

Medicine: ಇಂದಿನ ದಿನಗಳಲ್ಲಿ ಹವಮಾನ ಬದಲಾವಣೆಯಿಂದಾಗಿ ಮಕ್ಕಳಲ್ಲಿ ವಿಪರೀತ ಕೆಮ್ಮು, ಶೀತ, ಜ್ವರದಂತಹ ಕಾಯಿಲೆಗಳು ಬರುತ್ತಿವೆ. ಹಾಗೇ ಇವುಗಳಿಂದ ಮಕ್ಕಳು ಬಳಲುತ್ತಿರುತ್ತಾರೆ. ಹಾಗಾಗಿ ಈ ರೀತಿಯ ಸಮಸ್ಯೆ ಇರುವಂತಹವರು ಈ ಮನೆಮದ್ದುಗಳನ್ನು ಬಳಸಿ..
ಇದನ್ನೂ ಓದಿ: ಮರಳು ಅಕ್ರಮ ಸಾಗಿಸಿದಾತನಿಗೆ ನ್ಯಾಯಾಂಗ ಬಂಧನ
ಒಂದು ಹಂಚನ್ನು ಕಾಯಿಸಿ ಅದರ ಮೇಲೆ 5 ದೊಡ್ಡಪತ್ರೆ, 1 ವೀಳ್ಯದೆಲೆ, 10 ತುಳಸಿ ಎಲೆಗಳನ್ನು ಬೆಚ್ಚಗೆ ಮಾಡಿ ನಂತರ ಅದರಲ್ಲಿ ಬರುವ ರಸವನ್ನು ತೆಗೆದು ಮಕ್ಕಳಿಗೆ ಕುಡಿಸಿರಿ. ವಾರದಲ್ಲಿ 3 ಬಾರಿ ಹೀಗೆ ಮಾಡುವುದರಿಂದ ನಿಮ್ಮ ಮಕ್ಕಳ ಕೆಮ್ಮು ಕಡಿಮೆಯಾಗುತ್ತದೆ.
1 ಚಮಚ ಜೇನುತುಪ್ಪಕ್ಕೆ ಸ್ವಲ್ಪ ಬೆಚ್ಚಗಿನ ನೀರು ಅಥವಾ ಶುಂಠಿ ರಸವನ್ನು ಸೇರಿಸಿ ಇದನ್ನು ದಿನಕ್ಕೆ 1 ಬಾರಿ ನಿಮ್ಮ ಮಕ್ಕಳಿಗೆ ಕುಡಿಸಿ ಇದು ನಿಮ್ಮ ಮಕ್ಕಳ ಕೆಮ್ಮನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
ಗಮನಿಸಿ: 1 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೊಡಬೇಡಿ.
10 ತುಳಸಿ ಎಲೆಗಳನ್ನು ಶುಂಠಿಯ ರಸದೊಂದಿಗೆ ಬೆರೆಸಿ, ಸ್ವಲ್ಪ ಜೇನುತುಪ್ಪ ಸೇರಿಸಿ ಕೊಡಿ. ಇದು ಗಂಟಲಿನ ಉರಿಯನ್ನು ಕಡಿಮೆ ಮಾಡಿ, ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ಒಂದು ಬೌಲ್ ಬೆಚ್ಚಗಿನ ಬಿಸಿನೀರಿಗೆ ಸ್ವಲ್ಪ ತುಳಸಿ ಎಲೆ ಹಾಕಿ ಅದರ ಆವಿಯನ್ನು ತೆಗೆದುಕೊಳ್ಳುವಂತೆ ನೋಡಿಕೊಳ್ಳಿ. ಇದು ಕೆಮ್ಮಿಗೆ ಇರುವ ಶ್ಲೇಷವನ್ನು ಕರಗಿಸುತ್ತದೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