ಒತ್ತಡದಿಂದ ನಿಮ್ಮ ಹೃದಯ, ಮನಸ್ಸಿನ ಜೊತೆ ಮೂತ್ರಪಿಂಡಗಳು ಸಹ ಹಾನಿಗೊಳಗಾಗುತ್ತವೆಯಂತೆ| kidney

stress
Published on

health tips : ಬದಲಾಗುತ್ತಿರುವ ಜೀವನಶೈಲಿ ಮತ್ತು ಕೆಲಸದ ಒತ್ತಡದಿಂದಾಗಿ ಅತಿ ಹೆಚ್ಚಿನ ಜನರು ಒತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಒತ್ತಡವು ಹೃದಯ, ಮನಸ್ಸು, ಮೆದುಳು, ಜೀರ್ಣಾಂಗ ವ್ಯವಸ್ಥೆ ಸೇರಿದಂತೆ ಮೂತ್ರಪಿಂಡಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಒತ್ತಡವು ರಕ್ತದೊತ್ತಡವನ್ನು ಹೆಚ್ಚಿಸುವ ಮೂಲಕ ಮೂತ್ರಪಿಂಡದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಒತ್ತಡವು ನಿಮ್ಮ ಮೂತ್ರಪಿಂಡಗಳ ಮೇಲೆ ಹಲವು ವಿಧಗಳಲ್ಲಿ ಪರಿಣಾಮ ಬೀರುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುವ ಮೂಲಕ, ಉರಿಯೂತವನ್ನು ಉಂಟುಮಾಡುವ ಮೂಲಕ ಮತ್ತು ಹಾರ್ಮೋನುಗಳ ಸಮತೋಲನವನ್ನು ತೊಂದರೆಗೊಳಿಸುವ ಮೂಲಕ ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಿದ್ರೆ ಒತ್ತಡದಿಂದ ಮೂತ್ರಪಿಂಡದ ಸಮಸ್ಯೆ ಹೇಗೆ ಉಂಟಾಗುತ್ತದೆ ಎಂಬುದನ್ನು ತಿಳಿಯೋಣ.

ನಿದ್ರೆಯ ಕೊರತೆ : ಒತ್ತಡವು ನಿದ್ರೆಯ ಗುಣಮಟ್ಟವನ್ನು ಕಡಿಮೆ ಮಾಡಬಹುದು, ಇದು ರಕ್ತದೊತ್ತಡ ಮತ್ತು ಒತ್ತಡ ಹಾರ್ಮೋನ್‌ಗಳನ್ನು ಇನ್ನಷ್ಟು ಹೆಚ್ಚಿಸಿ ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗಬಹುದು.

ಹಾರ್ಮೋನ್‌ಗಳ ಪರಿಣಾಮ: ಒತ್ತಡದ ಸಂದರ್ಭದಲ್ಲಿ ದೇಹವು ಕಾರ್ಟಿಸಾಲ್ ಮತ್ತು ಆಡ್ರಿನಾಲಿನ್‌ನಂತಹ ಒತ್ತಡ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್‌ಗಳು ರಕ್ತದೊತ್ತಡವನ್ನು ಹೆಚ್ಚಿಸಬಹುದು, ಇದು ದೀರ್ಘಕಾಲದಲ್ಲಿ ಮೂತ್ರಪಿಂಡಗಳಿಗೆ ಹಾನಿಯಾಗಬಹುದು.

ಉರಿಯೂತ : ದೀರ್ಘಕಾಲದ ಒತ್ತಡವು ನಿಮ್ಮ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಮತ್ತು ಉರಿಯೂತವನ್ನು ಹೆಚ್ಚಿಸುತ್ತದೆ. ಮೂತ್ರಪಿಂಡದ ಸೋಂಕುಗಳು ಇತರ ಸಮಸ್ಯೆಗಳ ಅಪಾಯಕ್ಕೂ ಕಾರಣವಾಗಿದೆ.

ಅನಾರೋಗ್ಯಕರ ಅಭ್ಯಾಸಗಳು : ಒತ್ತಡವು ಹೆಚ್ಚಾಗಿ ಅನಾರೋಗ್ಯಕರ ಆಹಾರ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಕಳಪೆ ಜೀವನಶೈಲಿ ಅಭ್ಯಾಸಗಳಿಗೆ ಕಾರಣವಾಗುತ್ತದೆ. ಇದು ಮೂತ್ರಪಿಂಡದ ಕಾರ್ಯಕ್ಕೆ ಹಾನಿ ಉಂಟು ಮಾಡುತ್ತದೆ.

ರಕ್ತದೊತ್ತಡ ಹೆಚ್ಚಾಗುವುದು: ಕಾರ್ಟಿಸೋಲ್ ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇವೆರಡೂ ಮೂತ್ರಪಿಂಡದ ಕಾಯಿಲೆಗೆ ಪ್ರಮುಖ ಅಪಾಯಕಾರಿ ಅಂಶಗಳಾಗಿವೆ.

ಒತ್ತಡದ ಎಚ್ಚರಿಕೆ ಲಕ್ಷಣಗಳು:

ಕಣಕಾಲುಗಳು, ಪಾದಗಳು ಅಥವಾ ಕೈಗಳಲ್ಲಿ ಊತ

ಆಯಾಸ ಮತ್ತು ಏಕಾಗ್ರತೆಯ ಕೊರತೆ

ಅಧಿಕ ರಕ್ತದೊತ್ತಡ ಮತ್ತು ಆಗಾಗ್ಗೆ ತಲೆನೋವು

ಮೂತ್ರದಲ್ಲಿ ರಕ್ತ ಅಥವಾ ನೊರೆ ಇರುವ ಮೂತ್ರ

ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವುದು

(ಏಜೆನ್ಸೀಸ್)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು ಮತ್ತು ವಿವಿಧ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net