

ಬೆಂಗಳೂರು: ಹೊಸ ಬಟ್ಟೆ ಯಾರಿಗೆ ತಾನೇ ಇಷ್ಟವಿಲ್ಲ? ಪ್ರತಿಯೊಬ್ಬರೂ ಹೊಸ ಬಟ್ಟೆಗಳನ್ನು ಖರೀದಿಸಲು ಮತ್ತು ಧರಿಸಲು ಇಷ್ಟಪಡುತ್ತಾರೆ. ಹೊಸ ಬಟ್ಟೆಗಳನ್ನು ತೊಳೆಯದೆ ನೇರವಾಗಿ ಧರಿಸುತ್ತಾರೆ. ಹೀಗೆ ಧರಿಸುವುದರಿಂದ ಆರೋಗ್ಯ ಸಮಸ್ಯೆಗಳು ಬರಬಹುದು ಎಂಬುದು ಯಾರಿಗೂ ತಿಳಿದಿಲ್ಲ ಎನ್ನುತ್ತಾರೆ ತಜ್ಞರು.
ಹೊಸ ಬಟ್ಟೆಗಳು ಮನೆಗೆ ಬಂದ ತಕ್ಷಣ ಒಮ್ಮೆ ತೊಟ್ಟು ನೋಡಬೇಕು ಎನ್ನುವ ಬಯಕೆ ಎಲ್ಲರದ್ದು, ಹಾಗೆಯೇ ಹೊಸ ಬಟ್ಟೆಯನ್ನು ಕಾಲೇಜು, ಕಚೇರಿ, ಶುಭ ಕಾರ್ಯಕ್ಕೋ ಧರಿಸುತ್ತಾರೆ. ಹೀಗೆ ಮಾಡೋದು ತಪ್ಪು ಅಂತಾರೆ ತಜ್ಞರು. ಇದರಿಂದ ಇನ್ ಫೆಕ್ಷನ್, ಖಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನವರು ಹೊಸ ಬಟ್ಟೆ ಒಗೆಯುವುದಿಲ್ಲ, ಇದು ತಪ್ಪು ಎನ್ನುತ್ತಾರೆ ಆರೋಗ್ಯ ತಜ್ಞರು.
ಹೊಸ ಬಟ್ಟೆಗಳಲ್ಲಿ ಬ್ಯಾಕ್ಟೀರಿಯಾ: ನಾವು ಅವುಗಳನ್ನು ಹೊಸ ಬಟ್ಟೆ ಎಂದು ಭಾವಿಸುತ್ತೇವೆ, ಆದರೆ ಹೊಸ ಬಟ್ಟೆ ನಿಮ್ಮ ಕೈ ಸೇರುವ ಮೊದಲು ಶೇಖರಣಾ ಸ್ಥಳವು ಸ್ವಚ್ಛವಾಗಿತ್ತೋ, ಇಲ್ಲವೋ ಎಂಬುದು ನಮಗೆ ತಿಳಿದಿಲ್ಲ. ಪ್ಯಾಕಿಂಗ್ ಸಮಯದಲ್ಲಿ ಕೂಡ ಸ್ವಚ್ಛತೆ ಹೇಗಿರುತ್ತದೆ ಎನ್ನುವುದು ಗೊತ್ತಿರುವುದಿಲ್ಲ. ಹಾಗಾಗಿ ಅವುಗಳ ಮೇಲೆ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಇರಲೇಬೇಕು. ಅದಕ್ಕಾಗಿಯೇ ಹೊಸ ಬಟ್ಟೆಗಳನ್ನು ಬಳಸುವ ಮೊದಲು ಒಮ್ಮೆ ತೊಳೆಯಬೇಕು.
ಬಟ್ಟೆಗಳನ್ನು ತಯಾರಿಕೆಯಲ್ಲಿ ವಿವಿಧ ಬಣ್ಣಗಳು ಮತ್ತು ಇತರ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ಕೆಲವು ರಾಸಾಯನಿಕಗಳನ್ನು ಬಟ್ಟೆಗಳ ಪಾಲಿಶ್ ಮತ್ತು ಪ್ರಿಂಟಿಂಗ್‌ನಲ್ಲಿ ಬಳಸಲಾಗುತ್ತದೆ. ಹಾಗಾಗಿ ಹೊಸ ಬಟ್ಟೆ ಎಷ್ಟೇ ಸ್ವಚ್ಛವಾಗಿರಲಿ.. ಒಮ್ಮೆ ಒಗೆಯುವುದು ಉತ್ತಮ. ಇಲ್ಲವಾದೆ ಚರ್ಮದ ಸಮಸ್ಯೆ ಎದುರಾಗಬಹುದು.
ನೀವು ಹೊಸ ಬಟ್ಟೆಗಳನ್ನು ಧರಿಸಿದಾಗ, ನೀವು ತುರಿಕೆ ಮತ್ತು ಕಿರಿಕಿರಿಯನ್ನು ಅನುಭವಿಸುತ್ತೀರಿ. ಅವುಗಳಲ್ಲಿರುವ ಬ್ಯಾಕ್ಟೀರಿಯಾಗಳು ಇದಕ್ಕೆ ಕಾರಣ. ಅಲ್ಲದೆ ಹೊಸ ಬಟ್ಟೆಗಳು ಬೆವರು ಮತ್ತು ನೀರನ್ನು ಹೆಚ್ಚು ಹೀರಿಕೊಳ್ಳುವುದಿಲ್ಲ. ಹೀಗಾಗಿ ಚರ್ಮದ ಸಮಸ್ಯೆ ಉಂಟಾಗುತ್ತದೆ.
ಇದನ್ನೂ ಓದಿ: ಮೇಕೆ ಹಾಲು ಕುಡಿದರೆ ರೋಗಗಳಿಂದ ದೂರವಿರಬಹುದು…. ಇತ್ತೀಚಿನ ದಿನಗಳಲ್ಲಿ, ಬಟ್ಟೆ ಅಂಗಡಿಯಲ್ಲಿರುವ ಪ್ರತಿಯೊಬ್ಬರೂ ಬಟ್ಟೆಗಳನ್ನು ಖರೀದಿಸುವ ಮೊದಲು ಅವುಗಳ ಟ್ರಯಲ್ ನೋಡುತ್ತಾರೆ. ಆ ಬಟ್ಟೆಗಳನ್ನು ಧರಿಸಿದ ವ್ಯಕ್ತಿಗೆ ಸೋಂಕಿರಬಹುದು ಅಥವಾ ಈ ಹಿಂದೆ ಅದೇ ಬಟ್ಟೆಯನ್ನು ಧರಿಸಿದ್ದ ಇನ್ಯಾರಿಗೋ ಸೋಂಕಿರಬಹುದು. ಅದು ಆ ಬಟ್ಟೆಯ ಮೂಲಕ ಆ ವ್ಯಕ್ತಿಯ ದೇಹಕ್ಕೂ ತಗುಲುತ್ತದೆ. ಹೀಗಾಗಿ ಎಚ್ಚರಿಕೆ ಅಗತ್ಯವಾಗಿದೆ.
ಗಮನಿಸಿ: ಈ ಮಾಹಿತಿಯನ್ನು ತಜ್ಞರಿಂದ ಸಂಗ್ರಹಿಸಲಾಗಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.