'ಇಂದಿರಾ ಏಕಾದಶಿ ವ್ರತ' ಯಾವಾಗ? ಆ ದಿನದ ಶುಭ ಸಮಯ ಮತ್ತು ಮಹತ್ವ ತಿಳಿಯಿರಿ| Indira Ekadashi

vishnu
Published on

Indira Ekadashi; ಹಿಂದೂ ಧರ್ಮದಲ್ಲಿ ಇಂದಿರಾ ಏಕಾದಶಿಯ ಪೂಜೆಗೆ ವಿಶೇಷ ಮಹತ್ವವಿದೆ. ಇಂದಿರಾ ಏಕಾದಶಿ ವ್ರತವು ಪವಿತ್ರವಾದ ಉಪವಾಸ ವ್ರತವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಇದನ್ನು ಆಶ್ವಿನ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿಯಂದು ಆಚರಿಸಲಾಗುತ್ತದೆ. ಈ ವ್ರತವು ಶ್ರೀ ವಿಷ್ಣುವಿನ ಭಕ್ತಿಯೊಂದಿಗೆ ಸಂಬಂಧಿಸಿದ್ದಾಗಿದ್ದು, ಇದನ್ನು ಪಿತೃಪಕ್ಷದ ಸಮಯದಲ್ಲಿ ಅಂದರೆ ಮಹಾಲಯ ಅಮಾವಾಸ್ಯೆಗೆ ಮೊದಲಿನ ದಿನಗಳಲ್ಲಿ ಆಚರಿಸಲಾಗುತ್ತದೆ. ಈ ವ್ರತವು ಪಿತೃಗಳಿಗೆ (ಪೂರ್ವಜರಿಗೆ) ಮೋಕ್ಷವನ್ನು ಕೊಡುಗೆಯಾಗಿ ನೀಡುವ ಉದ್ದೇಶವನ್ನು ಹೊಂದಿದೆ ಎಂದು ನಂಬಲಾಗುತ್ತದೆ.

ಈ ದಿನದಂದು ವಿಷ್ಣುವನ್ನು ಸರಿಯಾದ ರೀತಿಯಲ್ಲಿ ಪೂಜಿಸುವುದು ರೂಡಿಯಲ್ಲಿದೆ. ಈ ದಿನದಂದು ವಿಷ್ಣುವನ್ನು ಪೂಜಿಸುವುದರಿಂದ ಒಬ್ಬ ವ್ಯಕ್ತಿಯು ಬಯಸಿದ ಫಲಗಳನ್ನು ಪಡೆಯಬಹುದು ಮತ್ತು ಜೀವನದ ಎಲ್ಲಾ ಸಮಸ್ಯೆಗಳಿಂದ ಮುಕ್ತರಾಗಬಹುದು ಜೊತೆಗೆ ಪೂರ್ವಜರ ಆಶೀರ್ವಾದವನ್ನು ಸಹ ಪಡೆಯಬಹುದು ಎಂದು ನಂಬಲಾಗಿದೆ.

ಇಂದಿರಾ ಏಕಾದಶಿ ಉಪವಾಸ ಯಾವಾಗ ?

ವೈದಿಕ ಕ್ಯಾಲೆಂಡರ್ ಪ್ರಕಾರ ಈ ಬಾರಿಯ ಇಂದಿರಾ ಏಕಾದಶಿ ಉಪವಾಸವನ್ನು ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತದೆ. ಇಂದಿರಾ ಏಕಾದಶಿ ತಿಥಿ ಸೆಪ್ಟೆಂಬರ್ 17 ರಂದು ಬೆಳಗ್ಗೆ 12:21 ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 17 ರಂದು ರಾತ್ರಿ 11:39 ಕ್ಕೆ ಕೊನೆಗೊಳ್ಳಲಿದೆ. ಈ ದಿನ ವಿಷ್ಣುವನ್ನು ಪೂಜಿಸುವ ಸಮಯ ಬೆಳಗ್ಗೆ 06:07 ರಿಂದ ಬೆಳಗ್ಗೆ 09:11 ರವರೆಗೆ. ಈ ಸಮಯದಲ್ಲಿ ನೀವು ವಿಷ್ಣುವನ್ನು ಪೂಜಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.

ಪೂಜೆಯ ಮಹತ್ವ

ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ವ್ರತವು ಭಕ್ತರ ಪಾಪಗಳನ್ನು ಕ್ಷಮಿಸಿ, ಕರ್ಮದ ಭಾರವನ್ನು ಕಡಿಮೆ ಮಾಡುತ್ತದೆ. ಇದರಿಂದ ಆತ್ಮದ ಶುದ್ಧತೆ ಮತ್ತು ಒಳಿತಾದ ಜೀವನಕ್ಕೆ ಮಾರ್ಗ ಸುಗಮವಾಗುತ್ತದೆ. ಈ ವ್ರತವು ಕೇವಲ ವೈಯಕ್ತಿಕ ಶುದ್ಧತೆಗೆ ಮಾತ್ರವಲ್ಲ, ಕುಟುಂಬದ ಸಮೃದ್ಧಿಗೂ ಸಹಾಯಕವಾಗಿದೆ. ಪಿತೃಗಳ ಆಶೀರ್ವಾದದಿಂದ ಕುಟುಂಬದಲ್ಲಿ ಸಂತೋಷ, ಶಾಂತಿ ಮತ್ತು ಐಶ್ವರ್ಯ ಬರುತ್ತದೆ ಎಂದು ನಂಬಲಾಗುತ್ತದೆ. ಇಂದಿರಾ ಏಕಾದಶಿಯಂದು ವಿಷ್ಣುವನ್ನು ಪೂಜಿಸುವುದರಿಂದ ಮರಣಾನಂತರ ಮೋಕ್ಷ ಸಿಗುತ್ತದೆ ಮತ್ತು ಪೂರ್ವಜರ ಆಶೀರ್ವಾದವೂ ಸಿಗುತ್ತದೆ ಎಂದು ನಂಬಲಾಗಿದೆ. ಈ ದಿನ ಉಪವಾಸ ಮಾಡಿ ವಿಷ್ಣುವಿನ ಜೊತೆಗೆ ಪೂರ್ವಜರನ್ನು ಪೂಜಿಸಿದರೆ ಜೀವನದ ಎಲ್ಲಾ ಸಮಸ್ಯೆಗಳು ದೂರಾಗುತ್ತವೆ ಹಾಗೂ ಆಸೆಗಳು ಸಹ ಈಡೇರುತ್ತವೆ ಎನ್ನಲಾಗಿದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)

ಇಂದಿರಾ ಏಕಾದಶಿ ಕಥೆಯಲ್ಲಿ, ರಾಜಾ ಇಂದ್ರಸೇನನಿಗೆ ಶ್ರೀ ಕೃಷ್ಣನು ಈ ವ್ರತದಿಂದ ಪಿತೃಗಳಿಗೆ ಮೋಕ್ಷ ದೊರಕುವ ಬಗ್ಗೆ ತಿಳಿಸುತ್ತಾನೆ. ಈ ಕಥೆಯನ್ನು ಓದುವುದು ಅಥವಾ ಆಲಿಸುವುದರಿಂದ ಭಕ್ತರಿಗೆ ಆಧ್ಯಾತ್ಮಿಕ ಜ್ಞಾನ ಮತ್ತು ಶ್ರದ್ಧೆ ಹೆಚ್ಚುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net