

Back pain : ಸಕ್ಕರೆ ಇಂದು ಬಹುತೇಕ ಜನರ ಜೀವನದ ಭಾಗವಾಗಿದೆ. ಸಕ್ಕರೆ ಇಲ್ಲದ ಸಿಹಿ ತಿನಿಸುಗಳೇ ಇಲ್ಲ. ಕಾಫಿ, ಟೀ ಹೀಗೆ ಎಲ್ಲಾ ಕಡೆ ಸಕ್ಕರೆ ಆವರಿಸಿಕೊಂಡಿದೆ. ಆದರೆ, ಇದೇ ಸಕ್ಕರೆ ಆರೋಗ್ಯಕ್ಕೆ ಮಾರಕ ಅನ್ನೋ ಸತ್ಯ ಎಲ್ಲರಿಗೂ ಗೊತ್ತಿದ್ದರು ಕೂಡ ಅದನ್ನು ಬಿಟ್ಟು ಕೊಡುವ ಮನಸ್ಥಿತಿ ಯಾರಿಗೂ ಇಲ್ಲ. ಆದರೆ, ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವ ರೀತಿಯಲ್ಲಿ ಮಧುಮೇಹ ಬಂದ ಬಳಿಕ ಅದನ್ನು ದೂರವಿಡುತ್ತಾರೆ. ಈ ಸಕ್ಕರೆ ಕೇವಲ ಮಧುಮೇಹಕ್ಕೆ ಮಾತ್ರವಲ್ಲ ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಹೀಗಾಗಿ ಸಕ್ಕರೆಯಿಂದ ದೂರವಿದ್ದಷ್ಟು ಒಳ್ಳೆಯದು.
ಅತಿಯಾದರೆ ಅಮೃತವೂ ವಿಷ ಎಂಬತೆ ಸಿಕ್ಕಾಪಟ್ಟೆ ಸಕ್ಕರೆ ಸೇವನೆ ಮಾಡಿದರೆ ಕೇವಲ ಮಧುಮೇಹ ಅಷ್ಟೇ ಅಲ್ಲದೆ ಹೃದಯ ಸಂಬಂಧಿತ ರೋಗಗಳು, ಹಲ್ಲಿನ ಸಮಸ್ಯೆ ಹಾಗೂ ಚರ್ಮದ ಸಮಸ್ಯೆಗಳು ಸೇರಿದಂತೆ ಬೆನ್ನು ನೋವಿಗೂ ಮೂಲವಾಗಹುದು. ಹೌದು, ಸಕ್ಕರೆ ಸಿಹಿಯಾದರು ಕೂಡ ಅದು ನಿಮ್ಮ ದೇಹಕ್ಕೆ ವಿಷದಂತೆ ಕೆಲಸ ಮಾಡುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಬೆನ್ನು ನೋವು ಇರುವವರಿಗೆ ಅತಿಯಾದ ಸಕ್ಕರೆ ಸೇವನೆಯು ಹಾನಿಕಾರಕವಾಗಿದೆ. ಅಧಿಕ ಸಕ್ಕರೆ ಪ್ರಮಾಣವುಳ್ಳ ಆಹಾರವು ದೇಹದ ತೂಕ ಹೆಚ್ಚಾಗಲು ಮತ್ತು ಬೊಜ್ಜು ಉಂಟಾಗಲೂ ಕಾರವಾಗುತ್ತದೆ. ಇದರಿಂದ ಬೆನ್ನುಹುರಿ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡಿ ಬೆನ್ನು ನೋವನ್ನು ಹೆಚ್ಚಿಸುತ್ತದೆ ಎಂದು ನರ ಶಾಸ್ತ್ರತಜ್ಱರು ಎಚ್ಚರಿಸಿದ್ದಾರೆ.
ಅದರಂತೆಯೇ ಅಧಿಕ ಸಕ್ಕರೆ ಸೇವನೆಯಿಂದ ದೇಹದಲ್ಲಿ ದೀರ್ಘಕಾಲದ ಉರಿಯೂತ ಉಂಟಾಗಿ ಸಹಿಸಲಾರದಷ್ಟು ತೀವ್ರ ಬೆನ್ನುನೋವು ಹೆಚ್ಚಿಸುತ್ತದೆ. ಹಾಗೆಯೇ ಇದರಿಂದ ಎರಡು ರೀತಿಯ ಮಧುಮೇಹ ಉಂಟಾಗುವ ಸಾಧ್ಯತೆಯೂ ಕೂಡ ಇದೆ. ಇದರಿಂದ ದೇಹದ ನರಗಳು ಹಾನಿಗೊಳ್ಳಗಾಗಿ ಬೆನ್ನನೋವು ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಡಾ. ವಿಂಟರ್ ಹೈಮರ್ ಎಂಬುವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದರಿಂದ ಕೇವಲ ಬೆನ್ನುಹುರಿ ಮೇಲೆ ಇರುವ ಒತ್ತಡ ಕಡಿಮೆ ಮಾಡುವುದಲ್ಲದೆ, ದೇಹದ ಉರಿಯೂತವನ್ನು ಕಡಿಮೆ ಮಾಡಬಹುದು. ಅಷ್ಟೇ ಅಲ್ಲದೇ ಮೂಳೆ ಸ್ನಾಯುಗಳ ಆರೋಗ್ಯವನ್ನು ಸುಧಾರಿಸಬಹುದು. ಇದರಿಂದ ಬೆನ್ನುನೋವಿನಿಂದ ಬಳಲುತ್ತೀರುವವರ ನೋವಿನ ತೀವ್ರತೆ ಕಡೆಮೆಗೊಳಿಸಿ ಅವರ ಆರೋಗ್ಯ ಸುಧಾರಿಸಬಹುದು.
ಅಂದಹಾಗೆ, ಸಕ್ಕರೆ ತಕ್ಷಣ ಶಕ್ತಿ ಕೊಡುತ್ತದೆ ಎಂಬುವುದು ಎಷ್ಟು ಸತ್ಯವೋ ಅತಿ ಸೇವನೆಯಿಂದ ದೇಹಕ್ಕೆ ಹಾನಿ ಖಚಿತ ಎಂಬುವುದು ಅಷ್ಟೇ ಸತ್ಯವಾಗಿದೆ ಅಂತ ಆರೋಗ್ಯ ತಜ್ಱರು ಎಚ್ಚರಿಸಿದ್ದಾರೆ. ಹೀಗಾಗಿ, ಆರೋಗ್ಯಕರ ಜೀವನಕ್ಕಾಗಿ ಆದಷ್ಟು ಸಕ್ಕರೆಯಿಂದ ದೂರ ಇರಿ. ಸಕ್ಕರೆಯನ್ನು ಸಂಪೂರ್ಣವಾಗಿ ತ್ಯಜಿಸಿ, ಇಲ್ಲವೇ ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಿ. (ಏಜೆನ್ಸೀಸ್)