

Hair fall : ಚಳಿಗಾಲದಲ್ಲಿ ತಾಪಮಾನ ಕಡಿಮೆಯಾಗುವುದರಿಂದ ಚರ್ಮದಂತೆಯೇ ನಿಮ್ಮ ನೆತ್ತಿಯೂ ತೇವಾಂಶವನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಇದು ಕೂದಲಿನ ಒರಟು, ಉದರುರುವಿಕೆ, ತುರಿಕೆಗೆ ಕಾರಣವಾಗುತ್ತದೆ. ಈ ಕಾರಣಗಳಿಗಾಗಿ ಹಲವಾರು ಜನರು ಬಿಸಿನೀರಿನ ಸ್ನಾನ, ಅಧಿಕ ಶಾಂಪೂಗಳನ್ನು ಬಳಸಲು ಪ್ರಾರಂಭಿಸುತ್ತಾರೆ. ಇದು ಕೂದಲಿನ ಕಳಪೆ ಆರೈಕೆಯು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ.
ಈ ಸಮಸ್ಯೆಯನ್ನು ಸರಿಪಡಿಸಲು ದುಬಾರಿ ಚಿಕಿತ್ಸೆಗಳು ಅಥವಾ ಸಲೂನ್ಗಳನ್ನು ಬಳಸುವ ಬದಲಿಗೆ ನಿಮ್ಮ ಸ್ನಾನದ ಅಭ್ಯಾಸಗಳಲ್ಲಿ ಬದಲಾವಣೆ ಮಾಡಿ. ಇದು ನಿಮ್ಮ ಕೂದಲನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಚಳಿಗಾಲದಲ್ಲಿ ನಿಮ್ಮ ಕೂದಲನ್ನು ರಕ್ಷಿಸಿಕೊಳ್ಳಬಹುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಿಕೊಡಲಾಗಿದೆ.
ಚಳಿಗಾಲದಲ್ಲಿ ಬಿಸಿ ಬಿಸಿ ನೀರಿನಿಂದ ಹಲವಾರು ಜನರು ಸ್ನಾನ ಮಾಡುತ್ತಾರೆ. ಇದು ನೆತ್ತಿಯ್ಲಲಿರುವ ನೈಸರ್ಗಿಕ ಎಣ್ಣೆಯನ್ನು ಕಸಿದುಕೊಳ್ಳುತ್ತದೆ. ಇದು ಚರ್ಮವನ್ನು ಒಣಗಿಸಿ ಸಿಪ್ಪೆ ಸುಲಿಯುವಂತೆ ಮಾಡಿ, ಕೂದಲಿನ ಬೇರುಗಳನ್ನು ದುರ್ಬಲಗೊಳಿಸಿ, ಕೂದಲು ಉದುರಿಕೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಕೂದಲನ್ನು ಬೆಚ್ಚಗಿನ ನೀರಿನಿಂದ ತೊಳೆಯುವ ಅಭ್ಯಾಸಗಳನ್ನು ಮಾಡಿಕೊಳ್ಳಿ. ಇದು ಕೂದಲನ್ನು ಆರೈಕೆ ಮಾಡಿ ಹೊಳಪನ್ನು ನೀಡುತ್ತದೆ.
ಚಳಿಗಾಲದಲ್ಲಿ ಕೂದಲನ್ನು ರಕ್ಷಣೆ ಮಾಡಲು ಸ್ನಾನ ಮಾಡಿವುದಕ್ಕಿಂತ 30-45 ನಿಮಿಷಗಳ ಮುಂಚೆ ಬೆಚ್ಚಗಿನ ತೆಂಗಿನಕಾಯಿ, ಬಾದಾಮಿ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಇದು ರಕ್ಷಣಾತ್ಮಕ ತಡೆಗೋಡೆಯನ್ನು ರೂಪಿಸುತ್ತದೆ. ಇದರಿಂದ ಕೂದಲಿನ ಬೇರುಗಳನ್ನು ಸದೃಢಗೊಳಿಸಲು ಸಾಧ್ಯವಾಗಬಹದು.
