Valentine’s Day ದಂದು ಈ ರಾಜ್ಯದ ಶಾಲೆಗಳಿಗೆ ರಜೆ!: ಕಾರಣ ಹೀಗಿದೆ..

blank

Valentine’s Day: ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಫೆ.14ರಂದು ಪ್ರೇಮಿಗಳ ದಿನ(Valentine’s Day), ಅಂದು ಹೊಸ ಲವರ್ಸ್​​ ತಮ್ಮ ಪ್ರೇಮ ನಿವೇದನೆ ಸೇರಿದಂತೆ ತಮ್ಮ ಅಂತಾರಳದ ಭಾವನೆಗಳನ್ನು ವ್ಯಕ್ತಪಡಿಸುವ ದಿನ ಎಂದು ಹೇಳಲಾಗುತ್ತದೆ. ಹೀಗಾಗಿ, ಫೆ.14ರಂದು ಭಾರತದ ಪಶ್ಚಿಮ ಬಂಗಾಳದ ಶಾಲೆಗಳಿಗೆ ರಜೆ ನೀಡಲಾಗಿದ್ದು, ಇದೀಗ ಸಖತ್​ ಸುದ್ದಿಯಾಗಿದೆ.

ಇದನ್ನೂ ಓದಿ:ಅಪಘಾತದಲ್ಲಿ ಪಂತ್​ ಜೀವ ಉಳಿಸಿದ ಯುವಕನಿಂದ ಆತ್ಮಹತ್ಯೆ ಯತ್ನ! ಜೀವನ್ಮರಣ ಹೋರಾಟ, ಪ್ರೇಯಸಿ ಸಾವು | Rishabh Pant

ಹೌದು, ಇಲ್ಲಿನ ಸರ್ಕಾರಿ, ಖಾಸಗಿ ಸೇರಿದಂತೆ ಎಲ್ಲಾ ರೀತಿಯ ಶಾಲೆಗಳಿಗೆ ಫೆ.13 ಮತ್ತು 14ರಂದು ಶಬ್-ಎ-ಬರಾತ್ ಮತ್ತು ಪಂಚನನ್ ಬರ್ಮಾ ಜಯಂತಿಯ ಕಾರಣ ರಾಜ್ಯ ಸರ್ಕಾರ ಶಾಲೆಗಳಿಗೆ ರಜೆ ಘೋಷಿಸಿದೆ. ಕಾಕತಾಳೀಯ ಎಂಬಂತೆ ಪ್ರೇಮಿಗಳ ದಿನದಂತೆ ಶಾಲೆಗಳಿಗೆ ರಜೆ ನೀಡಿದ್ದು, ಇದೀಗ ಸೋಷಿಯಲ್​​ ಮೀಡಿಯಾದಲ್ಲಿ ನೆಟಿಜನ್​ ವ್ಯಾಲೆಂಟನ್ಸ್​ ದಿನದಂದು ರಜೆ ನೀಡಲಾಗಿದೆ ಎಂದು ತಮಾಷೆ ಮಾಡುತ್ತಿದ್ದಾರೆ.

ಫೆ.13,14ರಂದು ರಜೆ

ಶಬ್-ಎ-ಬರಾತ್ ಒಂದು ಪ್ರಮುಖ ಇಸ್ಲಾಮಿಕ್ ಹಬ್ಬವಾಗಿದ್ದು, ಇದನ್ನು ಇಸ್ಲಾಮಿಕ್ ತಿಂಗಳಾದ ಶಬಾನ್‌ನ 15ನೇ ರಾತ್ರಿ(ಫೆ.13) ಆಚರಿಸಲಾಗುತ್ತದೆ. ಮುಸ್ಲಿಮರು ಪ್ರಾರ್ಥಿಸುವ, ಆಶೀರ್ವಾದ ಪಡೆಯುವ ಮತ್ತು ತಮ್ಮ ಪೂರ್ವಜರನ್ನು ಗೌರವಿಸುವ ಈ ರಾತ್ರಿಯನ್ನು ಕ್ಷಮೆ ಮತ್ತು ಕರುಣೆಯ ರಾತ್ರಿ ಎಂದು ಪರಿಗಣಿಸಲಾಗುತ್ತದೆ. ಅನೇಕ ಮುಸ್ಲಿಮರು ಈ ರಾತ್ರಿ ಮಸೀದಿಗಳಲ್ಲಿ ಮತ್ತು ಮನೆಯಲ್ಲಿ ಪ್ರಾರ್ಥನೆ ಮಾಡುವ ಮೂಲಕ ಕ್ಷಮೆ ಮತ್ತು ಮಾರ್ಗದರ್ಶನವನ್ನು ಪಡೆಯುತ್ತಾರೆ.

ಇದನ್ನೂ ಓದಿ:ಮೆಟ್ರೋ ಪ್ರಯಾಣದರ ಇಳಿಸಬೇಕೆಂಬ ಅಭಿಪ್ರಾಯ ನಮ್ಮದು, ಅಂತಿಮ ತೀರ್ಮಾನ ಕೇಂದ್ರದ್ದು: DK ಶಿವಕುಮಾರ್

ಪಂಚನನ್ ಬರ್ಮಾ ಬಂಗಾಳದ ರಾಜಬಂಶಿ ನಾಯಕ ಮತ್ತು ಸಮಾಜ ಸುಧಾರಕರಾಗಿದ್ದರು. ಸಾಮಾಜಿಕ ಸುಧಾರಣೆಗಳಿಗೆ, ವಿಶೇಷವಾಗಿ ಅಂಚಿನಲ್ಲಿರುವ ಕೋಚ್ ರಾಜ್‌ಬೊಂಗ್ಶಿ ಮತ್ತು ರೈತ ಸಮುದಾಯಗಳ ಉನ್ನತಿ ಮತ್ತು ಮಹಿಳಾ ಸಬಲೀಕರಣಕ್ಕೆ ಅವರು ನೀಡಿದ ಕೊಡುಗೆಗಳನ್ನು ಗೌರವಿಸಲು ಅವರ ಜನ್ಮ ವಾರ್ಷಿಕೋತ್ಸವವನ್ನು(ಫೆ.14) ಆಚರಿಸಲಾಗುತ್ತದೆ.(ಏಜೆನ್ಸೀಸ್​)

ಮಹಾಕುಂಭಮೇಳದಲ್ಲಿ ಹೊಳೆದ ಐಡಿಯಾ; ಚಾಹ ಮಾರಿ ದಿನಕ್ಕೆ 5 ಸಾವಿರ ಲಾಭಗಳಿಸಿದ ಯುವಕ!: ಇತನ ಕಾಯಕಕ್ಕೆ ನೆಟ್ಟಿಗರು ಫಿದಾ | Mahakumbh Mela

Share This Article

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…

ಎಷ್ಟೇ ನೀರು ಕುಡಿದ್ರೂ ನಿಮಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿದೆಯೇ? ಈ ಮನೆಮದ್ದು ಟ್ರೈ ಮಾಡಿ Hiccups

Hiccups : ಬಿಕ್ಕಳಿಕೆ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಪ್ರಾರಂಭವಾಗುತ್ತದೆ ಗಬಗಬನೆ…

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…