ಹಾವು ಕಂಡ್ರೆ ಸಾಕು... ಚೆಂದ ಕಾಣುವ 'ಸೆಕ್ರೆಟರಿ ಬರ್ಡ್'​ ಬಗ್ಗೆ ಇಲ್ಲಿವೆ ನಿಮಗೆ ಗೊತ್ತಿರದ ಸಂಗತಿಗಳು | ​Secretary Bird

ಹಾವು ಕಂಡ್ರೆ ಸಾಕು... ಚೆಂದ ಕಾಣುವ 'ಸೆಕ್ರೆಟರಿ ಬರ್ಡ್'​ ಬಗ್ಗೆ ಇಲ್ಲಿವೆ ನಿಮಗೆ ಗೊತ್ತಿರದ ಸಂಗತಿಗಳು | ​Secretary Bird
Published on

Secretary Bird: ಬಾನಿನಲ್ಲಿ ವಿಮಾನಗಳಿಗಿಂತಲೂ ಮೊದಲು ಹಾರಾಡುವುದನ್ನು ಕಲಿತದ್ದು ಹಕ್ಕಿಗಳು. ಈ ಶಕ್ತಿಯನ್ನು ಭಗವಂತ ಮೊದಲು ಹಕ್ಕಿಗಳಿಗೆ ನೀಡಿರುವುದು ನಿಜಕ್ಕೂ ವಿಶೇಷವೇ ಸರಿ. ಜಗತ್ತಿನಲ್ಲಿ ಹಲವಾರು ಪ್ರಬೇಧಗಳಿರುವ ರೆಕ್ಕೆಯ ಜೀವಿಗಳು, ಸಾಕಷ್ಟು ವಿಶಿಷ್ಟ ಹಾಗೂ ವೈಶಿಷ್ಟ್ಯತೆಗಳಿಂದ ಕೂಡಿವೆ. ಹೀಗಿರುವಾಗ, ಇಲ್ಲೊಂದು ಹಕ್ಕಿ ತನ್ನ ಭಯಂಕರ ದಾಳಿ ಮತ್ತು ಗುರಿ ಮೂಲಕ ನೋಡುಗರ ಸದ್ಯ ಹುಬ್ಬೇರಿಸಿದೆ.

ಬೇಟೆಯನ್ನು ಬೆಂಬಿಡದೆ ದಾಳಿ ನಡೆಸುವ ಈ ಹಕ್ಕಿಯೂ ಹಾವುಗಳನ್ನು ಕಂಡರೆ ಸಾಕು ತನ್ನ ಉಗುರುಗಳಿಂದ ಅವುಗಳನ್ನು ಕುಕ್ಕಿ ಕೊಲ್ಲುತ್ತವೆ. ಅದರಲ್ಲೂ ಅತ್ಯಂತ ವಿಷಕಾರಿ ಹಾವುಗಳು ಅಟ್ಯಾಕ್​ ಮಾಡಲು ಯತ್ನಿಸಿದರೆ, ಅವನ್ನು ಅತ್ಯಂತ ಕ್ರೂರವಾಗಿ ಕೊಂದು ತಿನ್ನುತ್ತದೆ. ಮೇಲ್ನೋಟಕ್ಕೆ ಸುಂದರವಾಗಿರುವ ಈ ಹಕ್ಕಿಯನ್ನು 'ಸೆಕ್ರೆಟರಿ ಬರ್ಡ್'​ ಎಂದು ಕರೆಯಲಾಗುತ್ತದೆ. ಇತರೆ ಪ್ರಾಣಿಗಳಿಗಿಂತ ಹಾವುಗಳು ಇದರ ನೆಚ್ಚಿನ ಬೇಟೆಯಾಗಿದೆ. ಆದಾಗ್ಯೂ, ಸೆಕ್ರೆಟರಿ ಬರ್ಡ್​ ವಿಡಿಯೋ ಸದ್ಯ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ವಾಸ್ತವವಾಗಿ, ಈ ಹಕ್ಕಿ ಅತ್ಯಂತ ವಿಷಕಾರಿ ಹಾವುಗಳನ್ನು ಕೊಂದು, ನಿಮಿಷಗಳೊಳಗೆ ತಿಂದು ಮುಗಿಸುತ್ತದೆ. ಸೆಕ್ರೆಟರಿ ಬರ್ಡ್ ಬೇಟೆಗೆ ಹೆಸರುವಾಸಿಯಾದ ಪಕ್ಷಿಯಾಗಿದ್ದು, ಆಫ್ರಿಕಾದಲ್ಲಿ ಮೊದಲು ಕಂಡುಬಂದ ಈ ಹಕ್ಕಿ ತನ್ನ ಹೆಚ್ಚಿನ ಸಮಯವನ್ನು ನೆಲದ ಮೇಲೆ ಕಳೆಯುತ್ತದೆ. ನೋಡಲು ಆಕರ್ಷಕ ಮೈಬಣ್ಣ ಹೊಂದಿರುವ ಸೆಕ್ರೆಟರಿ ಬರ್ಡ್​, ಸುಂದರವಾಗಿ ಕಂಡರೂ ಅತ್ಯಂತ ಅಪಾಯಕಾರಿ. ಅದಕ್ಕಾಗಿಯೇ ಇದನ್ನು 'ದಿ ಆರ್ಚರ್ ಆಫ್ ಸ್ನೇಕ್ಸ್​' ಎಂದೂ ಆಂಗ್ಲ ಪದದಲ್ಲಿ ಕರೆಯುತ್ತಾರೆ.

ಈ ಹಕ್ಕಿ ಹಾವುಗಳನ್ನು ಹಿಡಿಯಲು ತನ್ನ ತೀಕ್ಷ್ಣವಾದ, ಶಕ್ತಿಯುತ ಕಾಲುಗಳನ್ನು ಬಳಸುತ್ತದೆ. ತನ್ನ ದೇಹದ ತೂಕಕ್ಕಿಂತ ಐದು ಪಟ್ಟು ಬಲದಿಂದ ಒದೆಯುವ ಸಾಮರ್ಥ್ಯ ಹೊಂದಿದೆ. ಆ ಬಲ ಸುಮಾರು 195 ನ್ಯೂಟನ್‌ಗಳು ಎನ್ನಲಾಗಿದೆ. ಇದೊಂದು ಕಿಕ್​ ಕೇವಲ 15 ಮಿಲಿಸೆಕೆಂಡ್​ಗಳಲ್ಲಿ ಹಾವನ್ನು ಕೊಲ್ಲುತ್ತದೆ. ವಿಷಯವನ್ನು ಕಕ್ಕುವ ಸರ್ಪಗಳಿಗೆ ಆನೆಯಂತ ದೊಡ್ಡ ಜೀವಿಗಳೇ ಹೆದರುವಾಗ, ಈ ಪಕ್ಷಿ ಮಾತ್ರ ಅವುಗಳನ್ನು ಆಕ್ರೋಶದಿಂದ ಕುಕ್ಕಿ ಕೊಲ್ಲುವ ದೃಶ್ಯ ನೋಡುಗರ ಅಚ್ಚರಿಗೆ ಕಾರಣವಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net