ಹಾಲಿನಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವಷ್ಟು ಜೀವಸತ್ವಗಳು ಮತ್ತು ಖನಿಜಾಂಶಗಳು ಅಪಾರ ಪ್ರಮಾಣದಲ್ಲಿದೆ. ಅದರಲ್ಲೂ ಹಸಿ ಹಾಲನ್ನು ಶತಶತಮಾನಗಳಿಂದ ನೈಸರ್ಗಿಕ ಸೌಂದರ್ಯಕ್ಕಾಗಿ ಬಳಸಲಾಗುತ್ತಿದೆ. ಹಸಿ ಹಾಲನ್ನು ಬಳಸುವುದರಿಂದ ಚರ್ಮವನ್ನು ಆರೋಗ್ಯಕರ ಮತ್ತು ನೈಸರ್ಗಿಕವಾಗಿ ಕಾಂತಿಯುತವಾಗಿ ಇಟ್ಟುಕೊಳ್ಳಬಹುದಾಗಿದೆ. ಹಸಿ ಹಾಲನ್ನು ಬಳಸುವುದರಿಂದ ಆಗುವ ಪ್ರಯೋಜನವನ್ನು ಇಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ನಿಮ್ಮ ಕೂದಲು ದಪ್ಪ-ಉದ್ದವಾಗಿ ಬೆಳೆಯಬೇಕೆ? ಈ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಿ.. ಬದಲಾವಣೆ ನೋಡಿ
ಹಸಿ ಹಾಲನ್ನು ಬಳಸುವುದರಿಂದ ಆಗುವ ಉಪಯೋಗ:
- ಹಸಿ ಹಾಲನ್ನು ನೈಸರ್ಗಿಕ ಕ್ಲೆನ್ಸರ್ ಆಗಿ ಬಳಸಬಹುದು. ಹಸಿ ಹಾಲಿನಲ್ಲಿರುವ ಲ್ಯಾಟಿಕ್ ಆಮ್ಲದ ಅಂಶವು ಡೆಡ್ಸ್ಕಿನ್ ಕೋಶಗಳನ್ನು ತೆಗೆದು ಹಾಕಿ ಚರ್ಮವನ್ನು ಮೃದುವಾಗಿಸುತ್ತದೆ. ಚರ್ಮದ ಮೇಲೆ ಕಾಣುವ ಕಲೆಯನ್ನು ಕ್ರಮೇಣ ಕಡಿಮೆ ಮಾಡುತ್ತದೆ.
- ಹಸಿ ಹಾಲಿನಲ್ಲಿರುವ ನೈಸರ್ಗಿಕ ಕೊಬ್ಬಿನಾಂಶ ಮತ್ತು ಪ್ರೋಟೀನ್ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತವೆ. ಚರ್ಮವನ್ನು ಮೃದುವಾಗಿ ಇರುವಂತೆ ಮಾಡುತ್ತದೆ.
- ಹಸಿ ಹಾಲಿನಲ್ಲಿ ವಿಟಮಿನ್ ಎ, ಡಿ ಮತ್ತು ಬಿ12 ಸಮೃದ್ಧವಾಗಿದೆ. ಹಸಿ ಹಾಲಿನ ನಿಯಮಿತ ಬಳಕೆಯು ನಿಮ್ಮ ಚರ್ಮಕ್ಕೆ ನೈಸರ್ಗಿಕ, ಆರೋಗ್ಯಕರ ಹೊಳಪನ್ನು ನೀಡುತ್ತದೆ. ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ಯಾವುದೆ ಅಡ್ಡ ಪರಿಣಾಮ ಇರುವುದಿಲ್ಲ.
ಬಳಸುವ ವಿಧಾನ:
- ತಣ್ಣನೆಯ ಹಸಿ ಹಾಲಿನಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ನಿಮ್ಮ ಮುಖ ಮತ್ತು ಕುತ್ತಿಗೆ ಭಾಗದ ಮೇಲೆ ಅಪ್ಲೈ ಮಾಡಿ. 10 ನಿಮಿಷಗಳ ಕಾಲ ಅದನ್ನು ಹಾಗೆಯೆ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ನಿಮ್ಮ ಮುಖ ಮತ್ತು ಕುತ್ತಿಗೆ ಭಾಗವನ್ನು ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಚರ್ಮ ತಾಜಾ ಮತ್ತು ಸ್ವಚ್ಛವಾಗಿರುತ್ತದೆ.
- ಹೈಡ್ರೇಟಿಂಗ್ ಫೇಸ್ ಮಾಸ್ಕ್ ಮಾಡಲು ಹಸಿ ಹಾಲಿನಲ್ಲಿ ಒಂದು ಚಮಚ ಜೇನುತುಪ್ಪ ಅಥವಾ ಅರಿಶಿನವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿ. 10 ರಿಂದ 15 ನಿಮಿಷ ಬಿಟ್ಟು ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಹೈಡ್ರೇಟಿಂಗ್ ಫೇಸ್ ಮಾಸ್ಕ್ ಮಾಡಿಕೊಳ್ಳುವುದರಿಂದ ನಿಮ್ಮ ಚರ್ಮವನ್ನು ಸದಾಕಾಲ ಕಾಂತಿಯುತ ಮತ್ತು ಮೃದುವಾಗಿಟ್ಟುಕೊಳ್ಳಬಹುದು.
- ಆಯಿಲ್ ಸ್ಕಿನ್ ಸಮಸ್ಯೆ ಎದುರಿಸುತ್ತಿರುವವರು ಹಸಿ ಹಾಲನ್ನು ಟೋನರ್ ಆಗಿಯೂ ಬಳಸಬಹುದು. ಕಚ್ಚಾ ಹಾಲಿನಲ್ಲಿ ಅದ್ದಿದ ಹತ್ತಿಯನ್ನು ನಿಮ್ಮ ಮುಖದ ಮೇಲೆ 5 ರಿಂದ 10 ನಿಮಿಷಗಳ ಕಾಲ ಹಾಕಿಕೊಳ್ಳಿ. ಬಳಿಕ ತಣ್ಣಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಚರ್ಮ ಮೃದು ಮತ್ತು ಕಾಂತಿಯುತವಾಗಿ ಕಾಣುತ್ತದೆ.
ತಲೆನೋವಿನ ಕಿರಿಕಿರಿ ನಿಮ್ಮನ್ನು ಬಾಧಿಸುತ್ತಿದೆಯೇ? ಈ ಟ್ರಿಕ್ಸ್ ಬಳಸಿ ಕ್ಷಣಾರ್ಧದಲ್ಲಿ ಸಮಸ್ಯೆ ಮಾಯ..