

ಹಳೆಯಂಗಡಿ: ದೇವಾಡಿಗ ಭವನ ಮುಂದಿನ ದಿನಗಳಲ್ಲಿ ಸಮಾಜದ ಜನರಿಗೆ ಅನುಕೂಲವಾಗುವ ರೀತಿ ಬೆಳೆಯಲಿ ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
ಹಳೆಯಂಗಡಿಯಲ್ಲಿ ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದ ದೇವಾಡಿಗ ಭವನದ ನೆಲಅಂತಸ್ತು ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಅಭಯಚಂದ್ರ ಜೈನ್, ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ್ ಯು.ದೇವಾಡಿಗ, ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ, ಕೃಷ್ಣ ಹೆಗ್ಡೆ ಮಿಯಾರು, ವಸಂತ್ ಬೆರ್ನಾರ್ಡ್, ಮುಂಬೈ ದೇವಾಡಿಗ ಸಂಘದ ಮಾಜಿ ಅಧ್ಯಕ್ಷ ರವಿ ಎಸ್.ದೇವಾಡಿಗ, ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮಾ, ಉದ್ಯಮಿ ರವೀಶ್ ಮೂಲ್ಕಿ, ಮುಂಬೈ ದೇವಾಡಿಗ ಸಂಘದ ಅಧ್ಯಕ್ಷ ಪ್ರವೀಣ್ ನಾರಾಯಣ್, ಮಾಜಿ ಅಧ್ಯಕ್ಷ ವಾಸು ದೇವಾಡಿಗ, ಉದ್ಯಮಿ ನಾಗರಾಜ್ ಪಡುಕೋಣೆ, ಕೊಲ್ಲೂರು ಕ್ಷೇತ್ರ ವ್ಯವಸ್ಥಾಪನಾ ಮಂಡಳಿ ಸದಸ್ಯ ಆಲೂರು ರಘುರಾಮ ದೇವಾಡಿಗ, ಅಶೋಕ್ ಮೊಯಿಲಿ, ರತ್ನಾಕರ್ ಜಿ.ಎಸ್., ಹಿರಿಯಡ್ಕ ಮೋಹನ್‌ದಾಸ್, ನಿವೃತ್ತ ಪ್ರಾಂಶುಪಾಲ ಬಾಬು ದೇವಾಡಿಗ ಆಂಬ್ಲಮೊಗರು, ಕೆ.ಜೆ.ದೇವಾಡಿಗ, ಉಡುಪಿ ದೇವಾಡಿಗರ ಸೇವಾ ಸಂಘದ ಅಧ್ಯಕ್ಷ ಗಣೇಶ್ ದೇವಾಡಿಗ ಅಂಬಲಪಾಡಿ, ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ಮಹಿಳಾ ವೇದಿಕೆ ಅಧ್ಯಕ್ಷೆ ವಿಜಯಲಕ್ಷ್ಮೀ ಜನಾರ್ದನ್, ಯುವವೇದಿಕೆ ಅಧ್ಯಕ್ಷ ಗಣೇಶ್ ದೇವಾಡಿಗ ಪಂಜ, ಕಟ್ಟಡ ಸಮಿತಿಯ ಪರಮೇಶ್ವರ್, ಮೀರಾ ಬಾಯಿ ಕೆ., ವಿಜಯಲಕ್ಷ್ಮೀ ಜನಾರ್ದನ್, ರಮೇಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಅಂಗವಾಗಿ ಗಣಪತಿ ಹೋಮ, ಪ್ರವೇಶ, ಸಾಮೂಹಿಕ ಶ್ರೀ ಶನೀಶ್ವರ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಹಾಪೂಜೆ ನಡೆಯಿತು. ಯಾದವ ದೇವಾಡಿಗ ಸ್ವಾಗತಿಸಿದರು. ಜನಾರ್ದನ್ ಪಡುಪಣಂಬೂರು ಪ್ರಾಸ್ತಾವಿಕ ಮಾತನಾಡಿದರು. ಸತೀಶ್ ಇಂದಿರಾನಗರ ವಂದಿಸಿದರು. ರಾಮದಾಸ್ ಪಾವಂಜೆ ಕಾರ್ಯಕ್ರಮ ನಿರೂಪಿಸಿದರು.
ಸಾಧಕರಿಗೆ ಸನ್ಮಾನ
ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ವಸಂತಿ ದೇವಾಡಿಗ ಪಡುಮನೆ, ಗಂಗಾ ಡಿ.ದೇವಾಡಿಗ ಪಾವಂಜೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ನೇಹಾ ಯಾದವ ದೇವಾಡಿಗ ಹಳೆಯಂಗಡಿ ಅವರನ್ನು ಸನ್ಮಾನಿಸಲಾಯಿತು.