

ಚೀನಾ : ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದಲ್ಲಿ ಮೊಟ್ಟಮೊದಲ ಬಾರಿಗೆ ಬಾರ್ಬೆಕ್ಯೂ ಓವನ್ (BBQ Oven) ಅನ್ನು ಪರಿಚಯಿಸುವ ಮೂಲಕ ಚೀನಾ ತನ್ನ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಸಂಪೂರ್ಣ ಹೊಸ ಮೈಲುಗಲ್ಲನ್ನು ಸಾಧಿಸಿದೆ ಎಂದು ತಿಳಿದುಬಂದಿದೆ.
ಚೀನಾದ ರಾಜ್ಯ ಮಾಧ್ಯಮ ಹಂಚಿಕೊಂಡ ವಿಡಿಯೋದಲ್ಲಿ ಅಲ್ಲಿನ ಗಗನಯಾತ್ರಿಗಳು ಕಕ್ಷೆಯಲ್ಲಿ ಕೋಳಿ ರೆಕ್ಕೆಗಳನ್ನು ಬೇಯಿಸುವುದನ್ನು ಕಾಣಬಹುದು. ಇದು ಬಾಹ್ಯಾಕಾಶ ಜೀವನದ ವಿಕಾಸದಲ್ಲಿ ಒಂದು ಮೈಲಿಗಲ್ಲಿನ ಕ್ಷಣವನ್ನು ಸೂಚಿಸುತ್ತದೆ.
ಶೂನ್ಯ ಗುರುತ್ವಾಕರ್ಷಣೆಯಲ್ಲಿ ಆಹಾರಗಳನ್ನು ಬೇಯಿಸುವ ಬಿಸಿ ಗಾಳಿಯ ಒವನ್ ಅನ್ನು ಶೆನ್‌ಝೌ-21 ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸಿದೆ. ಇದು ಗಗನಯಾತ್ರಿಗಳು ದಶಕಗಳಿಂದ ಅವಲಂಬಿಸಿರುವ ಫ್ರಿಜ್ ಬದಲಿಗೆ ಕೋಳಿ ರೆಕ್ಕೆಗಳು ಮತ್ತು ಸ್ಟಿಕ್ ಸೇರಿದಂತೆ ಹೊಸದಾಗಿ ಬೇಯಿಸಿದ ಊಟಗಳನ್ನು ಬಿಸಿ ಮಾಡಲು ಅನುವು ಮಾಡಿಕೊಟ್ಟಿದೆ.
ಈ ಬದಲಾವಣೆಯು ಚೀನಾದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಒಂದು ಮಹತ್ವದ ಹೆಜ್ಜೆಯಾಗಿದ್ದು, ದೀರ್ಘಾವಧಿಯ ಕೆಲಸದ ಸಮಯದಲ್ಲಿ ಗಗನಯಾತ್ರಿಗಳ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಗಮನ ಹರಿಸಿದೆ. ಹಾಗೆಯೇ ಈ ವೇಳೆ ಶೆನ್‌ಝೌ-20 ಮತ್ತು ಶೆನ್‌ಝೌ-21 ಎರಡರ ಸಿಬ್ಬಂದಿಗಳು ಈ ಪ್ರಯೋಗದಲ್ಲಿ ಭಾಗವಹಿಸಿದ್ದು, ಇದರ ಯಶಸ್ವಿ ಪರೀಕ್ಷೆಯು ಪ್ರಪಂಚದಾದ್ಯಂತ ಗಮನ ಸೆಳೆದಿದೆ.
ಗಗನಯಾತ್ರಿಗಳು ಓವನ್‌ನಿಂದ ಬೆಂದಂತಹ ಕೋಳಿ ರೆಕ್ಕೆಗಳನ್ನು ಹೊರತೆಗೆದಾಗ ಸಂತೋಷಪಡುತ್ತಿದ್ದಾರೆ. ಇದು ಬಾಹ್ಯಾಕಾಶದಲ್ಲಿ ಅಡುಗೆ ತಂತ್ರಜ್ಞಾನ ಎಷ್ಟರ ಮಟ್ಟಿಗೆ ಪ್ರಭಾವವನ್ನು ಹೊಂದಿದೆ ಎಂದು ತೋರಿಸುತ್ತದೆ.
ಹೊಗೆ ಮುಕ್ತ ಅಡುಗೆ ತಯಾರಿಸಲು ನಾವು ಹೆಚ್ಚಿನ ತಾಪಮಾನದ ವೇಗವರ್ಧನೆ ತಂತ್ರಜ್ಞಾನಗಳನ್ನು ಬಳಸಿದ್ದೇವೆ. ಈ ಓವನ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಇದು ಗಗನಯಾತ್ರಿಳಿಗೆ ಕೆಲವೊಮ್ಮೆ ಸ್ಪರ್ಶಿಸುವ ಸುಟ್ಟಗಾಯಗಳನ್ನು ತಡೆಗಟ್ಟಲು ಇದು ಸಹಾಯ ಮಾಡುತ್ತದೆ ಎಂದು ಚೀನಾ ಗಗನಯಾತ್ರಿ ಸಂಶೋಧನೆ ಮತ್ತು ತರಬೇತಿ ಕೇಂದ್ರದ ಸಂಶೋಧಕ ಕ್ಸುವಾನ್ ಯೋಂಗ್ ಸುದ್ಧಿಮೂಲಗಳಿಗೆ ಮಾಹಿತಿ ನೀಡಿದ್ದಾರೆ.
ನಾವು ಓವನ್ ಒಳಗೆ ರೇಂಜ್ ಹುಡ್ ಅನ್ನು ನಿರ್ಮಿಸಿದ್ದೇವೆ. ಇದು ಅಂತರ್ನಿರ್ಮಿತ ಶುದ್ಧೀಕರಣದೊಂದಿಗೆ ಬಿಸಿ ಗಾಳಿಯ ಓವನ್ ಆಗಿದೆ. ಇದನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ್ತವವಾಗಿ ಬಳಸಬಹುದಾದ ವಿಶ್ವದ ಮೊದಲ ಒವನ್ ಆಗಿದೆ. ಎಂದು ಕೇಂದ್ರದಲ್ಲಿರುವ ಗಗನಯಾತ್ರಿ ವ್ಯವಸ್ಥೆಯ ಉಪ ಮುಖ್ಯ ವಿನ್ಯಾಸಕ ಲಿಯು ವೀಬೊ ವಿವರಿಸಿದ್ದಾರೆ. (ಏಜೆನ್ಸೀಸ್)