

ಕಾಲ ಬದಲಾದಂತೆ ಸೌದೆ ಒಲೆಗೆ ಗುಡ್ಬೈ ಹೇಳಿ ಇಂದು ಅಡುಗೆ ಮಾಡಲು ಗ್ಯಾಸ್ ಸಿಲಿಂಡರ್ ಮೇಲೆಯೇ ಹೆಚ್ಚು ಅವಲಂಭಿತರಾಗಿದ್ದೇವೆ. ನಗರದಲ್ಲಿ ಮಾತ್ರವಲ್ಲ ಗ್ರಾಮೀಣ ಪ್ರದೇಶದಲ್ಲೂ ಈಗ ಎಲ್ಲೇ ನೋಡಿದರೂ ಗ್ಯಾಸ್ ಸಿಲಿಂಡರ್ ಬಳಕೆ ಅಷ್ಟರಮಟ್ಟಿಗೆ ಸಾಮಾನ್ಯವಾಗಿಬಿಟ್ಟಿದೆ. ಗ್ಯಾಸ್ ಸಿಲಿಂಡರ್ ಬಳಸುತ್ತಿರುವವರು ಕೆಲವೊಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳಿತು. ಹಾಗಾದರೆ ಗ್ಯಾಸ್ ಸಿಲಿಂಡರ್ ಹೆಚ್ಚು ದಿನ ಬಾಳಿಕೆ ಬರಬೇಕು ಎಂದರೆ ಏನು ಮಾಡಬೇಕು ಎಂಬುದನ್ನು ಇಲ್ಲಿ ನೀಡಲಾಗಿದೆ.
ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆಯುವಾಗ ಸರಿಯಾದ ಡಿಲರ್ಸ್ಗಳನ್ನು ಸಂಪರ್ಕಿಸುವುದು ಉತ್ತಮ. ನಿಮ್ಮ ಮನೆಗೆ ಸಿಲಿಂಡರ್ ಡಿಲವರಿ ಆದಾಗ ಕಂಪನಿ ಸೀಲ್ ಸರಿಯಾಗಿ ಇದೆಯೇ, ಇಲ್ಲವೇ ಅನ್ನೋದನ್ನು ದೃಢಪಡಿಸಿಕೊಳ್ಳಿ. ಒಂದುವೇಳೆ ಸೀಲ್ ಇಲ್ಲದಿದ್ದರೆ ಆ ಸಿಲಿಂಡರ್ ಅನ್ನು ಬಳಸಬೇಡಿ. ಅದರ ಜತೆಗೆ ಸಿಲಿಂಡರ್ ಮೇಲೆ ದಿನಾಂಕವನ್ನು ಖಚಿತಪಡಿಸಿಕೊಳ್ಳಿ. A ಎಂದರೆ ಜನವರಿಯಿಂದ ಮಾರ್ಚ್ವರೆಗೆ, B ಎಂದರೆ ಏಪ್ರಿಲ್ನಿಂದ ಜೂನ್ವರೆಗೆ, C ಎಂದರೆ ಜುಲೈನಿಂದ ಸೆಪ್ಟೆಂಬರ್ವರೆಗೆ ಮತ್ತು D ಅಂದರೆ ಅಕ್ಟೋಬರ್ನಿಂದ ಡಿಸೆಂಬರ್ವರೆಗೆ ಎಂದರ್ಥ.
ಅಡುಗೆ ಮಾಡುವಾಗ ಈ ಟಿಪ್ಸ್ ಫಾಲೋ ಮಾಡಿ:
ನೀವು ಸಿಲಿಂಡರ್ ಬಳಸುವಾಗ ಒಂದುವೇಳೆ ಅವಘಡ ಸಂಭವಿಸಿದರೆ ಕೂಡಲೇ ರೆಗ್ಯೂಲೆಟರ್ ಅನ್ನು ಆಫ್ ಮಾಡಿ. ಬಾಗಿಲು ಹಾಗೂ ಕಿಟಕಿಗಳನ್ನು ಪೂರ್ತಿಯಾಗಿ ತೆಗೆಯಿರಿ. ಅಗ್ನಿ ಅವಘಕ್ಕೆ ಕಾರಣವಾಗುವ ವಸ್ತುಗಳನ್ನ ಬಳಸಬೇಡಿ. ಉದಾಹರಣೆಗೆ ಬೆಂಕಿ ಕಡ್ಡಿ ಹಚ್ಚಬೇಡಿ ಮತ್ತು ಮನೆಯಲ್ಲಿರುವ ಎಲ್ಲಾ ಕರೆಂಟ್ ಸ್ವಿಚ್ಗಳನ್ನು ಆಫ್ ಮಾಡಿ. ಈ ಟಿಪ್ಸ್ಗಳನ್ನು ಪಾಲಿಸುವುದರಿಂದ ಬೆಂಕಿ ಅನಾಹುತ ಸಂಭವಿಸಿದ ಸಮಯದಲ್ಲಿ ಪ್ರಾಣ ಹಾನಿಯನ್ನು ತಪ್ಪಿಸಬಹುದು.