ನಿಮ್ಮಲ್ಲಿ ಈ ಖಿನ್ನತೆಯ ಲಕ್ಷಣಗಳು ಕಂಡುಬಂದರೆ ಎಂದಿಗೂ ನಿರ್ಲಕ್ಷಿಸಬಾರದು | Depression

Depression 16
Published on

Depression: ಮನುಷ್ಯನ ಜಿವನದಲ್ಲಿ ಖಿನ್ನತೆಯು ಹಲವು ಮುಖವಾಡಗಳನ್ನು ಧರಿಸುವಂತೆ ಮಾಡುತ್ತದೆ. ಇದು ವ್ಯಕ್ತಿಯನ್ನು ಯಾವಾಗಲೂ ಅಳುವಂತೆ ಅಥವಾ ದುಃಖವಿರುವಂತೆ ಕಾಣಲು ಬೀಡುವುದಿಲ್ಲ. ವಾಸ್ತವವಾಗಿ, ಖಿನ್ನತೆಯೊಂದಿಗೆ ಹೋರಾಡುತ್ತಿರುವ ಅನೇಕ ಜನರು ಹೊರಗೆ ಚೆನ್ನಾಗಿ ಕಾಣುತ್ತಾರೆ, ಕೆಲಸ ಮಾಡುತ್ತಾರೆ, ನಗುತ್ತಾರೆ ಮತ್ತು ಸಮಾಜದೊಂದಿಗೆ ಇರುತ್ತಾರೆ. ಆದರೆ, ಇದೇ ಸಮಯದಲ್ಲಿ ಒಳಗಿನ ಭಾವನಾತ್ಮಕ ನೋವಿನೊಂದಿಗೆ ಸದ್ದಿಲ್ಲದೆ ನರಳುತ್ತಿರುತ್ತಾರೆ.

ಇಂದಿನ ವೇಗದ ಜಗತ್ತಿನಲ್ಲಿ, ಮಾನಸಿಕ ಆರೋಗ್ಯದ ಬಗ್ಗೆ ತುಂಬಾ ಎಚ್ಚರಿಕೆಗಳನ್ನು ವಹಿಸಬೇಕು. ಯಾವುದೇ ವಿಷಯವನ್ನು ಹೆಚ್ಚು ಕಡೆಗಣಿಸುವುದು ಸುಲಭ. ಆದರೆ, ಈ ಆರಂಭಿಕ ಸೂಚನೆಗಳನ್ನು ಗುರುತಿಸಿ ಪರಿಸ್ಥಿತಿ ಹದಗೆಡುವ ಮೊದಲು ನಮ್ಮನ್ನು ಮತ್ತು ಇತರರನ್ನು ಬೆಂಬಲಿಸುವುದನ್ನು ಕಲಿಯಬೇಕು. ಅಲ್ಲದೆ, ಒಬ್ಬ ವ್ಯಕ್ತಿ ಎಂದಿಗೂ ನಿರ್ಲಕ್ಷಿಸಬಾರದ ಖಿನ್ನತೆಯ ಕೆಲವು ಗುಪ್ತ ವಿಷಯಗಳನ್ನು ತಿಳಿಯೋಣ ಬನ್ನಿ.

ಸಾಮಾಜಿಕ ಹಿಂತೆಗೆದುಕೊಳ್ಳುವಿಕೆ

ಹತ್ತಿರದ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಸುತ್ತಲೂ ಇರಲು ಹಠಾತ್ ನಿರಾಸಕ್ತಿ. ವ್ಯಕ್ತಿಯು ಕಾರ್ಯಕ್ರಮಗಳನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ. ಯಾವುದೇ ಕಾರಣವಿಲ್ಲದೆ ಒಂಟಿಯಾಗಿರಲು ಬಯಸುತ್ತರೆ.

ವಿಪರೀತ ಆಯಾಸ

ಸರಿಯಾದ ನಿದ್ರೆ, ಸಮತೋಲನವಿಲ್ಲದ ಆಹಾರ ಮತ್ತು ನಿಯಮಿತ ವ್ಯಾಯಾಮದ ಹೊರತಾಗಿಯೂ, ನಿರಂತರವಾಗಿ ದಣಿದ ಅಥವಾ ಶಕ್ತಿ ಕಡಿಮೆ ಇರುವ ಭಾವನೆ ಇರುತ್ತದೆ.

ನಿರಂತರವಾಗಿ ಕಾಡುವ ಶೂನ್ಯತೆ

ಯಾವುದೇ ದೈಹಿಕ ಕಾಯಿಲೆ ಅಥವಾ ಸ್ಪಷ್ಟ ಕಾರಣವಿಲ್ಲದಿದ್ದರೂ ಸಹ, ದುಃಖ, ಶೂನ್ಯತೆ ಮತ್ತು ಭಾವನಾತ್ಮಕ ಭಾರದ ನಿರಂತರ ಭಾವನೆ ಇದ್ದಂತೆ ಭಾಸವಾಗುತ್ತದೆ.

