

Anganwadi: ಮುಂಬೈನ ಅಂಧೇರಿಯ ಅಂಗನವಾಡಿ ಕೇಂದ್ರವೊಂದರಲ್ಲಿ ಮಕ್ಕಳಿಗೆ ನೀಡಲಾದ ಖಿಚಡಿವೊಂದರಲ್ಲಿ ಹುಳಗಳು ಪತ್ತೆಯಾಗಿದ್ದು, ಈ ಆರೋಪದ ಬಗ್ಗೆ ಮಹಾರಾಷ್ಟ್ರದ ಮಾಜಿ ಸಚಿವೆ ವರ್ಷಾ ಗಾಯಕ್ವಾಡ್ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಗ್ರಿಷ್ಮಾ ಮಹಿಳಾ ಮಂಡಲ್ ಒಪ್ಪಂದ ಮಾಡಿಕೊಂಡ ಮಹಿಳಾ ಸ್ವಸಹಾಯ ಗುಂಪು ಪೂರೈಸಿದ ಊಟದಲ್ಲಿ ಹುಳಗಳಿರುವುದನ್ನು ಕಂಡುಕೊಂಡಿದ್ದಾರೆ. ಅದೃಷ್ಟವಶಾತ್ ಮಕ್ಕಳಿಗೆ ಊಟ ಬಡಿಸುವ ಮೊದಲೇ ಸಿಬ್ಬಂದಿ ಗಮನಿಸಿದ್ದು, ಈ ವಿರುದ್ಧ ಅಂಗನವಾಡಿ ನೌಕರರ ಸಂಘವು ಯೋಜನ ಕಚೇರಿಗೆ ದೂರು ನೀಡಿದ್ದಾರೆ.
ಅಂಗನವಾಡಿಯಲ್ಲಿ ಪದೇಪದೇ ಕಳಪೆ ಗುಣಮಟ್ಟದ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವುದು ಆತಂಕದ ವಿಚಾರ. ಇಂತಹ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ. ಈ ರೀತಿಯಾಗಿ ಅಂಗನವಾಡಿಯವರು ಮಕ್ಕಳಿಗೆ ಕಲುಷಿತ ಆಹಾರ ನೀಡಿದರೆ ಅಥವಾ ನಿರ್ಲಕ್ಷ್ಯ ವಹಿಸಿದರೆ, ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಗಾಯಕ್ವಾಡ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಯಾವುದೇ ವೃತ್ತಿಯನ್ನಾದರೂ ಪ್ರೀತಿಯಿಂದ ಮಾಡಬೇಕು
ಈ ಘಟನೆಯನ್ನು ಐಸಿಡಿಎಸ್ ಅಧಿಕಾರಿಗಳು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಇನ್ನು ಯೋಜನಾ ಅಭಿವೃದ್ಧಿ ಅಧೀಕಾರಿ ಅಬ್ದುಲ್ ಚೌಧರಿ ಪ್ರಕರಣದ ಬಗ್ಗೆ ಮಾತನಾಡಿದ್ದು, ಕಳಪೆ ಆಹಾರ ಹೇಗೆ ಸರಬರಾಜು ಆಗಿದೆ ಎಂಬುದುನ್ನು ಪರಿಶೀಲಿಸುತ್ತಿದ್ದೇನೆ. ಹಾಗೂ ಸಂಶೋಧನೆಯ ಆಧಾರದ ಮೇಲೆಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)