ಮರಳು ಅಕ್ರಮ ಸಾಗಿಸಿದಾತನಿಗೆ ನ್ಯಾಯಾಂಗ ಬಂಧನ

New Project (8)
Published on

ಬೆಳ್ತಂಗಡಿ: ಮರಳು ಅಕ್ರಮ ಸಾಗಾಟ ಪ್ರಕರಣವೊಂದನ್ನು ವೇಣೂರು ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಧನಕೀರ್ತಿ ಬಂಧಿತ. ಸೆ.2ರಂದು ಕೊಕ್ರಾಡಿ ಬಳಿ ನಾರಾವಿ ವೇಣೂರು ಸಾರ್ವಜನಿಕ ರಸ್ತೆಯಲ್ಲಿ ನಾರಾವಿ ಕಡೆಯಿಂದ ವೇಣೂರು ಕಡೆಗೆ ಬರುತ್ತಿದ್ದ ಗೂಡ್ಸ್ ಮಿನಿ ಟಿಪ್ಪರ್‌ನಲ್ಲಿ ಮರಳು ಸಾಗಾಟ ಮಾಡುತ್ತಿರುವುದನ್ನು ಗಮನಿಸಿದ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಆರೋಪಿತ ಟಿಪ್ಪರ್ ಚಾಲಕನಲ್ಲಿ ಮರಳು ಸಾಗಾಟದ ಬಗ್ಗೆ ದಾಖಲೆ ಪರವಾನಗಿ ಇರಲಿಲ್ಲ. ಅಲ್ಲದೇ ಮರಳನ್ನು ಸುಲ್ಕೇರಿ ಎಂಬಲ್ಲಿ ಹರಿಯುವ ನದಿಯಿಂದ ತುಂಬಿಸಿ ಸಾಗಾಟ ಮಾಡುತ್ತಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net