ಆಹಾರ ಪದ್ಧತಿಯಲ್ಲಿ ಬದಲಾವಣೆ

ಭಾವನಾತ್ಮಕವಾಗಿ ಅತಿಯಾಗಿ ತಿನ್ನುವುದು, ಅಥವಾ ಇದಕ್ಕೆ ವಿರುದ್ಧವಾಗಿ, ಹಸಿವಿನ ಕೊರತೆ ಇರುವುದು. ಈ ಬದಲಾವಣೆಗಳು ಹೆಚ್ಚಾಗಿ ನಿಭಾಯಿಸುವ ಪ್ರಯತ್ನಗಳೊಂದಿಗೆ ಸಂಬಂಧ ಹೊಂದಿವೆ.

ಆಸಕ್ತಿಯ ನಷ್ಟ

ಒಂದು ಕಾಲದಲ್ಲಿ ಆನಂದದಾಯಕ ಅಥವಾ ತೃಪ್ತಿಕರವಾಗಿದ್ದ ಚಟುವಟಿಕೆಗಳಿಗೆ ಉತ್ಸಾಹ ಅಥವಾ ಪ್ರೇರಣೆಯ ಕೊರತೆಯಾಗುತ್ತದೆ.

ಭಾವನೆಗಳು ಅರ್ಥಹೀನತೆ

ಒಬ್ಬ ವ್ಯಕ್ತಿಯು ಸಾಮಾನ್ಯವಾಗಿ ಸಂತೋಷವನ್ನು ತರುವ ಘಟನೆಗಳ ಸಮಯದಲ್ಲಿಯೂ ಸಹ ಸಂತೋಷವನ್ನು ಅನುಭವಿಸಲು ಅಸಮರ್ಥತೆ. ಜೀವನವು ನೀರಸ ಅಥವಾ ಅರ್ಥಹೀನವೆಂದು ಅನಿಸಬಹುದು.

ವಿವರಿಸಲಾಗದ ದೈಹಿಕ ನೋವು

ಸ್ಪಷ್ಟ ವೈದ್ಯಕೀಯ ಕಾರಣವಿಲ್ಲದೆ ಆಗಾಗ್ಗೆ ತಲೆನೋವು, ಬೆನ್ನು ನೋವು ಅಥವಾ ಹೊಟ್ಟೆ ಸಮಸ್ಯೆಗಳು ಸದಾ ಕಾಡುತ್ತದೆ.

ಸರಿ ಎಂದು ನಟಿಸುವುದು

ಖಿನ್ನತೆಗೆ ಒಳಗಾದ ವ್ಯಕ್ತಿಯು ಆಂತರಿಕವಾಗಿ ಹತಾಶೆ ಅಥವಾ ಸಂಪರ್ಕ ಕಡಿತಗೊಂಡಿರುವಾಗ ಸಂತೋಷದ ಮುಖವನ್ನು ಧರಿಸುವುದು ಅಥವಾ ಸಕಾರಾತ್ಮಕತೆಯನ್ನು ಒತ್ತಾಯಿಸುವುದು.

ಪ್ರತ್ಯೇಕತೆಯ ಬಯಕೆ

ದೀರ್ಘಕಾಲ ಯಾರೊಂದಿಗೂ ಸಂವಹನ ನಡೆಸದೆ, ಹೆಚ್ಚಾಗಿ ಒಂದೇ ಕೋಣೆಯಲ್ಲಿ ಏಕಾಂಗಿಯಾಗಿರಲು ಬಲವಾದ ಪ್ರಚೋದನೆ ನೀಡುತ್ತದೆ.

ನಿದ್ರೆಯ ಅಡಚಣೆಗಳು

ಸದಾ ನಿದ್ರಿಸುವುದು ಅಥವಾ ಹೆಚ್ಚು ನಿದ್ರೆ ಮಾಡದೆ ಇರುವುದು ಇನ್ನೂ ಆತಂಕದಿಂದ ಇರುವುದು ಪ್ರಮುಖ ಲಕ್ಷಣಗಳಾಗಿವೆ.

ಮಾನಸಿಕ ಆರೋಗ್ಯವೇ ಎಲ್ಲದಕ್ಕೂ ಅಡಿಪಾಯ. ನಿಮ್ಮ ದೈಹಿಕ ಆರೋಗ್ಯ ಕಳಪೆಯಾಗಿದ್ದರೆ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ, ನೀವು ಇದನ್ನು ನಿವಾರಿಸಬಹುದು. ಆದರೆ ನಿಮ್ಮ ದೈಹಿಕ ಆರೋಗ್ಯ ಚೆನ್ನಾಗಿದ್ದರೂ ಸಹ, ಮಾನಸಿಕ ಆರೋಗ್ಯ ಸರಿಯಿಲ್ಲದಿದ್ದರೆ ನಿಮ್ಮ ದೈನಂದಿನ ಜೀವನ, ಸಂಬಂಧಗಳು ಮತ್ತು ವೈಯಕ್ತಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.

ಈ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಇವುಗಳನ್ನು ಅನುಭವಿಸುತ್ತಿದ್ದರೆ, ಕಾಯಬೇಡಿ, ಸಂಪರ್ಕಿಸಿ. ಮಾತನಾಡಿ. ಸಹಾಯ ಮಾಡುವುದರಿಂದ ಗುಣಪಡಿಸುವುದು ಸಾಧ್ಯ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net