ಚಿನ್ನ ಕೊಂಚ ಇಳಿಕೆ, ಬೆಳ್ಳಿ ಸ್ಥಿರ: ಹೀಗಿದೆ ದೇಶದ ಪ್ರಮುಖ ನಗರಗಳಲ್ಲಿ ಇಂದಿನ ದರ | Gold Rates

gold
Published on

ನವದೆಹಲಿ: ಭಾರತದಲ್ಲಿ ಚಿನ್ನದ ಬೆಲೆ ಕೊಂಚ ಕುಸಿತ (Gold Rates) ಕಂಡಿದೆ. ಇಂದು ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 550 ರೂ. ಇಳಿಕೆಯಾಗಿ 1,22,020 ರೂ. ತಲುಪಿದೆ. ಇನ್ನು 22 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 500 ರೂ. ಕಡಿಮೆಯಾಗಿ, 1,11,880 ರೂ. ಆಗಿದೆ. ಇದರೊಟ್ಟಿಗೆ 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 410 ರೂ. ಇಳಿಕೆಯಾಗಿ 91,520 ರೂ. ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ

  • ಇಂದು ದೆಹಲಿಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,22,020 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,11,880 ರೂ. ಆಗಿದೆ.
  • ಮುಂಬೈ, ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,22,020 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,11,880 ರೂ.ಗೆ ಬಂದು ನಿಂತಿದೆ.
  • ಇನ್ನು ಹೈದರಾಬಾದ್​ ಸೇರಿದಂತೆ ತೆಲುಗು ರಾಜ್ಯಗಳಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,22,020 ರೂ.ಗೆ ತಲುಪಿದೆ. ಅದೇ ರೀತಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,11,880 ರೂ. ಆಗಿದೆ.

ಬೆಳ್ಳಿ ಬೆಲೆ ಸ್ಥಿರ

  • ದೆಹಲಿಯಲ್ಲಿ ಒಂದು ಕೆಜಿ ಬೆಳ್ಳಿ ಇಂದು 1,52,500 ರೂ.ಗೆ ತಲುಪಿದೆ.
  • ಮುಂಬೈ, ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ 1,52,500 ರೂ. ಇದೆ.
  • ಇನ್ನು ಚೆನ್ನೈ, ಹೈದರಾಬಾದ್‌, ತೆಲಂಗಾಣದಲ್ಲಿ ಪ್ರತಿ ಕೆಜಿ ಬೆಲೆ 1,65,000 ರೂ. ಆಗಿದೆ.

ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net