ಅನೇಕ ಶಾಂಪೂಗಳು ಸಲ್ಫೇಟ್‌ಗಳನ್ನು ಹೊಂದಿರುತ್ತವೆ. ಇವು ಚಳಿಗಾಲದಲ್ಲಿ ನಿಮ್ಮ ಕೂದಲನ್ನು ಮತ್ತು ತಲೆಯ ನೆತ್ತಿಯನ್ನು ಒಣಗಿಸುತ್ತದೆ. ಆದರಿಂದ ಹಾನಿಗೊಳಗಾದ ಕೂದಲಿನ ವಿನ್ಯಾಸ ಮಾಡಲು ಸಲ್ಫೇಟ್-ಮುಕ್ತ, ಮಾಯಿಶ್ಚರೈಸಿಂಗ್ ಶಾಂಪೂಗೆ ಬದಲಿಸಿರಿ. ಇದು ಕೂದಲಿನ ಬಿರುಕನ್ನು ತಡೆಗಟ್ಟುತ್ತದೆ. ಹಾಗೆಯೇ ಕೂದಲನ್ನು ಸದೃಢವಾಗಿ ಬೆಳೆಸಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ಕಂಡಿಷನರ್ ನಿಮ್ಮ ಅತ್ಯುತ್ತಮ ಸ್ನೇಹಿತ. ಕೂದಲಿಗೆ ಶಾಂಪು ಹಚ್ಚಿದ ನಂತರ ತುದಿಗಳಿಗೆ ಕಂಡೀಷನರ್ ಹಚ್ಚಿರಿ. ಇದು ಕೂದಲಿನ ಮಧ್ಯದಿಂದ ತುದಿಯವರೆಗೆ ಪೋಷಣೆ ನೀಡುತ್ತದೆ. ಆದರಿಂದ ಕೂದಲನ್ನು ತೊಳೆಯುವ ಮುನ್ನ 2-3 ನಿಮಿಷಗಳ ಕಾಲ ಅದನ್ನು ಹಾಗೇ ಬಿಟ್ಟು ನಂತರ ತೊಳೆಯಿರಿ. ಹೆಚ್ಚುವರಿ ಮೃದುತ್ವಕ್ಕಾಗಿ, ವಾರಕ್ಕೊಮ್ಮೆ ಡೀಪ್-ಕಂಡೀಷನಿಂಗ್ ಮಾಸ್ಕ್ ಬಳಸಿರಿ.
ಒದ್ದೆಯಾದ ಕೂದಲು ತುಂಬಾ ದುರ್ಬಲವಾಗಿರುತ್ತದೆ. ಅದನ್ನು ಟವೆಲ್‌ನಿಂದ ಉಜ್ಜುವುದು ಅಥವಾ ತೊಳೆದ ತಕ್ಷಣ ಬಾಚಿಕೊಳ್ಳುವುದನ್ನು ಮಾಡಬೇಡಿ. ಇದು ಕೂದಲನ್ನು ದುರ್ಬಲ ಸ್ಥಿತಿಗೆ ಕೊಂಡೊಯ್ಯುತ್ತದೆ. ಆದರಿಂದ ಮೃದುವಾದ ಟವೆಲ್‌ನಿಂದ ನೀರನ್ನು ನಿಧಾನವಾಗಿ ಒರೆಸಿ ತೊಳೆಯಿರಿ.
ಕೆಲವೊಂದು ಜನರು ಪ್ರತಿನಿತ್ಯ ತಲೆಯನ್ನು ತೊಳೆಯುತ್ತಾರೆ. ಇದು ನೆತ್ತಿಯ ನೈಸರ್ಗಿಕ ಎಣ್ಣೆಯನ್ನು ತೆಗೆಯುತ್ತದೆ. ಇದರಿಂದ ಕೂದಲು ಒಣಗುವುದು ಅಥವಾ ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ವಾರಕ್ಕೆ 2 ಅಥವಾ 3 ಬಾರಿ ತಲೆಸ್ನಾನ ಮಾಡಿ. ಇದರಿಂದ ಕೂದಲಿನ ಪೋಷಣೆ ಮಾಡಿಕೊಳ್ಳಲು ಸಾಧ್ಯವಾಗಬಹುದು.
ಕೂದಲು ಒಣಗಿದ ನಂತರ, ತೇವಾಂಶವನ್ನು ಹೀರಿಕೊಳ್ಳಲು ಸಿರಮ್ ಅಥವಾ ಲೀವ್-ಇನ್ ಕಂಡಿಷನರ್ ಅನ್ನು ಹಚ್ಚಿರಿ. ಇದು ಕೂದಲಿನ ಹೊಳಪನ್ನು ನೀಡಿ ಸ್ಥಿರತೆಯನ್ನು ಕಡಿಮೆ ಮಾಡುತ್ತದೆ. ಇದು ಶೀತಗಾಳಿಯಲ್ಲಿ ಕೂದಲನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ಕೂದಲನ್ನು ಆರೈಕೆ ಮಾಡಿಕೊಳ್ಳುವುದು ಕೂದಲಿನ ಸ್ನಾನದಿಂದಲೇ ಆರಂಭವಾಗುತ್ತದೆ. ಬೆಚ್ಚಗಿನ ನೀರಿನಿಂದ ತೊಳೆಯುವುದು, ಸೌಮ್ಯವಾದ ಶಾಂಪೂಗಳ ಬಳಕೆ, ಸರಿಯಾದ ಕಂಡೀಷನರ್ನೊಂದಿಗೆ ಬಳಸುವುದರಿಂದ ಕೂದಲಿನ ಉದುರುವಿಕೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.