ಸಿಯಾಟಿಕಾ ನೋವಿನಿಂದ ಬಳಲುತ್ತಿದ್ದೀರಾ; ಈ ಯೋಗಾಸನ ಮಾಡಿದ್ರೆ ಕ್ಷಣಾರ್ಧದಲ್ಲಿ ಸಿಗಲಿದೆ ರಿಲೀಫ್​​

Untitled-design-2024-08-13T190403.472
Published on

ಸಿಯಾಟಿಕಾ ನೋವು ಜೀವನದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಸಿಯಾಟಿಕಾ ಎನ್ನುವುದು ಸಿಯಾಟಿಕ್​​ ನರಕ್ಕೆ ಉಂಟುಮಾಡುವ ನೋವು. ಸಿಯಾಟಿಕ್​ ಎಂದರೆ ನಮ್ಮ ದೇಹದಲ್ಲಿರುವ ಅತ್ಯಂತ ಉದ್ದವಾದ ಹಾಗೂ ದಪ್ಪವಾದ ನರವಾಗಿದೆ. ಈ ನರವು ದೇಹದ ಹಿಂಬದಿಯಲ್ಲಿ ಸೊಂಟದಿಂದ ಕಾಲಿನವರೆಗೆ ಇರುತ್ತದೆ. ಸಿಯಾಟಿಕಾ ನೋವಿನ ಜತೆಗೆ ಬೆನ್ನು, ಕಾಲಿನಲ್ಲಿ ಜುಮ್ಮೆನ್ನಿಸುವ ಅಥವಾ ಮರಗಟ್ಟುವಿಕೆ ಅನುಭವವನ್ನು ಉಂಟುಮಾಡುತ್ತದೆ. ಈ ನೋವು ಕಾಣಿಸಿಕೊಂಡರೆ ನಡೆಯಲು, ಕುಳಿತುಕೊಳ್ಳಲು, ನಿಂತುಕೊಳ್ಳಲು ಕಷ್ಟವಾಗುತ್ತದೆ. ಈ ಸಮಸ್ಯೆ ಹೆಚ್ಚಾಗಿ 30 ರಿಂದ 40 ವರ್ಷದೊಳಗಿನವರಲ್ಲಿ ಕಂಡುಬರುತ್ತದೆ. ಸಿಯಾಟಿಕಾ​​ ನೋವನ್ನು ಕಡಿಮೆ ಮಾಡಿಕೊಳ್ಳಲು ಕೆಲವೊಂದು ಯೋಗಾಸನಗಳು ಸಹಕಾರಿಯಾಗಿವೆ.

ಭುಜಂಗಾಸನ: ಈ ಆಸನವನ್ನು ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ಅವುಗಳಲ್ಲಿ ಒಂದು ಸಿಯಾಟಿಕಾ ನೋವಿಗೆ ಪರಿಹಾರವಾಗಿದೆ. ಏಕೆಂದರೆ ಇದು ಕೆಳಬೆನ್ನು ಮತ್ತು ಬೆನ್ನು ಮೂಳೆಗೆ ಉತ್ತಮ ಹಿಗ್ಗುವಿಕೆಯನ್ನು ನೀಡುತ್ತದೆ.

ಶಲಭಾಸನ: ಶಲಭಾಸನವು ಕೆಳ ಬೆನ್ನಿನ ಭಾಗವನ್ನು ಬಲಪಡಿಸುತ್ತದೆ. ಮತ್ತು ಅಲ್ಲಿ ರಕ್ತ ಪರಿಚಲನೆ ಸರಾವಾಗುವುಂತೆ ಮಾಡುತ್ತದೆ.

ಸೇತುಬಂಧಾಸನ: ಸೇತುಬಂಧಾಸನವು ಸ್ನಾಯುಗಳನ್ನು ಬಲಪಡಿಸುತ್ತದೆ. ಸಿಯಾಟಿಕ್​​ ನೋವಿನ ಪ್ರದೇಶದಲ್ಲಿ ರಕ್ತಪರಿಚಲನೆ ಹೆಚ್ಚಾಗಿ ನೋವು ಕ್ಷಣಾರ್ಧದಲ್ಲಿ ಮಾಯವಾಗುತ್ತದೆ.

ಸರ್ವಾಂಗಾಸನ: ಸರ್ವಾಂಗಾಸನದಲ್ಲಿ ಕಾಲುಗಳನ್ನು ಮೇಲಕ್ಕೆತ್ತಬೇಕು. ಇದರಿಂದಾಗಿ ಕಾಲುಗಳು, ಸೊಂಟದ ಕಡೆಗೆ ರಕ್ತಪರಿಚಲನೆ ವೇಗವಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net