ನಮ್ಮ ಸೇನಾ ಪಡೆಗಳು ನಡೆಸಿದ ಭಾರೀ ದಾಳಿಗೆ ಗಾಜಾ ಉರಿಯುತ್ತಿದೆ ಎಂದ ಇಸ್ರೇಲ್ ರಕ್ಷಣಾ ಸಚಿವ| Israel Katz

Israel Katz 16
Published on

Israel Katz: ಗಾಜಾ ಗುರಿಯಾಗಿಸಿಕೊಂಡು ಇಸ್ರೇಲ್​ ಸೇನೆ ನಡೆಸಿದ ಭಾರೀ ದಾಳಿಯಿಂದ ಗಾಜಾ ಉರಿಯುತ್ತಿದೆ ಎಂದು ಇಸ್ರೇಲ್​ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಮಂಗಳವಾರ (ಸೆಪ್ಟೆಂಬರ್​,16) ತಿಳಿಸಿದ್ದಾರೆ.

ಗಾಜಾ ಮೇಲಿನ ದಾಳಿಯ ಬಗ್ಗೆ ಇಸ್ರೇಲ್‌ನಿಂದ ಕತಾರ್‌ಗೆ ತೆರಳುವಾಗ ಮಾತನಾಡಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ದಾಳಿ ಪ್ರಾರಂಭವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ, ಇಸ್ರೇಲಿ ಪಡೆಗಳು ಗಾಜಾದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದ್ದರಿಂದ ಒಪ್ಪಂದ ಮಾಡಿಕೊಳ್ಳಲು ನಮಗೆ ಬಹಳ ಕಡಿಮೆ ಸಮಯವಿದೆ ಎಂದು ನಾವು ಭಾವಿಸುತ್ತೇವೆ ಎಂದು ರೂಬಿಯೊ ತಿಳಿಸಿದ್ದಾರೆ.

ಮುಂದುವರೆದು ಮಾತನಾಡಿದ ರೊಬಿಯೊ, ನಮ್ಮ ಮೊದಲ ಆಯ್ಕೆಯೆಂದರೆ ನಾವು ಸಶಸ್ತ್ರೀಕರಣವನ್ನು ತೆಗೆದುಹಾಕುತ್ತೇವೆ. ನಾವು ಇನ್ನು ಮುಂದೆ ಬೆದರಿಕೆಯನ್ನು ಒಡ್ಡುವುದಿಲ್ಲ ಎಂದು ಹಮಾಸ್ ಹೇಳಿದರೇ ಮಾತ್ರ ಮಾತುಕತೆಯನ್ನು ಇತ್ಯರ್ಥಪಡಿಸಬಹುದು ಎಂದು ರೂಬಿಯೊ ಸೂಚಿಸಿದ್ದಾರೆ. ಅಲ್ಲದೆ, ಕೆಲವೊಮ್ಮೆ ನೀವು ಹಮಾಸ್‌ನಂತಹ ಕ್ರೂರಿಗಳ ಗುಂಪಿನೊಂದಿಗೆ ವ್ಯವಹರಿಸುವಾಗ, ಮಾತುಕತೆ ಸಾಧ್ಯವಿಲ್ಲ. ಆದರೆ, ಇದು ಸಂಭವಿಸಬಹುದು ಎಂದು ನಾವು ಭಾವಿಸುತ್ತೇವೆ ಎಂದು ರೂಬಿಯೊ ಹೇಳಿದ್ದಾರೆ.

2023ರ ಅಕ್ಟೋಬರ್,7 ರಂದು ಹಮಾಸ್ ಉಗ್ರರು ದಕ್ಷಿಣ ಇಸ್ರೇಲ್‌ಗೆ ನುಗ್ಗಿ ಸುಮಾರು 1,200 ಜನರನ್ನು ಕೊಂದು ಹಾಕಿದ್ದರು. ಅಲ್ಲದೆ, 251 ಜನರನ್ನು ಅಪಹರಿಸಿದ ಕಾರಣ ಗಾಜಾದಲ್ಲಿ ಯುದ್ಧ ಪ್ರಾರಂಭವಾಯಿತು. ಅಂದಿನಿಂದ ಹೆಚ್ಚಿನ ಒತ್ತೆಯಾಳುಗಳನ್ನು ಕತಾರ್ ಅಥವಾ ಇತರ ಒಪ್ಪಂದಗಳ ಮಧ್ಯಸ್ಥಿಕೆಯಲ್ಲಿ ಕದನ ವಿರಾಮದ ಮೂಲಕ ಬಿಡುಗಡೆ ಮಾಡಲಾಗಿದೆ.

ಇಸ್ರೇಲ್‌ನ ಪ್ರತೀಕಾರದ ದಾಳಿಯು ಕನಿಷ್ಠ 64,871 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಇದು ಎಷ್ಟು ಜನರು ನಾಗರಿಕರು ಅಥವಾ ಹೋರಾಟಗಾರರು ಎಂದು ಹೇಳಿಲ್ಲ. ಹಮಾಸ್ ನಡೆಸುವ ಸರ್ಕಾರದ ಭಾಗವಾಗಿರುವ ಮತ್ತು ವೈದ್ಯಕೀಯ ವೃತ್ತಿಪರರಿಂದ ಸಿಬ್ಬಂದಿಯನ್ನು ಹೊಂದಿರುವ ಸಚಿವಾಲಯವು, ಸತ್ತವರಲ್ಲಿ ಅರ್ಧದಷ್ಟು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ ಎಂದು ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net