ಸುಂದರವಾದ, ಉದ್ದವಾದ, ದಪ್ಪ ಕೂದಲು ಬೇಕೆಂಬುದು ಎಲ್ಲರ ಇಷ್ಟವಾಗಿರುತ್ತದೆ. ಆದರೆ ನಮ್ಮಲ್ಲಿ ಹೆಚ್ಚಿನವರು ಕೂದಲು ಉದುರುವಿಕೆ, ತೇಳುವಾಗಿ ಇರುವುದು, ಉದುರಿದ ಕೂದಲು ಬೆಳೆಯದಿರುವುದು ಹೀಗೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ನಿಮ್ಮ ಕೂದಲಿನ ಬೆಳವಣಿಗೆ ನಿಲ್ಲದೆ, ಸೊಂಪಾಗಿ-ದಪ್ಪವಾಗಿ ಬೆಳೆಯುವಂತೆ ಮಾಡುವುದು ನಿಮ್ಮ ಕೈಯಲ್ಲಿದೆ. ಅರೆ… ಇದೆಲ್ಲಾ ಹೇಗೆ ಸಾಧ್ಯ ಎಂದು ಯೋಚಿಸಬೇಡಿ. ವಿಟಮಿನ್ ಮತ್ತು ಖನಿಜಾಂಶವಿರುವ ಆಹಾರ ಸೇವೆನೆಯಿಂದ ಕೂದಲು ಉದ್ದವಾಗಿ ಹಾಗೂ ದಪ್ಪವಾಗಿ ಬೆಳೆಯುತ್ತದೆ. ಹಾಗಾದ್ರೆ ನಮ್ಮ ಆಹಾರಪದ್ಧತಿಯಲ್ಲಿ ರೂಢಿಸಿಕೊಳ್ಳಬೇಕಾದ ಅಂಶ ಏನೆಂಬುದನ್ನು ಇಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ತಲೆನೋವಿನ ಕಿರಿಕಿರಿ ನಿಮ್ಮನ್ನು ಬಾಧಿಸುತ್ತಿದೆಯೇ? ಈ ಟ್ರಿಕ್ಸ್ ಬಳಸಿ ಕ್ಷಣಾರ್ಧದಲ್ಲಿ ಸಮಸ್ಯೆ ಮಾಯ
- ಮೊಟ್ಟೆ: ಮೊಟ್ಟೆಯು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುವ ವಿವಿಧ ಪ್ರೋಟೀನ್‌ಗಳನ್ನು ಹೊಂದಿರುತ್ತವೆ. ಕೂದಲು ದಪ್ಪವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಮೊಟ್ಟೆಯಲ್ಲಿ ಕಬ್ಬಿಣದ ಅಂಶವಿದ್ದು ಅದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದ್ದರಿಂದ ಕೂದಲು ಬಲವಾಗಿರುತ್ತದೆ.
- ಪಾಲಕ್: ಪಾಲಕ್ನಲ್ಲಿ ಕಬ್ಬಿಣದ ಅಂಶವು ಹೇರಳವಾಗಿರುತ್ತದೆ. ದೇಹದಲ್ಲಿ ಕಬ್ಬಿಣಾಂಶದ ಕೊರತೆ ಇದ್ದರೆ ಕೂದಲು ಉದುರಲು ಪ್ರಾರಂಭಿಸುತ್ತದೆ. ಆದ್ದರಿಂದ ನಿಮ್ಮ ಆಹಾರಕ್ರಮದಲ್ಲಿ ಪಾಲಕ್ ಸೊಪ್ಪಿನ ಬಳಕೆಯನ್ನು ಹೆಚ್ಚಿಸಿ.
- ವಿಟಮಿನ್ ಸಿ-ಸಿಟ್ರಸ್ ಹಣ್ಣುಗಳು: ನಿಂಬೆಹಣ್ಣು, ಕಿತ್ತಳೆ ಮತ್ತು ದ್ರಾಕ್ಷಿಹಣ್ಣುಗಳು ವಿಟಮಿನ್ ‘ಸಿ’ಯ ಸಮೃದ್ಧ ಮೂಲವಾಗಿದೆ. ವಿಟಮಿನ್ ಸಿ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿ ಇರುವ ಸಿಟ್ರಸ್ ಹಣ್ಣುಗಳು ಕೂದಲಿನ ಬೆಳವಣಿಗೆಗೆ ಸಹಕಾರಿ.
- ಡ್ರೈಫ್ರೂಟ್ಸ್: ಕೂದಲಿನ ಉತ್ತಮ ಬೆಳವಣಿಗೆಗೆ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಸೇವಿಸುವುದು ಒಳ್ಳೆಯದು. ಬಾದಾಮಿ ಮತ್ತು ವಾಲ್‌ನಟ್‌ಗಳಲ್ಲಿ ಒಮೆಗಾ-3 ಸಮೃದ್ಧವಾಗಿದೆ.
- ಸೋಯಾಬೀನ್: ಸೋಯಾಬೀನ್ ವಿಟಮಿನ್ B2, ಮೆಗ್ನೀಸಿಯಮ್ ಮತ್ತು ಕಬ್ಬಿಣಾಂಶದ ಉತ್ತಮ ಮೂಲವಾಗಿದೆ. ಇದು ಡ್ರೈ ಮತ್ತು ಡ್ಯಾಮೆಜ್ ಹೇರ್ಗೆ ಉತ್ತಮ ರಾಮಬಾಣ. ಕೂದಲು ಹೆಲ್ತಿಯಾಗಿ ಬೆಳೆಯಲು ಸೋಯಾಬೀನ್ ಮತ್ತು ಅದರ ಉತ್ಪನ್ನಗಳನ್ನು ಸೇವಿಸುವುದು ಉತ್ತಮ.
- ಕ್ಯಾರೆಟ್: ಕ್ಯಾರೆಟ್ ವಿಟಮಿನ್ ಎ ಯ ಸಮೃದ್ಧ ಮೂಲವಾಗಿದೆ. ಇದರಿಂದ ನಿಮ್ಮ ಕೂದಲಿಗೆ ಹಲವು ಪ್ರಯೋಜನವಿದೆ. ದೇಹದ ಜೀವಕೋಶಗಳ ಬೆಳವಣಿಗೆಗೆ ವಿಟಮಿನ್ ಎ ಅತ್ಯಗತ್ಯ. ಇದು ನೆತ್ತಿಯಲ್ಲಿ ಮೇದೋಗ್ರಂಥಿಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಕೂದಲು ವೇಗವಾಗಿ ಬೆಳೆಯಲು ನಿಮ್ಮ ಆಹಾರದಲ್ಲಿ ಕ್ಯಾರೆಟ್ ಅನ್ನು ಹೆಚ್ಚಾಗಿ ಬಳಸಿ.
https://www.vijayavani.net/these-are-the-health-benefits-of-ride-a-cycl