ತಲೆನೋವು ಎಂದು ಹೇಳುವುದು ಸಾಮಾನ್ಯವಾಗಿದೆ. ತಲೆನೋವು ಬಂದ ಸಾಕು.. ಯಾವುದೆ ಕೆಲಸ ಮಾಡಲಾಗದೆ ಕಿರಿಕಿರಿ ಅನುಭವಿಸುತ್ತೇವೆ. ತಲೆನೋವಿನ ಸಮಸ್ಯೆ ಬೇಗನೆ ಸರಿಹೋಗಲಿ ಎಂಬ ಕಾರಣಕ್ಕೆ ಕೆಲವರು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಅತಿಯಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದ್ರೆ ತಲೆನೋವಿನ ಸಮಸ್ಯೆ ಸರಿಪಡಿಸಲು ಮಾತ್ರೆಗಳಿಗೆ ಅವಲಂಭಿತರಾಗದೆ ನೈಸರ್ಗಿಕವಾಗಿ ಕಡಿಮೆ ಮಾಡಿಕೊಳ್ಳುವುದು ಹೇಗೆ?
ಇದನ್ನು ಓದಿ: 30 ನಿಮಿಷ ಸೈಕ್ಲಿಂಗ್ ಮಾಡಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?; ತಪ್ಪದೆ ನೀವು ಈ ಅಭ್ಯಾಸವನ್ನು ರೂಢಿಸಿಕೊಳ್ಳಿ
ಮೊದಲಿಗೆ ತಲೆನೋವು ಬರಲು ಕಾರಣ ಏನೆಂಬುದನ್ನು ತಿಳಿಯಬೇಕು. ಒತ್ತಡ, ಆತಂಕ, ನಿದ್ರೆಯ ಕೊರತೆ, ಸರಿಯಾದ ಸಮಯಕ್ಕೆ ಊಟ ಮಾಡದಿರುವುದು, ಅತಿಯಾದ ಮದ್ಯ ಸೇವನೆ, ದೃಷ್ಟಿ ಮಂದ, ಅಧಿಕ ರಕ್ತದೊತ್ತಡ, ಮೈಗ್ರೇನ್, ಸೈನಸ್, ಶೀತ, ಧೂಮಪಾನ, ಮಾಲಿನ್ಯ ಹೀಗೆ ಹಲವು ಕಾರಣಗಳಿವೆ. ತಲೆನೋವು ಬಂದಾಗ ತಲೆ ಅರ್ಧ ಭಾರವಾದಂತೆ ಅನುಭವವಾಗಿ ಬಳಿಕ ಮೂಗಿನ ಬಳಿ ನೋವು ಶುರುವಾಗಿ ತಲೆಯ ಸುತ್ತಲೂ ಹರಡುತ್ತದೆ. ಈ ತಲೆನೋವಿನ ಹಿಂಸೆಯನ್ನು ಕ್ಷಣಾರ್ಧದಲ್ಲಿ ಕಡಿಮೆ ಮಾಡಿಕೊಳ್ಳುವಂತಹ ಸಿಂಪಲ್ ಟಿಪ್ಸ್ ಅನ್ನು ಇಲ್ಲಿ ನೀಡಲಾಗಿದೆ.
- ದೇಹದ ನಿರ್ಜಲೀಕರಣವೂ ತಲೆನೋವಿಗೆ ಕಾರಣವಾಗಬಹುದು. ಆದ್ದರಿಂದ ತಲೆನೋವಿನ ಅನುಭವವಾಗುತ್ತಿದ್ದಂತೆ ಸಮಸ್ಯೆಯನ್ನು ಕಡಿಮೆ ಮಾಡಲು ನೀರನ್ನು ಕುಡಿಯಿರಿ. ಮನೆಯಲ್ಲೇ ಇದ್ದರೆ ಶುಂಠಿ ಚಹಾ ಮತ್ತು ನಿಂಬೆ ಚಹಾವನ್ನು ಕುಡಿಯಬಹುದು.
- ತಲೆನೋವು ಬಂದಾಗ ಕೆಲವರು ಚೂಯಿಂಗ್ ಗಮ್ ಅನ್ನು ಅಗಿಯುತ್ತಾರೆ. ಇದು ದವಡೆಯ ಜಾಗದಲ್ಲಿ ಮತ್ತು ಕೆನ್ನೆಯ ಒಳಭಾಗದಲ್ಲಿ ನೋವನ್ನು ಉಂಟುಮಾಡುತ್ತದೆ. ಇದರಿಂದ ತಲೆನೋವು ಕಡಿಮೆಯಾಗುತ್ತದೆ.
- ಕೂದಲನ್ನು ಬಿಗಿಯಾಗಿ ಕಟ್ಟುವುದರಿಂದಲೂ ತಲೆನೋವು ಬರುತ್ತದೆ. ಆದ್ದರಿಂದ ಕೂದಲನ್ನು ಹೆಣೆಯುವಾಗ ಸಡಿಲವಾಗಿರಲಿ. ಜತೆಗೆ ನೆತ್ತಿಯ ಮೇಲೆ ನಿಧಾನವಾಗಿ ಮಸಾಜ್ ಮಾಡಿ. ಇದು ವಿಶ್ರಾಂತಿ ನೀಡುವುದರ ಜತೆಗೆ ತಲೆನೋವನ್ನು ಕಡಿಮೆ ಮಾಡುತ್ತದೆ.
- ಬಲವಾದ ಸೂರ್ಯನ ಕಿರಣಗಳು ನಮ್ಮ ತಲೆನೋವಿಗೆ ಕಾರಣವಾಗಿರಬಹುದು. ಆದ್ದರಿಂದ ಬೆಳಗ್ಗೆ 9 ಗಂಟೆಯ ನಂತರ ಹೊರಗಡೆ ಓಡಾಡುವಾಗ ಸ್ವಲ್ಪ ಎಚ್ಚರದಿಂದಿರಿ.
- ಹಣೆಯ ಮತ್ತು ಕುತ್ತಿಗೆಯ ಮೇಲೆ ಮೃದುವಾದ ಮಸಾಜ್ ಮಾಡುವುದರಿಂದ ಒತ್ತಡದಿಂದ ಬರುವ ತಲೆನೋವು ಕಡಿಮೆ ಆಗುತ್ತದೆ. ಹುಬ್ಬುಗಳು ಮತ್ತು ಹಣೆಗೆ ಸಾರಭೂತ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಪುದೀನಾ, ತುಳಸಿ ಮತ್ತು ಲ್ಯಾವೆಂಡರ್ ಎಣ್ಣೆಗಳು ಸಹ ಇದಕ್ಕೆ ಸಹಾಯ ಮಾಡುತ್ತವೆ.
- ತಲೆನೋವು ಬಂದಾಗ 1-2 ಗಂಟೆಗಳ ಕಾಲ ಕತ್ತಲೆ ಕೋಣೆಯಲ್ಲಿ ನಿದ್ರೆ ಮಾಡಿ. ಮೊಬೈಲ್ ಮತ್ತು ಗ್ಯಾಜೆಟ್‌ಗಳ ಬಳಕೆಯನ್ನು ಕಡಿಮೆ ಮಾಡಿ ವಿಶ್ರಾಂತಿ ತೆಗೆದುಕೊಳ್ಳಿ.
ಈ ಟೇಸ್ಟಿ ಟಿಫನ್ ಸೇವಿಸಿದರೆ ಸುಲಭವಾಗಿ ಕರಗಿಸಬಹುದು ಬೊಜ್ಜು; ಹೆಲ್ತಿ ಟಿಪ್ಸ್ ನಿಮಗಾಗಿ