

Skin Glow: ಕೊರಿಯನ್ನರಂತೆ ಹೊಳೆಯುವ ಮುಖದ ಚರ್ಮ ಯಾರಿಗೆ ಬೇಡ ಹೇಳಿ, ಪ್ರತಿಯೊಬ್ಬರು ಕನ್ನಡಿಯಂತೆ ತಮ್ಮ ಚರ್ಮ ಪಳಪಳ ಹೊಳೆಯಬೇಕು ಎಂದುಕೊಳ್ಳುವುದು ಸಹಜ. ಹೀಗಾಗಿ ಚರ್ಮ ಹೊಳೆಯಲು ಏನು ಮಾಡಬೇಕು ಎಂಬುವುದನ್ನು ತಿಳಿಯೋಣ ಬನ್ನಿ...
ನೀವು ಕೊರಿಯಾನ್ ಸೆಲಿಬ್ರಿಟಿ ಕೆ-ಡ್ರಾಮಾರ ಅಭಿಮಾನಿಯಾಗಿದ್ದರೆ, ಕೊರೆಯನ್ ಗ್ಲಾಸ್ ಸ್ಕೀನ್ ಬಗ್ಗೆ ನಿಮಗೆ ತಿಳಿದಿರುತ್ತದೆ. ಇದೇ ತರ ನಮ್ಮ ಸ್ಕೀನ್ ಹೊಳೆಯಬೇಕೆಂದು ಬಯಸಿರುತ್ತಿರಾ.. ಗ್ಲಾಸ್ ಸ್ಕೀನ್ ಎಂದರೆ, ಯಾವುದೇ ಕಲೆ ಮತ್ತು ಸೊಕ್ಕುಗಳಿಲ್ಲದೆ ಗ್ಲಾಸ್ನಂತೆ ಪಳಪಳ ಹೊಳೆಯುವ ಚರ್ಮ ಹೊಂದಿರುವುದಾಗಿದೆ. ಇದು ಸಾಮಾನ್ಯವಾಗಿ ಕೊರೆಯನ್ ದೇಶದಲ್ಲಿ ಕಾಣಸಿಗುತ್ತದೆ. ಇಂಹತ ಚರ್ಮವನ್ನು ಪಡೆಯಲು ದಿನನಿತ್ಯ ನಾವು ಮಾಡಬೇಕಾದ ಕೆಲಸ ಏನು ಎಂಬುದರ ಕೆಲ ಸಲಹೆ ತಿಳಿಯೋಣ.
ಸ್ಟೀಮ್ ಸೆಷನ್ ಚರ್ಮಕ್ಕೆ ತುಂಬಾ ಒಳ್ಳೆಯದು. ನೀವು ಕೊರಿಯನ್ ಗ್ಲಾಸ್ನ ಚರ್ಮವನ್ನು ಬಯಸಿದರೆ ನಿಯಮಿತವಾಗಿ ಸ್ಟೀಮ್ ಸೆಷನ್ ಮತ್ತು ಸ್ಟೀಮ್ ಶೆವರ್ ಮಾಡಬೇಕಾಗುತ್ತದೆ. ನಾವು ಪ್ರತಿದಿನ ಹಬೆಯ ಚರ್ಮ ತಗೆದುಕೊಳ್ಳುವುದರಿಂದ ಚರ್ಮದ ರಂಧ್ರಗಳು ತೆಗೆದುಕೊಂಡು ಕಲೆ ಮತ್ತು ಕೊಳೆಚೆಯನ್ನು ಹೊರ ಹಾಕುತ್ತವೆ. ದಿನಂಪ್ರತಿ 5-7 ನಿಮಿಷಗಳ ಕಾಲ ಹಬೆ ತೆಗೆದುಕೊಳ್ಳುವ ಕೆಲಸ ಮಾಡಬೇಕು.
ಪ್ರತಿದಿನ ಮುಖದ ವ್ಯಾಯಾಮ ಮಾಡಬೇಕು. ಪ್ರತಿಯೊಬ್ಬ ಕೊರೆಯನ್ ಸುಂದರಿ ತನ್ನ ಚರ್ಮ ಸುಂದರವಾಗಿ ಕಾಣಲು ಮತ್ತು ಸ್ಪಷ್ಟತೆ ಕಾಣಲು ಏನು ಬೇಕಾದರು ಮಾಡುತ್ತಾರೆ. ಹೀಗಾಗಿ, ದಿನಪ್ರತಿ ನಾವು ಮುಖದ ಮತ್ತು ಚರ್ಮದ ವ್ಯಾಯಾಮ ಮಾಡಬೇಕು.
ಕೊರಿಯನ್ ಚರ್ಮವು ಹೊಳೆಯಲು ಆಳವಾದ ಶುದ್ಧೀಕರಣವು ಪ್ರಮುಖವಾಗಿದೆ. ಹೊಳೆಯುವ ಚರ್ಮಕ್ಕಾಗಿ ದಿನಕ್ಕೆ ಎರಡು ಬಾರಿ ಮೈಕೆಲ್ಲರ್ ಕ್ಲೆನ್ಸಿಂಗ್(ಶುದ್ಧ ನೀರು) ನೀರಿನಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ ಮತ್ತು ನಿಂಬೆ ಆಧಾರಿತ ಫೇಸ್ ವಾಶ್ ಅನ್ನು ಆರಿಸಿಕೊಳ್ಳಬೇಕು.
ಪ್ರತಿಸಾರಿ ಮುಖವನ್ನು ತೊಳದ ಬಳಿಕ ಒದ್ದೆಯಾದ ಬಟ್ಟೆಯಿಂದ ಮುಖದ ಚರ್ಮ ಸ್ವಚ್ಛಗೊಳಿಸಬೇಕು. ಮೃದುವಾದ ಬಟ್ಟೆಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಅದ್ದಿ ನೀರನ್ನು ಹಿಂಡಿ ತೆಗೆಯಿರಿ. ಇದಾದ ನಂತರ, ತೊಳೆಯುವ ಬಟ್ಟೆಯನ್ನು ನಿಮ್ಮ ಮುಖದ ಮೇಲೆ ನಿಧಾನವಾಗಿ ಸರಿಸಿ (ಮೇಲ್ಮುಖವಾಗಿ) ಮತ್ತು ನಿಮ್ಮ ಮುಖದಿಂದ ಕೊಳಕು, ಧೂಳು ಮತ್ತು ಕೊಳೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಕೊರೆಯನ್ನರು ಇದನ್ನು ಆಳವಾದ ಶುದ್ಧಿಕರಣ ಎಂದು ಕರೆಯುತ್ತಾರೆ. ಇದಕ್ಕಾಗಿಯೇ ಮಾರುಕಟ್ಟೆಯಲ್ಲಿ ಕೊರಿಯನ್ನರ ಚರ್ಮದ ಗುಟ್ಟು ಬೇಡಿಕೆ ಇರುವುದು.(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.