿದೆ ಎಂದು ಕಿನ್ನಿಗೋಳಿ ಅಂಚೆ ಇಲಾಖೆಯ ಸಹಾಯಕ ಅಂಚೆ ಪಾಲಕ ಶಿವದಾಸ್ ಕಟೀಲು ಹೇಳಿದರು.
ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಸಭಾಭವನದಲ್ಲಿ ಮಂಗಳೂರು ಭಾರತೀಯ ಅಂಚೆ ಇಲಾಖೆ, ಓಂ ಫ್ರೆಂಡ್ಸ್ ಕೆರೆಕಾಡು, ಯೂತ್ ಫ್ರೆಂಡ್ಸ್ ಕೆರೆಕಾಡು, ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರ ಕೆರೆಕಾಡು ಆಶ್ರಯದಲ್ಲಿ ಅಂಚೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿನ್ನಿಗೋಳಿ ಕಚೇರಿಯ ಅಂಚೆ ಸೇವಕರಾದ ರಾಮಚಂದ್ರ ಕಾಮತ್ ಬೆಳ್ಮಣ್ಣು ಹಾಗೂ ರವೀಂದ್ರ ಕುಮಾರ್ ಕೆರೆಕಾಡು ಅಂಚೆ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರ ಅನಂತ ಪದ್ಮನಾಭ ಶೆಟ್ಟಿಗಾರ್, ಓಂ ಫ್ರೆಂಡ್ಸ್ ಅಧ್ಯಕ್ಷ ದಿವ್ಯೇಶ ದೇವಾಡಿಗ, ಯೂತ್ ಫ್ರೆಂಡ್ಸ್ ಕೆರೆಕಾಡು ಅಧ್ಯಕ್ಷ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು. ಹೇಮಚಂದ್ರ ನಿರೂಪಿಸಿದರು.