145 ಕೆಜಿ ತೂಕ, ಶೇ. 55ರಷ್ಟು ಕೊಬ್ಬು... ಈತನ ತೂಕ ಇಳಿಕೆಯ ಪ್ರಯಾಣವೇ ಎಲ್ಲರಿಗೂ ಸ್ಫೂರ್ತಿ! Weight loss

Weight loss
Published on

Weight loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ ಆಹಾರಗಳನ್ನು ತ್ಯಾಗ ಮಾಡಬೇಕು. ಅಲ್ಲದೆ, ಸಾಕಷ್ಟು ಸವಾಲುಗಳನ್ನೂ ಎದುರಿಸಬೇಕು.

ಒಂದೇ ಕಡೆ ಕುಳಿತು ಮಾಡುವ ಕೆಲಸಗಳಿಂದಾಗಿ ನೂರರಲ್ಲಿ ತೊಂಬತ್ತೊಂಬತ್ತು ಜನರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಿನ್ನುವುದರಲ್ಲಿ ನಾವು ಮಾಡುವ ಮಿಸ್ಟೇಕ್ಸ್​ ಕೂಡ ಅಧಿಕ ತೂಕದ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದರೆ, ಉತ್ತಮ ಆಹಾರ ಪದ್ಧತಿಯಿಂದ ಮಾತ್ರ ತೂಕವನ್ನು ನಿಯಂತ್ರಣ ಮಾಡಬಹುದು ಎಂದು ತಜ್ಞರು ಯಾವಾಗಲೂ ಹೇಳುತ್ತಲೇ ಇರುತ್ತಾರೆ.

ಕೆಲವು ಪ್ರಸಿದ್ಧ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ತೂಕ ಇಳಿಕೆ ಮಾಡುವ ಮೂಲಕ ಅನೇಕರಿಗೆ ಸ್ಫೂರ್ತಿ ನೀಡುತ್ತಿದ್ದಾರೆ. ಇತ್ತೀಚೆಗೆ ಫಿಟ್‌ನೆಸ್ ಉತ್ಸಾಹಿಯೊಬ್ಬರು ಅದೇ ವರ್ಗಕ್ಕೆ ಸೇರಿದ್ದಾರೆ. ಅವರ ತೂಕ ಇಳಿಸುವ ಪ್ರಯಾಣವನ್ನು ನೋಡಿದರೆ, ಖಂಡಿತವಾಗಿಯೂ ನೀವು ಮೂಕವಿಸ್ಮಿತರಾಗುತ್ತೀರಿ. ಅದು ಹೇಗೆ ಅಷ್ಟೊಂದು ತೂಕ ಇಳಿಸಿಕೊಂಡರು ಎಂದು ನೀವು ಆಶ್ಚರ್ಯ ಪಡುತ್ತೀರಿ.

ಇನ್​ಸ್ಟಾಗ್ರಾಂ ಬಳಕೆದಾರ ಅಜರ್ ಹಸನ್ ತಮ್ಮ ಅದ್ಭುತ ತೂಕ ಇಳಿಸುವ ಪ್ರಯಾಣದ ಮೂಲಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಜನಪ್ರಿಯ ಇಂಗ್ಲಿಷ್ ಚಾನೆಲ್ MTV ರೋಡೀಸ್ ಸೀಸನ್ 20ರಲ್ಲಿ ಕಾಣಿಸಿಕೊಂಡಿದ್ದ ಫಿಟ್‌ನೆಸ್ ಉತ್ಸಾಹಿ, ಅಜರ್​ ಹಸನ್​, ತಮ್ಮ ತೂಕ ಇಳಿಸುವ ಪ್ರಯಾಣದ ಬಗ್ಗೆ ವಿಡಿಯೋ ಹಂಚಿಕೊಂಡ ತಕ್ಷಣ ಎಲ್ಲರ ಗಮನ ಸೆಳೆದಿದ್ದಾರೆ. ಅವರ ತೂಕ ಇಳಿಕೆ ಪ್ರಯಾಣ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಮಂದಿಗೆ ಸ್ಫೂರ್ತಿ ನೀಡಿದೆ.

ಕಡಿಮೆ ಸಮಯದಲ್ಲಿ ಸಾಕಷ್ಟು ಕೆಜಿ ತೂಕ ಇಳಿಸಿಕೊಳ್ಳುವುದರ ಹಿಂದಿರುವ ಹಸನ್ ಅವರ ಸಮರ್ಪಣೆಯನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಹಸನ್ ಅವರು ಮೊದಲು 145 ಕೆಜಿ ತೂಕವಿದ್ದರು ಎಂಬುದನ್ನು ವಿಡಿಯೋ ತೋರಿಸಿದೆ. ಅವರ ದೇಹದಲ್ಲಿ ಕೊಬ್ಬಿನಾಂಶ ಶೇ. 55% ರಷ್ಟಿತ್ತು. ತಮ್ಮ ತೂಕ ಇಳಿಸುವ ಪ್ರಯಾಣದಿಂದ ಸುಮಾರು 9%ಕ್ಕೆ ಇಳಿಸಿದ್ದಾರೆ. ಸದ್ಯ ಹಸನ್​ ಅವರು 75 ಕೆಜಿ ತೂಕ ಹೊಂದಿದ್ದಾರೆ.

ತೂಕ ಇಳಿಸುವ ಈ ಪ್ರಯಾಣದಲ್ಲಿ ತಮ್ಮ ತಂದೆಯೇ ತಮಗೆ ಸ್ಫೂರ್ತಿ ಎಂದು ಹಸನ್​ ಹೇಳಿದ್ದಾರೆ. ತೂಕ ಇಳಿಸುತ್ತೇನೆಂದು ನನ್ನ ತಂದೆಗೆ ಸವಾಲು ಹಾಕಿದ್ದೆ. ಏಳು ತಿಂಗಳಲ್ಲಿ ಎಲ್ಲ ಕೊಬ್ಬನ್ನು ಕಳೆದುಕೊಂಡು ಬರೋಬ್ಬರಿ 55 ಕೆಜಿ ತೂಕ ಇಳಿಸಿಕೊಂಡಿದ್ದೇನೆ. ಆದರೆ, ನನ್ನ ಯಶಸ್ವಿ ತೂಕ ಇಳಿಸುವ ಪ್ರಯಾಣವನ್ನು ನೋಡುವ ಮೊದಲೇ ತಮ್ಮ ತಂದೆ ನಿಧನರಾದರು ಎಂದು ಹಸನ್​ ಭಾವುಕರಾದರು.

ಅಧಿಕ ತೂಕದಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅರಿತುಕೊಂಡ ಹಿನ್ನೆಲೆಯಲ್ಲಿಯೇ ಹಸನ್​ ಅವರು ತುಂಬಾ ತೂಕ ಇಳಿಸಿಕೊಂಡು ಸ್ಲಿಮ್ ಆಗಿದ್ದಾರೆ. ಹಸನ್​ ಅವರ ತೂಕ ಇಳಿಸುವ ಪ್ರಯಾಣವನ್ನು ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net