ಜಪಾನ್: ( food blogger ) ಸಾಮಾನ್ಯವಾಗಿ ಆಹಾರ ಪ್ರಿಯರು ವಿವಿಧ ರೀತಿಯ ಭಕ್ಷ್ಯಗಳನ್ನು ತಿನ್ನಲು ಇಷ್ಟಪಡುತ್ತಾರೆ. ನೆಚ್ಚಿನ ಆಹಾರ ಮುಂದೆ ಬಂದಾಗ, ಅದನ್ನು ಮನಸ್ಸಿಗೆ ತೃಪ್ತವಾಗುವಷ್ಟು ತಿನ್ನುತ್ತಾರೆ. ಆದರೆ ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಆದರೆ ಜಪಾನ್‌ನ ಒಬ್ಬ ಊಹೆಗೂ ಮೀರಿ ತಿಂದಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಹಿಳೆಯ ಹೆಸರು ಯುಕಾ ಕಿನೋಶಿತಾ ಫುಡ್ ಬ್ಲಾಗರ್. ಈಕೆ ಸಾಕಷ್ಟು ಜನಪ್ರಿಯರಾಗಿದ್ದಾರೆ ಮತ್ತು YouTube ನಲ್ಲಿ 5.2 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಈಕೆ ತಮ್ಮ ಆರೋಗ್ಯ ಸಮಸ್ಯೆಗಳಿಂದಾಗಿ ದೀರ್ಘಕಾಲದವರೆಗೆ ಸುದ್ದಿಯಿಂದ ದೂರವಿದ್ದರು.
ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್ ಇರುವುದು ಪತ್ತೆಯಾಯಿತು. ಆದರೆ, ಅನಾರೋಗ್ಯದಿಂದ ಗುಣಮುಕ್ತಳಾಗಿ 7 ತಿಂಗಳ ವಿರಾಮದ ನಂತರ ಜನರ ಮತ್ತೆ ಭರ್ಜರಿಯಾಗಿ ಎಂಟ್ರಿಯಾಗಿದ್ದಳು. ಈ ಹಿಂದೆ ಯುಕಾ ಒಂದೇ ಬಾರಿಗೆ 600 ಫ್ರೈಡ್ ಚಿಕನ್ ಮತ್ತು 100 ಬರ್ಗರ್‌ಗಳನ್ನು ತಿಂದಿದ್ದಳು. ಆದರೆ ಈಗ ಈ ಎಲ್ಲ ಸಾಹಸಗಳಿಂದ ದೂರವಾಗಿದ್ದಾಳೆ. ಈ ಕುರಿತಾಗಿಯೇ ಆಕೆಯೇ ಹೇಳಿಕೊಂಡಿದ್ದಾಳೆ.
ನಿವೃತ್ತಿಯ ನಂತರ, ಯುಕಾ ವೀಡಿಯೊದಲ್ಲಿ ಹೀಗೆ ಹೇಳಿದ್ದರು, ‘ಇದು ಒಳ್ಳೆಯದು, ನಾನು ಈಗ ಬಹಳಷ್ಟು ಆಹಾರವನ್ನು ತಿನ್ನುವುದರಿಂದ ನಿವೃತ್ತಿ ಹೊಂದುತ್ತಿದ್ದೇನೆ. ಫೆಬ್ರವರಿ 4 ರಂದು ನನಗೆ 40 ವರ್ಷ ತುಂಬುತ್ತದೆ. ಈಗ ನನಗೆ ತುಂಬಾ ಆಹಾರ ತಿಂದು ಸುಸ್ತಾಗಿದೆ. ಈಗ ನಾನು ದೊಡ್ಡ ಭಕ್ಷಕನಾಗಿ ನನ್ನ ಕೆಲಸದ ಪ್ರಯಾಣವನ್ನು ಕೊನೆಗೊಳಿಸುತ್ತಿದ್ದೇನೆ. ನಾನು ತುಂಬಾ ದಣಿದಿದ್ದೇನೆ. ಕಳೆದ ಕೆಲವು ವರ್ಷಗಳಿಂದ, ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈಗ ನನಗೆ ಸಾಮಾನ್ಯ ವ್ಯಕ್ತಿಯಂತೆ ಊಟ ಮಾಡಲು ತೊಂದರೆಯಾಗುತ್ತಿದೆ, ಆದರೆ ನನಗೂ ಅದು ಅಭ್ಯಾಸವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಾನು ಸ್ವಲ್ಪ ಹೊಂದಿಕೊಳ್ಳಬೇಕಾಗುತ್ತದೆ ಎಂದಿದ್ದಾಳೆ.
ಯುಕಾ ನಿವೃತ್ತಿಯ ನಂತರ, ಅವರ ಅಭಿಮಾನಿಗಳು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಮತ್ತು ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.